ಸಹಕಾರ ತತ್ವ ಪ್ರಜಾಪ್ರಭುತ್ವ ಭದ್ರಬುನಾದಿ

The principle of cooperation strengthens democracy.
ಮುಧೋಳ ನಗರದ ಹೇಮರಡ್ಡಿ ಮಲ್ಲಮ್ಮ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಂಡಿದ್ದ 71ನೇ ಅಖಿಲ ಭಾರತ ಸಹಕಾರ ಸಪ್ತಾಹ ಕಾರ್ಯಕ್ರಮವನ್ನು ಸಚಿವ ಆರ್.ಬಿ. ತಿಮ್ಮಾಪೂರ ಉದ್ಘಾಟಿಸಿದರು. ಡಾ.ಟಿ.ವಿ. ಅರಳಿಕಟ್ಟಿ, ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ರಾಮಣ್ಣ ತಳೇವಾಡ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಶೋಕ ಕಿವಡಿ, ಕಾಶೀನಾಥ ಹುಡೇದ ಇದ್ದರು.
Published on

ಮುಧೋಳ: ಪ್ರಜಾಪ್ರಭುತ್ವದ ಭದ್ರಬುನಾದಿಗೆ ಸಹಕಾರ ತತ್ವವೇ ಮೂಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ. ತಿಮ್ಮಾಪೂರ ಹೇಳಿದರು.

ನಗರದ ಹೇಮರಡ್ಡಿ ಮಲ್ಲಮ್ಮ ಕಲ್ಯಾಣ ಮಂಟಪದಲ್ಲಿ ಗುರುವಾರ ಹಮ್ಮಿಕೊಂಡಿದ್ದ 71ನೇ ಅಖಿಲ ಭಾರತ ಸಹಕಾರ ಸಪ್ತಾಹ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ನಮ್ಮ ತಾಲೂಕಿನ ಸಹಕಾರಿಗಳು ಸಾರ್ವಜನಿಕರ ನಂಬುಗೆಗೆ ಪಾತ್ರವಾಗಿ ಅಭಿವೃದ್ಧಿಯತ್ತ ಸಾಗಿರುವುದು ಹೆಮ್ಮೆಯ ಸಂಗತಿ. ಸಹಕಾರ ರಂಗದಲ್ಲಿ ರಾಜಕಾರಣ ನುಸುಳದಂತೆ ಕಾರ್ಯನಿರ್ವಹಿಸುವ ಸಂಸ್ಥೆ ಎತ್ತರದ ಸ್ಥಾನಕ್ಕೆ ಬೆಳೆಯುತ್ತದೆ. ಸರ್ಕಾರಗಳು ಸಹಕಾರಿ ರಂಗದ ಸಂಸ್ಥೆಗಳಿಗೆ ಹೆಚ್ಚಿನ ಸಹಾಯ ಮಾಡಬೇಕು ಎಂದರು.

ರಾಷ್ಟ್ರೀಯ ಬ್ಯಾಂಕ್‌ಗಳಿಗೆ ಸೆಡ್ಡು ಹೊಡೆಯುವ ರೀತಿಯಲ್ಲಿ ಸಹಕಾರಿ ಸಂಘಗಳು ಬೆಳೆದಿವೆ. ಅದರೊಂದಿಗೆ ಎಲ್ಲರನ್ನೂ ಒಟ್ಟುಗೂಡಿಸಿ ರಾಷ್ಟ್ರೀಯತೆ ಸಾಧಿಸುವ ಮನೋಭಾವ ಹೊಂದಿರಬೇಕು. ಸಹಕಾರಿ ಸಂಘಗಳ ಬೆಳವಣಿಗೆಗೆ ಪೂರಕವಾದ ಅಂಶಗಳ ಬಗ್ಗೆ ನಿರಂತರ ಚರ್ಚೆಗಳಾಗಬೇಕು ಎಂದು ತಿಳಿಸಿದರು.

ಸಹಕಾರಿ ರಂಗದ ಪಿತಾಮಹ ಸಿದ್ದನಗೌಡ ಸಾ. ಪಾಟೀಲ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಲಾಯಿತು.

ಮರೆಗುದ್ದಿ ಅಡವಿಮಠದ ಡಾ. ನಿರುಪಾಧೀಶ್ವರ ಮಹಾಸ್ವಾಮಿಗಳು ಸಾನ್ನಿಧ್ಯ ವಹಿಸಿದ್ದರು. ನಗರಸಭೆ ಅಧ್ಯಕ್ಷೆ ಸುನಂದಾ ತೇಲಿ, ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ರಾಮಣ್ಣ ತಳೇವಾಡ, ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷ ಅಶೋಕ ಕಿವಡಿ, ಜಿಲ್ಲಾ ಸಹಕಾರಿ ಯೂನಿಯನ್ ನಿರ್ದೇಶಕ ಕಾಶೀನಾಥ ಹುಡೇದ, ಕೆಎಂಎಫ್ ನಿರ್ದೇಶಕರಾದ ವಿವೇಕಾನಂದ ಪಾಟೀಲ, ಲಕ್ಷ್ಮಣ ಮಾಲಗಿ, ಸಹಕಾರ ಸಂಘಗಳ ಉಪ ನಿರ್ದೇಶಕ ದಾನಯ್ಯ ಹಿರೇಮಠ, ಸಹಾಯಕ ನಿಬಂಧಕ ರಾಮನಗೌಡ ಪಾಟೀಲ, ಟಿ.ವಿ. ಅರಳಿಕಟ್ಟಿ, ಸದುಗೌಡ ಪಾಟೀಲ, ನೀರಾವರಿ ಮಹಾಮಂಡಳ ನಿರ್ದೇಶಕ ಮಲ್ಲಿಕಾರ್ಜುನ ಹುಂಡೇಕಾರ, ನಿರ್ದೇಶಕ ಮಂಜು ನಡುವಿನಮನಿ, ಸಿಡಿಒ ಶ್ರೀನಿವಾಸ ಸಾರವಾಡ, ಶ್ರೀಶೈಲ ದಳವಾಯಿ, ರಂಗಪ್ಪ ಹಾದಿಮನಿ, ಸಂಜು ನಡುವಿನಮನಿ, ಡಾ.ಟಿ.ವಿ. ಅರಳಿಕಟ್ಟಿ, ಎಚ್.ಎಲ್. ಪಾಟೀಲ, ಸುರೇಶ ಹಾದಿಮನಿ, ವಿಜಯಲಕ್ಷ್ಮೀ ಪಾಟೀಲ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net