

ಬಸವನಬಾಗೇವಾಡಿ: ಪ್ರಧಾನ ಮಂತ್ರಿ ಉಜ್ವಲ ಯೋಜನೆಯಡಿ ಅಡುಗೆ ಅನಿಲ (ಗ್ಯಾಸ್ ಸಿಲಿಂಡರ್) ಹೊಂದಿರುವವರಿಗೂ ಸೀಮೆಎಣ್ಣೆ ವಿತರಿಸಬೇಕೆಂದು ಆಗ್ರಹಿಸಿ ಅಖಂಡ ಕರ್ನಾಟಕ ರೈತ ಸಂಘದ ತಾಲೂಕು ಘಟಕದ ಪದಾಧಿಕಾರಿಗಳು ತಹಸೀಲ್ದಾರ್ ಎಂ.ಎನ್. ಬಳಗಾರ ಅವರಿಗೆ ಬುಧವಾರ ಮನವಿ ಸಲ್ಲಿಸಿದರು.
ಸಂಘದ ತಾಲೂಕು ಗೌರವಾಧ್ಯಕ್ಷ ಈರಣ್ಣ ದೇವರಗುಡಿ ಹಾಗೂ ತಾಲೂಕಾಧ್ಯಕ್ಷ ಸಿದ್ದ್ಧರಾಮ ಅಂಗಡಗೇರಿ ಮಾತನಾಡಿ, ಕೇಂದ್ರ ಸರ್ಕಾರ ಅಡುಗೆ ಅನಿಲ ಹೊಂದಿದವರಿಗೆ ಸೀಮೆಎಣ್ಣೆ ವಿತರಿಸುತ್ತಿದೆ. ಗ್ರಾಮೀಣ ಭಾಗದಲ್ಲಿ ಸಂಜೆ ಅಥವಾ ರಾತ್ರಿ ಹೊತ್ತು ವಿದ್ಯುತ್ ಕಡಿತಗೊಂಡಾಗ ಸೀಮೆಎಣ್ಣೆ ದೀಪ ಹಚ್ಚಲು ಎಣ್ಣೆ ಸಿಗದೆ ಕತ್ತಲಲ್ಲೆ ಸಮಯ ಕಳೆಯಬೇಕಾಗುತ್ತದೆ. ಅದಕ್ಕಾಗಿ ಸಿಲಿಂಡರ್ ಹೊಂದಿದವರಿಗೂ ಸೀಮೆಎಣ್ಣೆ ವಿತರಿಸಬೇಕೆಂದು ಒತ್ತಾಯಿಸಿದರು.
ಸೋಮನಗೌಡ ಪಾಟೀಲ, ಹೊನಕೇರಪ್ಪ ತೆಲಗಿ, ಚಂದ್ರಾಮ ತೆಗ್ಗಿ, ಶಾಂತಗೌಡ ಬಿರಾದಾರ, ಬಸವರಾಜ ಭೈರವಾಡಗಿ, ಪಂಪಣ್ಣ ಔರಸಂಗ, ಜಂಬಯ್ಯ ಸಿಂಧೋಳ್ಳು, ಶಿವಪ್ಪ ಸಿಂಧೋಳ್ಳು, ಕಾಟೇಪ್ಪ ಸಿಂಧೋಳ್ಳು, ಮಾಳಪ್ಪ ಸಿಂಧೋಳ್ಳು, ಮಾನಪ್ಪ ಸಿಂಧೋಳ್ಳು, ಮುತ್ತಪ್ಪ ಸಿಂಧೋಳ್ಳು, ಮಾಂತೇಶ ಸಿಂಧೋಳ್ಳು ಮತ್ತಿತರರಿದ್ದರು.