

ಮೈಸೂರು: ಸಾಮಾನ್ಯವಾಗಿ ಹಬ್ಬಗಳು ಬಂತೆಂದರೆ ಹೂವಿನ ದರ ಗಗನಕ್ಕೇರುತ್ತದೆ. ಆದರೆ, ದೀಪಾವಳಿಗೆ ಹೆಚ್ಚಾಗಿ ಹೂವನ್ನು ಬಳಸದಿರುವುದರಿಂದ ಮೈಸೂರಿನಲ್ಲಿ ದರ ಏರಿಕೆಯಾಗಿಲ್ಲ.
ಸೇವಂತಿಗೆ 50-60 ರೂ, ಚೆಂಡು ಹೂ 60, ಕನಕಾಂಬರ ಮಾರಿಗೆ 120, ಕಾಕಡ 120 ರೂ.ಗೆ ಮಾರಾಟವಾಯಿತು. ತರಕಾರಿ ದರವೂ ಏರಿಕೆಯಾಗಿರಲಿಲ್ಲ. ತೆಂಗಿನಕಾಯಿ 20-50 ರೂ.ಗೆ ಮೂರು, ಮೆಣಸು ಕೆಜಿಗೆ 60 ಬೀನ್ಸ್ 60, ಕ್ಯಾರೆಟ್ 40, ಬೀಟ್ರೋಟ್ 40, ಬದನೆಕಾಯಿ 40, ಕೋಸು 20, ಕ್ಯಾಪ್ಸಿಕಾಂ 60, ನುಗ್ಗೆ 100 ರಿಂದ 120, ಹುಳಿ ಟೊಮ್ಯಾಟೊ 15, ಜಾಮೂನು ಟೊಮ್ಯಾಟೊ 30 ರೂ ಮಾರಾಟವಾಯಿತು.