

ಗಂಗೊಳ್ಳಿ: ಗ್ರಾಪಂ ಅಧ್ಯಕ್ಷರೇ ತ್ಯಾಜ್ಯ ಸಂಗ್ರಹಣೆ ಸ್ವಚ್ಛವಾಹಿನಿ ವಾಹನದ ಚಾಲಕರಾಗಿ ಮನೆ ಮನೆಗೆ ತೆರಳಿ ತ್ಯಾಜ್ಯ ಸಂಗ್ರಹಿಸಿ ಎಲ್ಲರಿಗೂ ಮಾದರಿಯಾಗಿದ್ದಾರೆ. ಸ್ವಚ್ಛವಾಹಿನಿ ವಾಹನ ಚಾಲಕ ಮದುವೆ ಕಾರಣ ರಜೆಯಲ್ಲಿದ್ದು, ತ್ಯಾಜ್ಯ ಸಂಗ್ರಹಿಸುವ ವಾಹನಕ್ಕೆ ಯಾರೂ ಚಾಲಕರು ದೊರೆಯಲಿಲ್ಲ. ಹೀಗಾಗಿ ಸ್ವತಃ ತ್ರಾಸಿ ಗ್ರಾಪಂ ಅಧ್ಯಕ್ಷ ಮಿಥುನ್ ಎಂ.ಡಿ.ಬಿಜೂರು ಅವರು ಕಳೆದ 10 ದಿನಗಳಿಂದ ಸ್ವಚ್ಛವಾಹಿನಿ ವಾಹನ ಚಾಲಕರಾಗಿ ಮನೆ ಮನೆಗಳಿಂದ ತ್ಯಾಜ್ಯ ಸಂಗ್ರಹಿಸಿ ಹೊಸಾಡು ಗ್ರಾಪಂ ವ್ಯಾಪ್ತಿಯಲ್ಲಿರುವ ಮಿನಿ ಎಂಆರ್‌ಎಫ್ ಘಟಕ್ಕೆ ನೀಡಿ ಗಮನ ಸೆಳೆದರು. ಅನೇಕ ಗ್ರಾಪಂ ಅಧ್ಯಕ್ಷರು ಗ್ರಾಪಂ ಕಚೇರಿಗೆ ಬರುವುದು ಅಪರೂಪ ಅದರಲ್ಲೂ ತ್ಯಾಜ್ಯದ ಸಮಸ್ಯೆ ವಿಚಾರದಲ್ಲಿ ಸಂಬಂಧವಿಲ್ಲದಂತಿರುವವರೇ ಹೆಚ್ಚು. ಇಂತಹ ಸಂದರ್ಭದಲ್ಲಿ ತನ್ನ ಊರಿನ ಕೆಲಸ ಎಂದು ತಿಳಿದು ವಾಹನ ಚಾಲಕ ಬರುವ ತನಕ ಕಾಯದೇ ತಾವೇ ಸ್ವತಃ ತ್ಯಾಜ್ಯ ಸಂಗ್ರಹಣೆ ಕಾರ್ಯಕ್ಕೆ ಇಳಿದಿರುವುದು ಮಾದರಿ ಕಾರ್ಯ.
ವಾಹನ ಚಾಲಕರಿಲ್ಲದೆ ತ್ಯಾಜ್ಯ ಸಂಗ್ರಹಣೆಗೆ ತೊಡಕಾಗಬಾರದು ಮತ್ತು ಸ್ವಚ್ಛತೆಗೆ ಆದ್ಯತೆ ನೀಡಬೇಕೆಂಬ ಉದ್ದೇಶದಿಂದ ಸ್ವಚ್ಛ ವಾಹಿನಿ ವಾಹನ ಚಾಲಕನಾಗಿ ಮನೆ ಮನೆಗೆ ತೆರಳಿ ತ್ಯಾಜ್ಯ ಸಂಗ್ರಹಿಸುವ ಕೆಲಸ ಗ್ರಾಪಂ ಸಿಬ್ಬಂದಿಯೊಂದಿಗೆ ಮಾಡಿರುವುದು ಖುಷಿ ತಂದಿದೆ. -ಮಿಥುನ್ ಬಿಜೂರು https://www.vijayavani.net/rathbeedi-friends-poster-released https://www.vijayavani.net/dairy-farming-for-self-reliant-living