ಶ್ರೀರಾಮಸೇನೆಯ ಪ್ರಮೋದ ಮುತಾಲಿಕ ಅಭಿಮತ ಸಾವಿರ ಕೇಸ್​ಗಳು ಬಿದ್ದರೂ ಎದುರಿಸುತ್ತೇನೆ...!

The Pramod Muthalika opinion of Sri Ramasena in Kaladagi
Published on

ಕಲಾದಗಿ : ದೇಶಿಯ ವಾದ್ಯಗಳನ್ನು ಬಳಸಿಕೊಂಡು, ಇಂಪಾದ ಹಾಡುಗಳನ್ನು ಕೇಳಿಸಿಕೊಳ್ಳುತ್ತಾ, ಸುಸಂಸತತೆಯಿಂದ ಶ್ರದ್ಧಾ ಭಕ್ತಿಯಿಂದ, ವಿಜೃಂಭಣೆಯಿಂದ ನಮ್ಮ ವ್ನಿನಾಶಕ ಗಣಪತಿಯ ವಿಸರ್ಜನೆ ಮಾಡಬೇಕು ಎಂದು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ ಮುತಾಲಿಕ ಹೇಳಿದರು.ಗ್ರಾಮದ ಹೊಸೂರ ಚೌಕ್​ನಲ್ಲಿ ಸ್ಥಾಪನೆಗೊಂಡಿರುವ ನಗರ ಗಣಪತಿ ಸನ್ನಿಧಿಗೆ ಶುಕ್ರವಾರ ಭೇಟಿ ನೀಡಿದ ಸಂದರ್ಭದಲ್ಲಿ ಮಾತನಾಡಿದ ಅವರು, ತಮ್ಮ ಈ ಹಿಂದುತ್ವದ ಹೋರಾಟದ ಜೀವನದಲ್ಲಿ ಮೊದಲ ಪೊಲೀಸ್​ ಕೇಸ್​ ಬಿದ್ದಿದ್ದು, ಇದೇ ಕಲಾದಗಿಯಿಂದ ಎಂದು ದಶಕಗಳ ಹಿಂದಿನ ನೆನಪನ್ನು ಕೆದಕಿದ ಅವರು ಅಂದಿನಿಂದ ಇಲ್ಲಿಯವರೆಗೆ 120 ಕ್ಕೂ ಅಧಿಕ ಪೊಲೀಸ್​ ಕೇಸ್​ಗಳು ನನ್ನ ಮೇಲಿವೆ ಎಂದರು.

ಈ ಎಲ್ಲಾ ಕೇಸ್​ಗಳ ಹಿಂದೆ ಇದ್ದದ್ದು ಹಿಂದುತ್ವದ ಉಳಿವು ಎಂಬುದೇ ಹೊರತು ಸ್ವಂತದ್ದೇನು ಇರಲಿಲ್ಲ. ಇವೆಲ್ಲವನ್ನು ಕಾರ್ಯಕರ್ತರ ಬೆಂಬಲದಿಂದ ತಾಯಂದಿರ ಆಶೀರ್ವಾದದಿಂದ ಎದುರಿಸಿದ್ದೇನೆ. ನಿಮ್ಮೆಲ್ಲರ ಆಶೀರ್ವಾದದಿಂದ ಇನ್ನೂ ಸಾವಿರ ಕೇಸ್​ಗಳು ಬಿದ್ದರೂ ಧೈರ್ಯವಾಗಿ ಎದುರಿಸುತ್ತೇನೆ ಎಂದು ಹೇಳಿದರು.

ಹಿಂದು ಮುಖಂಡರಾದ ಎಂ.ಜಿ. ಮಂಟೂರ, ಬಶೆಟ್ಟೆಪ್ಪ ಅಂಗಡಿ, ಸಿದ್ದಪ್ಪ ಬಾಲರಡ್ಡಿ, ಯಮುನಪ್ಪ ಬೂದಿಹಾಳ, ನಿಂಗಪ್ಪ ಅಗಸರ,ಪತ್ರೆಪ್ಪ ಶೆಟ್ಟೆಪ್ಪನವರ, ನಾಗರಾಜ ಗಿಡ್ಡಿ, ಶಿವಾಜಿ ಚವ್ಹಾಣ, ರಾಕೇಶ ಗುಂಜುಟಗಿ, ತುಳಸಪ್ಪ ತಳವಾರ, ಹವಳೆಪ್ಪ ಮಾದರ, ಶಿವು ಸಬರದ, ಸಂಜಯ ಗಣಾಚಾರಿ ಇದ್ದರು.

ಕಲಾದಗಿಯ ಪ್ಯಾಟಿ ಬಸವೇಶ್ವರ ಯುವಕ ಮಂಡಳ ಗಣಪತಿ ಸನ್ನಿಧಿ-ಯಲ್ಲಿ ಶ್ರೀರಾಮ ಸೇನೆಯ ಮುಖ್ಯಸ್ಥ ಪ್ರಮೋದ ಮುತಾಲಿಕ, ಹಿಂದು ಮುಖಂಡರಾದ ಎಂ.ಜಿ. ಮಂಟೂರ, ಬಶೆಟ್ಟೆಪ್ಪ ಅಂಗಡಿ, ಸಿದ್ದಪ್ಪ ಬಾಲರಡ್ಡಿ, ಯಮುನಪ್ಪ ಬೂದಿಹಾಳ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net