

ಅಣ್ಣಿಗೇರಿ: ದಾಸೋಹ ಮಠದ ಡಾ.ಶಿವಕುಮಾರ ಸ್ವಾಮಿಗಳು ಸಾಕ್ಷಾತ್ ಸಿದ್ಧಾರೂಢರ ಅವತಾರಿಗಳು. ದಾಸೋಹ ಮಠ ಸಿದ್ಧಾರೂಢರ ಸಮಕಾಲೀನ ಮಠವಾಗಿದ್ದು, ಅಗಾಧ ಶಕ್ತಿ ಹೊಂದಿದೆ ಎಂದು ಮಾಜಿ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಹೇಳಿದರು.
ಪಟ್ಟಣದ ದಾಸೋಹ ಮಠದ 61ನೇ ಜಾತ್ರಾ ಮಹೋತ್ಸವದ ಅಭಿನಂದನಾ ಕಾರ್ಯಕ್ರಮಕ್ಕೆ ಬುಧವಾರ ಚಾಲನೆ ನೀಡಿ ಅವರು ಮಾತನಾಡಿದರು.
ಅಣ್ಣಿಗೇರಿ ಅಮೃತೇಶ್ವರನ ಪುಣ್ಯ ಭೂಮಿಯಲ್ಲಿ ಅಧ್ಯಾತ್ಮದ ಜ್ಯೋತಿ ಬೆಳಗಿಸಿ ಮೇಲು ಕೀಲು ಎನ್ನದೆ ಸರ್ವ ಭಕ್ತರು ನಮ್ಮವರೇ ಎಂದು ಸಮಾಜಕ್ಕೆ ತಿಳಿಸಿದ ಡಾ.ಶಿವಕುಮಾರ ಶ್ರೀಗಳು ಆರೂಢ ಪರಂಪರೆಯ ದಿವ್ಯ ಜ್ಯೋತಿ. ಹುಬ್ಬಳ್ಳಿಯನ್ನು ಕೈಲಾಸ ಮಾಡಿದ ಸಿದ್ಧಾರೂಢರ ಅವತಾರವೇ ಅಣ್ಣಿಗೇರಿ ದಾಸೋಹ ಮಠದ ಡಾ.ಶಿವಕುಮಾರ ಮಹಾಸ್ವಾಮಿಗಳು. ಅಣ್ಣಿಗೇರಿ ದಾಸೋಹ ಮಠದ ಪೀಠಾಧಿಪತಿಗಳಾಗಿ 16 ವರ್ಷದಲ್ಲಿ ಪ್ರತಿ ಭಕ್ತರ ಮನಸು ಅರಿತು ಮಠದ ಧಾರ್ಮಿಕ ಕಾರ್ಯಗಳನ್ನು ಮಾಡುತ್ತ ಭಕ್ತರ ಮನದ ಮೈಲಿಗೆಯನ್ನು ತೊಳಿಯುವುದರ ಜತೆಗೆ ನಿಜಗುಣ ಶಿವಯೋಗಿಗಳ ಕೈವಲ್ಯ ಶಾಸ್ತ್ರದ ಮೇಲೆ ವಿದ್ಯಾಭ್ಯಾಸ ಮಾಡಿ ಡಾಕ್ಟರೇಟ್ ಪದವಿ ಪಡೆದಿರುವುದು ನಮ್ಮ ಕ್ಷೇತ್ರದ ಭಕ್ತರ ಪುಣ್ಯ. ಡಾ.ಶಿವಕುಮಾರ ಸ್ವಾಮಿಗಳ ಪಾದಸ್ಪರ್ಶದಿಂದ ಅಣ್ಣಿಗೇರಿ ತಾಲೂಕು ಪಾವನವಾಗಿದೆ ಎಂದರು.
61 ನೇ ಜಾತ್ರಾ ಮಹೋತ್ಸವದಲ್ಲಿ ತನು-ಮನ-ಧನವನ್ನು ಸಮರ್ಪಿಸಿದ ಭಕ್ತಾದಿಗಳಿಗೆ, ಅನ್ನಪ್ರಸಾದ ಸೇವೆ ಸಲ್ಲಿಸಿದ ದಾನಿಗಳಿಗೆ, ಸಂಗೀತ ಬಳಗಕ್ಕೆ ಹಾಗೂ 61ನೇ ಜಾತ್ರಾ ಮಹೋತ್ಸವದ ಅಧ್ಯಕ್ಷರಿಗೆ, ಉಪಾಧ್ಯಕ್ಷರಿಗೆ ಹಾಗೂ ಕಲಾ ತಂಡಗಳನ್ನು ದಾಸೋಹ ಮಠದ ಡಾ.ಶಿವಕುಮಾರ ಸ್ವಾಮೀಜಿ ಸನ್ಮಾನಿಸಿ ಅಭಿನಂದಿಸಿದರು.
ನವಲಗುಂದ ನಾಗಲಿಂಗೇಶ್ವರ ಮಠದ ಶ್ರೀ ವೀರೇಂದ್ರ ಸ್ವಾಮೀಜಿ ಆಶೀರ್ವಚನ ನೀಡಿದರು. ಕಿರ್ತನ ಕೇಸರಿ ಶ್ರೀ ಗುರುನಾಥ ಶಾಸ್ತ್ರೀಗಳು, ಷಣ್ಮುಖ ಗುರಿಕಾರ, ರಾಜೇಶ್ವರಾವ ದೇಸಾಯಿ, ಮಹಾದೇವಪ್ಪ ದಿಡ್ಡಿ, ಷಣ್ಮುಖಪ್ಪ ತೋಟಕಾವು, ಶಶಿಧರ ಮುಖಂಡಮಠ, ಬಸವರಾಜ ಯಳವತ್ತಿ, ಶಿವಯೋಗಿ ಸುರಕೋಡ, ಸುರೇಶ ಸುಣಗಾರ, ಮಾರುತಿ ಅಬ್ಬಿಗೇರಿ, ಮೋಹನ ಗುಡಸಲಮನಿ, ಅಭಿಷೇಕ ಅಮಡ್ಲ, ಇಮಾಬಸಾಬ ತಹಶೀಲ್ದಾರ, ಶಂಕ್ರಣ್ಣ ಯಾದವಾಡ, ಬಾಪುಗೌಡ ಪಾಟೀಲ, ಶಿವಕುಮಾರ ಬಳಿಗೇರ, ತವನೇಶ ನಾವಳ್ಳಿ, ಶಿವು ಹೊಸಳ್ಳಿ, ಶಿವು ಹಾಳದೋಟ, ದಾಸೋಹ ಮಠದ ಸದಸ್ಯರು ಇದ್ದರು.