ದೇವರ ನಾಮಸ್ಮರಣೆ ಶಕ್ತಿ ಅದ್ಭುತ

KMT GEETA JAYANTI
Published on

ಕುಮಟಾ: ದೇವರ ನಾಮಸ್ಮರಣೆಗಿರುವ ಶಕ್ತಿ ಮತ್ತು ಅದನ್ನು ಅನುಸರಿಸಿದಾಗ ಪಡೆಯುವ ಭಾವಾನಂದ ಅಸದೃಶ ಮತ್ತು ಅದ್ಭುತ ಎಂದು ಯಕ್ಷಗಾನ ಅಕಾಡೆಮಿ ನಿಕಟಪೂರ್ವ ಅಧ್ಯಕ್ಷ ಡಾ. ಜಿ.ಎಲ್. ಹೆಗಡೆ ಹೇಳಿದರು.

ಗೋರೆಯ ಕೆನರಾ ಎಕ್ಸಲೆನ್ಸ್ ಪಿಯು ಕಾಲೇಜ್​ನಲ್ಲಿ ಗೀತಾ ಜಯಂತಿ ಉದ್ಘಾಟಿಸಿ ಭಗವದ್ಗೀತೆಯಲ್ಲಿಯ ಕರ್ಮಯೋಗ, ಭಗವಾನ್ ಶ್ರೀಕೃಷ್ಣನ ವಿಶ್ವರೂಪ ದರ್ಶನ, ಅನನ್ಯಾಶ್ಚಿಂತಯಂತೋಮಾಮ್ ಎಂಬುದರ ಕುರಿತು ವಿಶೇಷ ಉಪನ್ಯಾಸ ನೀಡಿದರು.

ಅಧ್ಯಕ್ಷತೆ ವಹಿಸಿದ್ದ ಕಾಲೇಜ್ ಸಂಸ್ಥಾಪಕ ಅಧ್ಯಕ್ಷ ಡಾ. ಜಿ.ಜಿ. ಹೆಗಡೆ ಮಾತನಾಡಿ, ಭಗವದ್ಗೀತೆಯಲ್ಲಿಯ ಅಂಶಗಳನ್ನು ವಿದ್ಯಾರ್ಥಿಗಳು ಅಳವಡಿಸಿಕೊಂಡು ಭಗವಂತನಲ್ಲಿ ಸಂಪೂರ್ಣ ನಂಬಿಕೆ ಇಡುವಂತೆ ತಿಳಿಸಿದರು. ಆಡಳಿತ ಮಂಡಳಿ ವಿಶ್ವಸ್ಥ ಡಿ.ಎನ್. ಭಟ್ಟ ವೇದಿಕೆಯಲ್ಲಿದ್ದರು.

ಗೀತಾ ಜಯಂತಿ ಪ್ರಯುಕ್ತ ನಡೆಸಿದ ಗೀತಾ ಕಂಠಪಾಠ ಸ್ಪರ್ಧೆ ಹಾಗೂ ಭಾಷಣ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ವಿದ್ಯಾರ್ಥಿಗಳು ಸಾಮೂಹಿಕ ಗೀತಾ ಪಠಣ ಮಾಡಿದರು. ಪ್ರಾಚಾರ್ಯ ರಾಮ ಭಟ್ಟ, ಶಂಕರನಾರಾಯಣ ಉಪಾಧ್ಯಾಯ ಹಾಗೂ ಪೂಜಾ ಭಟ್ಟ ಕಾರ್ಯಕ್ರಮ ನಿರ್ವಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net