ಮುಸುಕಿನ ಜೋಳದ ಕಡ್ಡಿ ಮೆದೆ ಭಸ್ಮ

30 HANUR 4
Published on

ಹನೂರು: ಉದ್ದನೂರು ಜಿ.ಕೆ. ಹೊಸೂರು ಮಾರ್ಗದ ಜಮೀನೊಂದರಲ್ಲಿ ಸೋಮವಾರ ಬೆಂಕಿ ತಗುಲಿ ಮುಸುಕಿನ ಜೋಳದ ಕಡ್ಡಿ ಮೆದೆ ಭಸ್ಮವಾಗಿದೆ.

ಉದ್ದನೂರು ಗ್ರಾಮದ ಜಡೇಸ್ವಾಮಿ ಎಂಬುವರು ಜಾನುವಾರುಗಳ ಮೇವಿಗಾಗಿ ಮುಸುಕಿನ ಜೋಳದ ಕಡ್ಡಿಯ ಮೆದೆಯನ್ನು ಹಾಕಿದ್ದರು. ಬೆಳಗ್ಗೆ 11 ಗಂಟೆಯಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಇದನ್ನು ಗಮನಿಸಿದ ಜಡೇಸ್ವಾಮಿ ಅಗ್ನಿಶಾಮಕ ಠಾಣೆಗೆ ಮಾಹಿತಿ ತಿಳಿಸಿ ಅಕ್ಕಪಕ್ಕದ ಜಮೀನಿನ ರೈತರೊಂದಿಗೆ ಸೇರಿ ಬೆಂಕಿಯನ್ನು ನಂದಿಸಲು ಮುಂದಾದರು. ಕಿರು ಜಲವಾಹನದೊಂದಿಗೆ ಸ್ಥಳಕ್ಕಾಗಮಿಸಿ ಸಿಬ್ಬಂದಿ ಬೆಂಕಿಯನ್ನು ನಂದಿಸಲು ಆರಂಭಿಸಿದರು. ಜ್ವಾಲೆಯ ತೀವ್ರತೆ ಹೆಚ್ಚಾಗುತ್ತಿದ್ದಂತೆ ಕೊಳ್ಳೇಗಾಲದ ಅಗ್ನಿಶಾಮಕ ವಾಹನ ಹಾಗೂ ಸಿಬ್ಬಂದಿ ಆಗಮಿಸಿದರು. ಆದರೆ ಮೆದೆ ಸಂಪೂರ್ಣ ಬೆಂಕಿಗೆ ಆಹುತಿಯಾಗಿತ್ತು. ಸಿಬ್ಬಂದಿ ಬೆಂಕಿಯನ್ನು ಸಂಪೂರ್ಣ ನಂದಿಸುವುದರ ಮೂಲಕ ಮುಂದಾಗುವ ಅನಾಹುತವನ್ನು ತಡೆಗಟ್ಟಿದ್ದಾರೆ.

ಕಾರ್ಯಾಚರಣೆಯಲ್ಲಿ ಅಗ್ನಿಶಾಮಕ ಪ್ರಭಾರ ಠಾಣಾಧಿಕಾರಿ ಮಹೇಶ್, ಸಿಬ್ಬಂದಿ ಪೆರಿಯನಾಯಗಂ, ಲಿಂಗೇಶ್, ಅಶೋಕ್, ಹರ್ಷ, ಬಸವರಾಜು, ಕಂದಸ್ವಾಮಿ, ಪುಟ್ಟಸ್ವಾಮಿ, ಆರಾಧ್ಯ, ನಿಜಲಿಂಗ ಹಾಗೂ ರೇವಣ್ಣ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net