

ಸೋಮವಾರಪೇಟೆ: ಬಿಳಿಗೇರಿ ಸಮೀಪದ ನಂದಿಮೊಟ್ಟೆ ರಸ್ತೆಯಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ 2 ಜಾನುವಾರುಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಮೂರ್ನಾಡು-ಕೋಡಂಬೂರು ನಿವಾಸಿ, ಅಸ್ಗರ್ ಆಲಿ ಎಂಬುವರಿಗೆ ಸೇರಿದ ಅಶೋಕ್ ಲೈಲ್ಯಾಂಡ್ ವಾಹನದಲ್ಲಿ ನಂದಿಮೊಟ್ಟೆ ಗ್ರಾಮದ ರಾಜಾ ಎಂಬುವರಿಗೆ ಸೇರಿದ 2 ಜಾನುವಾರುಗಳನ್ನು ಸಾಗಿಸುತ್ತಿದ್ದಾಗ ಸ್ಥಳೀಯರು ತಡೆದು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಈ ಸಂದರ್ಭ ವಾಹನದ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ. ಬಳಿಕ ಸ್ಥಳಕ್ಕಾಗಮಿಸಿದ ಪೊಲೀಸರು, ಜಾನುವಾರುಗಳನ್ನು ಭಾಗಮಂಡಲ ಗೋ ಶಾಲೆಗೆ ಸಾಗಿಸಿದ್ದಾರೆ.