ಸರಿದಾರಿ ತೋರುವ ಶಿಕ್ಷಕರ ಸ್ಥಾನ ಪವಿತ್ರವಾದುದು

The position of a teacher who guides is sacred.
ಲಿಂಗದಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸಿ ವಯೋನಿವೃತ್ತಿ ಹೊಂದಿದ ಎಸ್.ಆಯ್. ಕಡಕೋಳ, ಎಂ.ಎನ್. ಅಸ್ಕಿ ಮತ್ತು ಬಿ.ಆರ್ ಪಾಟೀಲ್ ಸರ್ಕಾರಿ ಪ್ರೌಡಶಾಲೆಯ ಎಸ್.ಟಿ. ಸಜ್ಜನ ಅವರನ್ನು ಅಸ್ಕಿ ಪೌಂಡೇಷನ್ ವತಿಯಿಂದ ಸನ್ಮಾನಿಸಲಾಯಿತು. ಸಿ.ಬಿ.ಅಸ್ಕಿ, ಬಿ.ಎಸ್. ಸಾವಳಗಿ, ಸುಮಂಗಲಾ ಕೊಳೂರ, ರಮೇಶಗೌಡ ಪಾಟೀಲ ಮತ್ತಿತರರಿದ್ದರು.
Published on

ತಾಳಿಕೋಟೆ: ಅಜ್ಞಾನದ ಕತ್ತಲೆಯಿಂದ ಜ್ಞಾನದ ಬೆಳಕು ತೋರುವ ಶಿಕ್ಷಕರ ಸ್ಥಾನ ಅತ್ಯಂತ ಪವಿತ್ರವಾದುದಾಗಿದೆ. ಅಂತಹ ಶಿಕ್ಷಣ ಸೇವೆಯಲ್ಲಿ ವಯೋನಿವೃತ್ತಿ ಹೊಂದಿದ ಕಡಕೋಳ, ಅಸ್ಕಿ ಮತ್ತು ಸಜ್ಜನ ಅವರ ಸೇವೆ ಅನನ್ಯವಾಗಿದೆ ಎಂದು ಅಸ್ಕಿ ಪೌಂಡೇಶನ್ ಅಧ್ಯಕ್ಷ ಸಿ.ಬಿ.ಅಸ್ಕಿ ಹೇಳಿದರು.

ತಾಲೂಕಿನ ಲಿಂಗದಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸಿ ವಯೋನಿವೃತ್ತಿ ಹೊಂದಿದ ಎಸ್.ಆಯ್. ಕಡಕೋಳ, ಎಂ.ಎನ್. ಅಸ್ಕಿ, ಮತ್ತು ಬಿ.ಆರ್ ಪಾಟೀಲ್ ಸರ್ಕಾರಿ ಪ್ರೌಡಶಾಲೆಯ ಎಸ್.ಟಿ. ಸಜ್ಜನ ಅವರ ಬಿಳ್ಕೊಡುಗೆ ಹಾಗೂ ಸನ್ಮಾನ ಸಮಾರಂಭದಲ್ಲಿ ಮಾತನಾಡಿದ ಅವರು, ನಿವೃತ್ತಿ ಹೊಂದಿದ ಎಸ್.ಆಯ್. ಕಡಕೋಳ, ಎಂ.ಎನ್. ಅಸ್ಕಿ ಮತ್ತು ಬಿ.ಆರ್. ಪಾಟೀಲ ಸರ್ಕಾರಿ ಪ್ರೌಢ ಶಾಲೆಯ ದೈಹಿಕ ಶಿಕ್ಷಕ ಎಸ್.ಟಿ. ಸಜ್ಜನ ಅವರ ಸೇವಾ ಕಾರ್ಯ ಮೆಚ್ಚುವಂತಹದ್ದಾಗಿದೆ ಎಂದರು.

ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಎಸ್. ಸಾವಳಗಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಉತ್ತಮ ಸೇವೆ ಸಲ್ಲಿಸಿದ ಕಡಕೋಳ, ಅಸ್ಕಿ ಹಾಗೂ ಸಜ್ಜನ ಅವರು ಇತರರಿಗೆ ಮಾದರಿಯಾಗಿದ್ದಾರೆ ಎಂದರು.

ಶಿಕ್ಷಕಿ ಸುಮಂಗಲಾ ಕೊಳೂರ ಮಾತನಾಡಿದರು. ಸಂತೆಕಲ್ಲೂರ ಶ್ರೀ ಘನಮಠೇಶ್ವರ ಮಠದ ಶ್ರೀ ಗುರುಬಸವ ಮಹಾಸ್ವಾಮಿಗಳು, ವೇ.ಬಸಯ್ಯ ಮಹಾಸ್ವಾಮಿಗಳು ಸಾನ್ನಿಧ್ಯ ವಹಿಸಿದ್ದರು.

ಎಸ್‌ಡಿಎಂಸಿ.ಅಧ್ಯಕ್ಷ ರಮೇಶಗೌಡ ಪಾಟೀಲ, ಶಿಕ್ಷಣ ಸಂಯೋಜಕ ಡಿ.ವೈ. ಗುರಿಕಾರ, ಬಸವರಾಜ ಹಂಚಲಿ, ಮು.ಗು.ಆರ್.ಬಿ.ದೇಸಾಯಿ, ಪ್ರಧಾನ ಗುರು ಎಂ.ಜಿ.ಕನ್ನೂರ ಮತ್ತಿತರರಿದ್ದರು.

ಶಿಕ್ಷಕ ವಿರೇಶ ಕಾದಳ್ಳಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಕ್ಷಕ ಕೆ.ಪಿ. ಬಿರಾದಾರ ಸ್ವಾಗತಿಸಿದರು, ಶಿಕ್ಷಕ ಮೂಲಿಮನಿ ನಿರೂಪಿಸಿದರು ಹಾಗೂ ಶಿಕ್ಷಕಿ ವಿದ್ಯಾ ಚವ್ಹಾಣ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net