

ರಬಕವಿ/ಬನಹಟ್ಟಿ: ಗುರುವಿನ ಸ್ಥಾನ ಶ್ರೇಷ್ಠವಾದುದು. ನಮಗೆ ಕಲಿಸಿದ ಗುರುಗಳನ್ನು ಸ್ಮರಣೆ ಮಾಡುವುದು ನಮ್ಮೆಲ್ಲರ ಕರ್ತವ್ಯ. ಗುರುವಿನ ಅನುಗ್ರಹದಿಂದ ವಿದ್ಯಾರ್ಥಿಗಳು ಶ್ರೇಷ್ಠ ಸಾಧನೆ ಮಾಡಬಲ್ಲರು. ಅಂಥ ಶಕ್ತಿ ಗುರುವಿನಲ್ಲಿದೆ ಎಂದು ಮುಧೋಳ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಚಾರ್ಯ ಎಸ್.ಎಂ. ಹಾದಿಮನಿ ಹೇಳಿದರು.ಬನಹಟ್ಟಿ ತಮ್ಮಣ್ಣಪ್ಪ ಚಿಕ್ಕೋಡಿ ಕಾಲೇಜಿನಲ್ಲಿ ಶುಕ್ರವಾರ ಹಮ್ಮಿಕೊಂಡ ಶಿಕರ ದಿನಾಚರಣೆ ಮತ್ತು ಬಿಎ ಪ್ರಥಮ ವರ್ಷದ ವಿದ್ಯಾರ್ಥಿಗಳ ಸ್ವಾಗತಿಸುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಜನತಾ ಶಿಣ ಸಂದ ಆಡಳಿತ ಮಂಡಳಿ ಸದಸ್ಯ ಪಂಡಿತ ಹನಗಂಡಿ ಮಾತನಾಡಿ, ಶಿಣದಿಂದ ಉತ್ತಮ ವ್ಯಕ್ತಿತ್ವ ನಿರ್ಮಾಣ ಮಾಡಿಕೊಳ್ಳಬಹುದು. ಪ್ರತಿಯೊಬ್ಬರೂ ಉನ್ನತ ಶಿಣ ಪಡೆದುಕೊಳ್ಳಬೇಕು ಎಂದರು.ಇತಿಹಾಸ ವಿಭಾಗದ ಡಾ.ಮಂಜುನಾಥ ಬೆನ್ನೂರ ಮಾತನಾಡಿ, ಡಾ.ಎಸ್.ರಾಧಾಕಷ್ಣನ್ ಅವರ ಜೀವನದ ಆದರ್ಶಗಳನ್ನು ಅಳವಡಿಸಿಕೊಳ್ಳಬೇಕು. ಅವರ ಜೀವನವೇ ನಮಗೆ ಮಾರ್ಗದರ್ಶನವಾಗಿದೆ ಎಂದು ತಿಳಿಸಿದರು.
ಪ್ರಾಚಾರ್ಯ ಡಾ. ಜಿ.ಆರ್.ಜುನ್ನಾಯ್ಕರ್, ರಾಜ್ಯಶಾಸ ವಿಭಾಗದ ಡಾ.ಮನೋಹರ ಶಿರಹಟ್ಟಿ, ವಿ.ಐ. ಪಾಟೀಲ ಮಾತನಾಡಿದರು. ಜಮಖಂಡಿಯ ಓಲೆಮಠದ ಆನಂದ ದೇವರು ಸಾನ್ನಿಧ್ಯ ವಹಿಸಿದ್ದರು. ಜನತಾ ಶಿಣ ಸಂದ ಆಡಳಿತ ಮಂಡಳಿ ಸದಸ್ಯ ವಿ.ಅರ್. ಕುಳ್ಳಿ ಅಧ್ಯತೆ ವಹಿಸಿದ್ದರು.ಸಂದ ಆಡಳಿತ ಮಂಡಳಿ ಸದಸ್ಯರಾದ ಶ್ರೀಶೈಲ ಯಾದವಾಡ, ಮಹಾದೇವಿ ಕೊಳಕಿ, ಜಿ.ಎಸ್. ಪಾಟೀಲ, ಸುರೇಶ ನಡೋಣಿ, ರೇಶ್ಮಾ ಗಜಾಕೋಶ, ಗೀತಾ ಸಜ್ಜನ, ವಿದ್ಯಾರ್ಥಿ ಪ್ರತಿನಿಧಿ ಸುಧಾ ಕಾಮಾನಿ, ತೋಹಿದ್ ಬಾಗಿ, ದಾನಮ್ಮ ಮುಗಳಖೋಡ ಇದ್ದರು.
ಬನಹಟ್ಟಿಯ ತಮ್ಮಣ್ಣಪ್ಪ ಚಿಕ್ಕೋಡಿ ಕಾಲೇಜಿನಲ್ಲಿ ನಡೆದ ಶಿಕರ ದಿನಾಚರಣೆಯಲ್ಲಿ ಡಾ.ಎಸ್. ರಾಧಾಕಷ್ಣನ್ ಭಾವಚಿತ್ರಕ್ಕೆ ಜಮಖಂಡಿ ಓಲೆಮಠದ ಆನಂದ ದೇವರು ಪೂಜೆ ಸಲ್ಲಿಸಿದರು. ಎಸ್. ಎಂ. ಹಾದಿಮನಿ, ಡಾ. ಜಿ. ಆರ್. ಜುನ್ನಾಯ್ಕರ ಇದ್ದರು.