ಜನಮೆಚ್ಚಿಸಿದ ‘ಶ್ರೀರಾಮ ದರ್ಶನ’ ಯಕ್ಷಗಾನ

ylp anagod
Published on

ಯಲ್ಲಾಪುರ: ತಾಲೂಕಿನ ಆನಗೋಡ ಯಕ್ಷಗಾನ ಹಾಗೂ ಕಲಾಮಿತ್ರ ಮಂಡಳಿ ಟ್ರಸ್ಟ್​ನ 20ನೇ ವಾರ್ಷಿಕೋತ್ಸವ ಆನಗೋಡ ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಸಭಾಭವನದಲ್ಲಿ ಭಾನುವಾರ ನಡೆಯಿತು.

ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ಗಣಪತಿ ಮಾನಿಗದ್ದೆ ಕಾರ್ಯಕ್ರಮ ಉದ್ಘಾಟಿಸಿದರು. ಟ್ರಸ್ಟ್ ಅಧ್ಯಕ್ಷ ಸುಬ್ರಾಯ ಹೆಗಡೆ ಮಳಗಿಮನೆ ಹಾಗೂ ತರಗತಿಯ ಶಿಕ್ಷಕ ಸದಾಶಿವ ಮಲವಳ್ಳಿ ತರಬೇತಿ ಕೇಂದ್ರ ಸಾಗಿ ಬಂದ ಬಗ್ಗೆ ಹಾಗೂ ಉದ್ದೇಶದ ಕುರಿತು ವಿವರಿಸಿದರು. ಟ್ರಸ್ಟ್ ಸಂಚಾಲಕ ಸತೀಶ ಯಲ್ಲಾಪುರ, ಶಿಕ್ಷಕ ಅನಂತ ಹೆಗಡೆ ದಂತಳಿಗೆ, ಇತರರು ಉಪಸ್ಥಿತರಿದ್ದರು. ಟ್ರಸ್ಟ್​ನ ಸದಸ್ಯ ಶ್ರೀಧರ ಹೆಗಡೆ ಮಾಳಕೊಪ್ಪ ಕಾರ್ಯಕ್ರಮ ನಡೆಸಿದರು.

ಟ್ರಸ್ಟ್​ನ ತರಬೇತಿ ಕೇಂದ್ರದ ವಿದ್ಯಾರ್ಥಿಗಳಿಂದ ಅನಂತ ಹೆಗಡೆ ದಂತಳಿಗೆ ವಿರಚಿತ ‘ಶ್ರೀರಾಮ ದರ್ಶನ’ ಯಕ್ಷಗಾನ ಅನಂತ ಹೆಗಡೆ ಹಾಗೂ ಸದಾಶಿವ ಭಟ್ಟ ಮಾರ್ಗದರ್ಶನದಲ್ಲಿ ಪ್ರದರ್ಶನಗೊಂಡಿತು. ಮದ್ದಲೆವಾದಕರಾಗಿ ನರಸಿಂಹ ಭಟ್ಟ ಹಂಡ್ರಮನೆ, ಚಂಡೆವಾದಕರಾಗಿ ಪ್ರಮೋದ ಕಬ್ಬಿನಗದ್ದೆ ಭಾಗವಹಿಸಿದ್ದರು. ಮತ್ಸಾ್ಯವತಾರದಿಂದ ರಾಮಾವತಾರದವರೆಗಿನ ದೃಶ್ಯಗಳನ್ನು ವಿದ್ಯಾರ್ಥಿಗಳು ಮನಮುಟ್ಟುವಂತೆ ಅಭಿನಯಿಸಿ, ಮೆಚ್ಚುಗೆ ಗಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net