ಬ್ಯಾಟರಾಯನಪುರ : ದೇಶಭಕ್ತಿ, ದೇಶದ ರಕ್ಷಣೆ, ದೇಶದ ಗೌರವದ ವಿಷಯ ಬಂದಾಗ ರಾಜಕೀಯ ದೃಷ್ಟಿಕೋನವನ್ನು ಬದಿಗಿಟ್ಟು, ನಾವೆಲ್ಲರೂ ಒಂದೇ ಎಂಬ ಭಾವನೆಯಿಂದ ಒಗ್ಗಟ್ಟಾಗಬೇಕು ಎಂದು ಕೇಂದ್ರ ಪಂಚಾಯತ್ ರಾಜ್ ಸಚಿವ ಕಪಿಲ್ ಮೋರೇಶ್ವರ್ ಪಾಟೀಲ್ ಅಭಿಪ್ರಾಯಪಟ್ಟರು.
ಬಾಗಲೂರು ಕ್ರಾಸ್ ಸಮೀಪ ಇರುವ ಬಿಎಸ್‌ಎ್ ಸಹಾಯಕ ಪ್ರಶಿಕ್ಷಣ ಕೇಂದ್ರದಲ್ಲಿ ಸೋಮವಾರ ಆಯೋಜಿಸಿದ್ದ ರೋಜ್‌ಗಾರ್ ಮೇಳದಲ್ಲಿ ಭಾರತೀಯ ಸೇನೆಯ ವಿವಿಧ ವಿಭಾಗಗಳಲ್ಲಿ ಕಾರ್ಯ ನಿರ್ವಹಿಸಲು ತರಬೇತಿಗಾಗಿ ಆಯ್ಕೆಯಾಗಿರುವ ೨೨೪ ಯುವ ಸೇನಾನಿಗಳಿಗೆ ನಿಯುಕ್ತಿ ಪತ್ರ ವಿತರಿಸಿ ಮಾತನಾಡಿದರು.
ಇಸ್ರೋ ಮಹತ್ವದ ಯೋಜನೆಯಾದ ‘ಚಂದ್ರಯಾನ-೩’ರ ಯಶಸ್ಸು ಜಾಗತಿಕ ಮಟ್ಟದಲ್ಲಿ ಭಾರತದ ಕೀರ್ತಿಯನ್ನು ಆಗಸದೆತ್ತರಕ್ಕೆ ಏರಿಸಿದ್ದು, ವಿಶ್ವದ ಹಲವು ಅಗ್ರಗಣ್ಯ ದೇಶಗಳು ಭಾರತೀಯರ ಈ ಸಾಧನೆಯನ್ನು ಬೆರಗುಗಣ್ಣಿನಿಂದ ನೋಡುತ್ತಿದ್ದಾರೆ. ಆದರೆ ವಿಚಾರವಂತರು ಎಂಬ ಹಣೆ ಪಟ್ಟಿ ಧರಿಸಿರುವ ಕೆಲವು ಭಾರತೀಯರು ಇಸ್ರೋ ಸಂಸ್ಥೆಯ ಸಾಧನೆಯನ್ನು ರಾಜಕೀಯ ದೃಷ್ಟಿಯಲ್ಲಿ ನೋಡುವ ಮೂಲಕ ಅಣಕಿಸುವಂತೆ ಮಾತನಾಡುತ್ತಿರುವುದು ಶೋಭೆ ತರುವಂತಹದ್ದಲ್ಲ. ದೇಶಭಕ್ತಿ, ದೇಶದ ರಕ್ಷಣೆ, ದೇಶದ ಗೌರವದ ವಿಷಯ ಬಂದಾಗ ರಾಜಕೀಯ ದೃಷ್ಟಿಕೋನವನ್ನು ಬದಿಗಿಟ್ಟು, ನಾವೆಲ್ಲರೂ ಒಂದೇ ಎಂಬ ಭಾವನೆಯಿಂದ ಒಗ್ಗಟ್ಟಾಗಬೇಕು ಎಂದರು.
ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ದೇಶಾದ್ಯಂತ ಇಂದು ಯುವಕರಿಗಾಗಿ ರೋಜ್‌ಗಾರ್ ಮೇಳ (ಉದ್ಯೋಗ ಮೇಳ) ನಡೆಯುತ್ತಿದ್ದು, ಇದರ ಭಾಗವಾಗಿ ಬೆಂಗಳೂರಿನ ಬಿಎಸ್‌ಎ್ ತರಬೇತಿ ಕೇಂದ್ರದಲ್ಲಿ ೨೨೪ ಯುವಕ-ಯುವತಿಯರಿಗೆ ಭಾರತೀಯ ಸೇನೆಯ ಬಿಎಸ್‌ಎ್, ಸಿಆರ್‌ಪಿಎ್, ಎಸ್‌ಎಸ್‌ಬಿ ಮತ್ತು ಐಟಿಬಿಪಿ ಮುಂತಾದ ವಿಭಾಗಗಗಳಲ್ಲಿ ಕಾರ್ಯನಿರ್ವಹಿಸಲು ನೇಮಕಾತಿ ಮಾಡಿ, ಇಂದು ನಿಯುಕ್ತಿ ಪತ್ರ ವಿತರಿಸಲಾಗಿದ್ದು, ನಿಯುಕ್ತಿ ಪತ್ರ ಪಡೆದ ಯುವ ಸೇನಾನಿಗಳು ತಾವು ಕಾರ್ಯನಿರ್ವಹಿಸಲಿರುವ ವಿಭಾಗಗಳಲ್ಲಿ ತರಬೇತಿಗಾಗಿ ತೆರಳಲಿದ್ದಾರೆ. ಬದಲಾಗುತ್ತಿರುವ ಬಲಿಷ್ಠ ಭಾರತದ ಸೇನೆಯಲ್ಲಿ ಸೇವೆ ಸಲ್ಲಿಸಲು ಈ ೨೨೪ ಯುವ ಸೈನಿಕರು ಸರ್ವ ರೀತಿಯಲ್ಲಿ ಸಜ್ಜಾಗಿ ತೆರಳುತ್ತಿದ್ದಾರೆ ಇವರಿಗೆ ಶುಭವಾಗಲಿ ಎಂದು ಹಾರೈಸಿದರು.
ಮೋದಿಯವರ ನೇತೃತ್ವದಲ್ಲಿ ಭಾರತ ಕೈಗಾರಿಕೆ, ವಿಜ್ಞಾನ, ತಂತ್ರಜ್ಞಾನ, ರಕ್ಷಣೆ, ಗ್ರಾಮೀಣಾಭಿವೃದ್ಧಿ ಸೇರಿ ವಿವಿಧ ಕ್ಷೇತ್ರಗಳಲ್ಲಿ ಜಾಗತಿಕ ಮಟ್ಟದಲ್ಲಿ ಉನ್ನತ ಸ್ಥಾನ ತಲುಪುತ್ತಿದ್ದು, ಚಂದ್ರಯಾನ-೩ ಮೂಲಕ ಚಂದ್ರನ ದಕ್ಷಿಣ ಧೃವಕ್ಕೆ ಜಗತ್ತಿನಲ್ಲೇ ಮೊದಲು ಉಪಗ್ರಹ ಉಡಾವಣೆ ಮಾಡಿರುವ ಅಪ್ರತಿಮ ಕೀರ್ತಿಗೆ ಭಾರತ ಭಾಜನವಾಗಿದೆ. ಈ ದಿಸೆಯಲ್ಲಿ ಭಾರತ ವಿಶ್ವಗುರುವಾಗುವತ್ತ ಧಾಪುಗಾಲು ಹಾಕುತ್ತಿರುವುದು ಹೆಮ್ಮೆಯ ಸಂಗತಿ. ಆದರೆ ಕೆಲವರು ಚಂದ್ರಯಾನ-೩ರ ಯಶಸ್ಸಿನ ಬಗ್ಗೆ ಕುಹಕದ ಮಾತನಾಡುವ ಮೂಲಕ ನಮ್ಮ ವಿಜ್ಞಾನಿಗಳ ಸಾಧನೆಯನ್ನು ಅಪಮಾನಿಸಿರುವುದು ದುರ್ದೈವದ ಸಂಗತಿ, ದೇಶದ ಕೀರ್ತಿಯನ್ನು ಆಗಸದೆತ್ತರಕ್ಕೆ ಕೊಂಡೊಯ್ದಿರುವ ನಮ್ಮ ವಿಜ್ಞಾನಿಗಳ ಸಾಧನೆಯನ್ನು ರಾಜಕೀಯ ದೃಷ್ಟಿಕೋನದಲ್ಲಿ ನೋಡುವ ಪರಿಕ್ರಮ ಸರಿಯಾದ್ದುದ್ದಲ್ಲ. ಇಂತಹ ಮನಸ್ಥಿತಿಗಳು ಬದಲಾಗಬೇಕು. ದೇಶದ ವಿಷಯ ಬಂದಾಗ ನಾವೆಲ್ಲರೂ ಒಂದೇ ಎಂಬ ಭಾವನೆ ಮೇಳೈಸಬೇಕೆ ಹೊರತು ಇಂತಹ ರಾಜಕೀಯ ದೃಷ್ಟಿಕೋನ ಉತ್ತಮವಾದ ನಡೆಯಲ್ಲ ಎಂದರು.
ಕಾರ್ಯಕ್ರಮದಲ್ಲಿ ಬೆಂಗಳೂರು ಬಿಎಸ್‌ಎ್ ಸಹಾಯಕ ಪ್ರಶಿಕ್ಷಣ ಕೇಂದ್ರದ ಐಜಿಗಳಾದ ಜಾರ್ಜ್ ಮಂಜೂರನ್, ಪಿ.ವಿ.ಈಪನ್, ಕಮಾಂಡೆಂಟ್ ವಿಪಿನ್ ವಿಲಾಸ್ ನಾಯ್ಕ ಮತ್ತಿತರರು ಇದ್ದರು.