

ಕರಿಯಪ್ಪ ಅರಳಿಕಟ್ಟಿ ರಾಣೆಬೆನ್ನೂರ
ಜಿಲ್ಲಾ ಪೊಲೀಸ್ ಇಲಾಖೆ ತನ್ನ ಸಿಬ್ಬಂದಿ ಹಾಗೂ ಅಕಾರಿಗಳಿಗೆ ಬಾಡಿ ಕ್ಯಾಮರಾ ಅಳವಡಿಸುವ ಮೂಲಕ ಪೊಲೀಸರ ಕಾರ್ಯ ವೈಖರಿ ಜತೆಗೆ ಸಾರ್ವಜನಿಕರ ದುರ್ನಡತೆ ಮೇಲೆಯೂ ದೃಷ್ಟಿ ನೆಡಲು ಕ್ರಮ ಕೈಗೊಂಡಿದೆ.
ಕ್ಯಾಮರಾವು ಪೊಲೀಸ್ ಅಕಾರಿಗಳ ಸಮವಸದ ಒಂದು ಭಾಗವಾಗಲಿದ್ದು, ಲಾಠಿ, ವಾಕಿಟಾಕಿ ಜತೆಗೆ ಕಡ್ಡಾಯವಾಗಲಿದೆ. ಎದೆಯ ಭಾಗದಲ್ಲಿ ಅಂಗಿಗೆ ಅಳವಡಿಸಿದ ಕ್ಯಾಮರಾಗಳು ಕರ್ತವ್ಯದ ವೇಳೆ ಸಂಭವಿಸುವ ಘಟನಾವಳಿಗಳನ್ನು ಸೆರೆ ಹಿಡಿಯಲು ಪೊಲೀಸರ ನೆರವಿಗೆ ಬರಲಿವೆ. ಎಲ್ಲ ಸಂಚಾರ, ಶಹರ ಪೊಲೀಸ್ ಠಾಣೆ ಹಾಗೂ ಹೈವೇ ಪೆಟ್ರೋಲಿಂಗ್ ವಾಹನಗಳಿಗೆ ತಲಾ ಒಂದರಂತೆ ಕ್ಯಾಮರಾಗಳ ಅಗತ್ಯವಿದೆ. ಅನುದಾನ ನೋಡಿಕೊಂಡು ಉಳಿದ ಕ್ಯಾಮರಾಗಳನ್ನು ಖರೀದಿಸಲು ಪೊಲೀಸ್ ಇಲಾಖೆ ನಿರ್ಧರಿಸಿದೆ.
ಜಿಲ್ಲೆಗೆ 37 ಬಾಡಿ ಕ್ಯಾಮರಾಗಳನ್ನು ತರಿಸಿಕೊಳ್ಳಲಾಗಿದೆ. ಅವುಗಳನ್ನು ಸದ್ಯ ಹಾವೇರಿ ಹಾಗೂ ರಾಣೆಬೆನ್ನೂರ ಸಂಚಾರ ಪೊಲೀಸ್ ಠಾಣೆಗಳಿಗೆ ಹಂಚಿಕೆ ಮಾಡಲಾಗಿದೆ. ಇನ್ನು ಸಂಚಾರ ನಿಯಮ ಉಲ್ಲಂಸಿಲ್ಲವೆಂದು ವಾದಕ್ಕೆ ಇಳಿದಲ್ಲಿ ಪೊಲೀಸರು ಅನುಚಿತವಾಗಿ ವರ್ತಿಸಿದರೆ ಎಲ್ಲವೂ ಕ್ಯಾಮರಾದಲ್ಲಿ ಸೆರೆಯಾಗಿರುತ್ತವೆ.
ಕೆಲವೊಮ್ಮೆ ಪೊಲೀಸರು ಹಣ ಪಡೆಯುವುದನ್ನು ಮಾತ್ರ ಮೊಬೈಲ್‌ನಲ್ಲಿ ಚಿತ್ರೀಕರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡುತ್ತಾರೆ. ಆದರೆ, ರಸೀದಿ ಕೊಡುವುದನ್ನು ಚಿತ್ರೀಕರಿಸಿರುವುದಿಲ್ಲ. ಇದು ಪೊಲೀಸರಿಗೆ ಕೆಟ್ಟ ಹೆಸರು ತರುವ ಪ್ರಯತ್ನವೂ ಆಗಿರುತ್ತದೆ. ಬಾಡಿ ಕ್ಯಾಮರಾದಲ್ಲಿ ಎಲ್ಲವೂ ಸೆರೆಯಾಗುವುದರಿಂದ ಯಾರೂ ತಪ್ಪಿಸಿಕೊಳ್ಳಲು ಅವಕಾಶವೇ ಇರುವುದಿಲ್ಲ!
ಪೊಲೀಸ್ ಅಕಾರಿ ಕರ್ತವ್ಯಕ್ಕೆ ಹಾಜರಾದ ಸ್ಥಳದಲ್ಲಿ ನಡೆಯುವ ದೃಶ್ಯಗಳೂ ಇದರಲ್ಲಿ ಸೆರೆಯಾಗುತ್ತವೆ. ಅಲ್ಲದೆ ಪೊಲೀಸ್ ಅಕಾರಿಯ ಧ್ವನಿ ಹಾಗೂ ಇತರರ ಧ್ವನಿ, ದೃಶ್ಯವೂ ದಾಖಲಾಗುತ್ತದೆ. ಅತ್ಯಾಧುನಿಕ ತಂತ್ರಜ್ಞಾನ ಹೊಂದಿರುವ ಈ ಕ್ಯಾಮರಾಗಳು 8 ಗಂಟೆ ಕಾಲ ದೃಶ್ಯಗಳನ್ನು ಸೆರೆಹಿಡಿಯುವ ಸಾಮರ್ಥ್ಯ ಹೊಂದಿವೆ.
ಸಂಚಾರ ನಿಯಮ ಉಲ್ಲಂಘನೆ ಮಾತ್ರವಲ್ಲದೆ ಕೋಮುಗಲಭೆ, ಬಂದ್, ಮುಷ್ಕರದ ಸಮಯದಲ್ಲಿ ಕಾನೂನು ಸುವ್ಯವಸ್ಥೆ ಹಾಳು ಮಾಡುವ ದುಷ್ಕರ್ಮಿಗಳ ವಿರುದ್ಧ ಸಾಕ್ಷಿ ಸಮೇತ ಮಾಹಿತಿ ಒದಗಿಸಲು ಹಾಗೂ ಇತರ ಸಂದರ್ಭಗಳಲ್ಲೂ ಈ ಕ್ಯಾಮರಾ ಹೆಚ್ಚು ಉಪಯುಕ್ತವಾಗಿದೆ.
ನಿಯಮಗಳನ್ನು ಉಲ್ಲಂಸಿ ವಾಹನ ಚಲಾಯಿಸುವವರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸುವ ಸಮಯದಲ್ಲಿ ಕೆಲವರು ಪೊಲೀಸರ ವಿರುದ್ಧವೇ ತಿರುಗಿಬೀಳುತ್ತಾರೆ. ಪ್ರಭಾವಿಗಳ ಹೆಸರು ಬಳಸಿ ದಂಡ ಪಾವತಿಸದೇ ಹೋಗುವುದಿದೆ. ಆದರೆ, ಪೊಲೀಸರು ಬಾಡಿ ಕ್ಯಾಮರಾ ಬಳಸುವುದರಿಂದ ಅಂಥವರು ವಿ ಇಲ್ಲದೆ ದಂಡ ಕಟ್ಟಬೇಕಾಗುತ್ತದೆ. ಮುಂದಿನ ದಿನಗಳಲ್ಲಿ ರಕ್ಷಣಾ ಅಸವಾಗಿ ಕ್ಯಾಮರಾ ಬಳಕೆಯಾಗಲಿದೆ ಎಂಬುದು ಪೊಲೀಸರ ಆಶಾಭಾವನೆಯಾಗಿದೆ.
ಸಾರ್ವಜನಿಕರೊಂದಿಗೆ ಪೊಲೀಸರು ಸರಿಯಾಗಿ ವರ್ತಿಸುವುದಿಲ್ಲ. ಅಸಭ್ಯ ಪದ ಬಳಕೆ ಮಾಡುತ್ತಾರೆ. ದಕ್ಷತೆಯಿಂದ ಕರ್ತವ್ಯ ನಿರ್ವಹಿಸುವುದಿಲ್ಲ ಎಂಬಿತ್ಯಾದಿ ಆರೋಪಗಳಿವೆ. ಬಾಡಿ ಕ್ಯಾಮರಾದಲ್ಲಿ ಎಲ್ಲವೂ ರೆಕಾರ್ಡ್ ಆಗುವುದರಿಂದ ಕ್ಯಾಮರಾ ಧರಿಸುವ ಪೊಲೀಸರು ಜನಸ್ನೇಹಿಯಾಗಿ ವರ್ತಿಸಬಲ್ಲರು ಎಂಬ ನಿರೀಕ್ಷೆಯಿದೆ. ಆದರೆ, ಈ ಕ್ಯಾಮರಾ ಆನ್ ಆ್ಯಂಡ್ ಹ್ಾ ಮಾಡುವ ಅವಕಾಶವು ಇದನ್ನು ಧರಿಸುವರಿಗೇ ಇರುತ್ತದೆ.
ಕ್ಯಾಮರಾವನ್ನು ಬೇಕಾದ ದಿಕ್ಕುಗಳಿಗೆ ತಿರುಗಿಸಿಕೊಳ್ಳಲು ಅವಕಾಶವಿದ್ದು, ಇದಕ್ಕೆ ಸಂಬಂಸಿದ ಸರ್ವರ್ ಜಿಲ್ಲಾ ಪೊಲೀಸ್ ಅೀಕ್ಷಕರ ಕಚೇರಿಯಲ್ಲಿದೆ. ವಾರಕ್ಕೊಮ್ಮೆ ಈ ದೃಶ್ಯಗಳನ್ನು ಕ್ಯಾಮರಾದಿಂದ ಸರ್ವರ್‌ಗೆ ವರ್ಗಾಯಿಸಬಹುದು. 90 ದಿನ ದೃಶ್ಯಗಳನ್ನು ಉಳಿಸಿಕೊಳ್ಳಬಹುದಾಗಿದೆ. ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿಯೊಂದಿಗೆ ಇದು ಪ್ರಮುಖ ಸಾಕ್ಷ ಆಗಲಿದೆ.
ಜಿಲ್ಲೆಗೆ 37 ಬಾಡಿ ಕ್ಯಾಮರಾಗಳು ಬಂದಿವೆ. ಅವುಗಳನ್ನು ಈಗಾಗಲೇ ಹಾವೇರಿ ಹಾಗೂ ರಾಣೆಬೆನ್ನೂರ ಸಂಚಾರ ಪೊಲೀಸ್ ಠಾಣೆ ಸಿಬ್ಬಂದಿಗೆ ನೀಡಲಾಗಿದೆ. ಜತೆಗೆ, ಪೊಲೀಸ್ ಗಸ್ತು ವಾಹನ ಸಿಬ್ಬಂದಿಗೂ ಬಾಡಿ ಕ್ಯಾಮರಾ ನೀಡಲಾಗಿದೆ. ಇದರಿಂದ ಪಾರದರ್ಶಕತೆಗೆ ಹೆಚ್ಚಿನ ಆದ್ಯತೆ ದೊರೆಯಲಿದೆ.i ಅಂಶಕುಮಾರ, ಜಿಲ್ಲಾ ಪೊಲೀಸ್ ವರಿಷ್ಠಾಕಾರಿ, ಹಾವೇರಿ