ಕಾರೇಮನೆ ಗೇಟ್ ಕಡೆಯಿಂದ ಬರುವ ಮಾರ್ಗದಲ್ಲಿ ಹೊಳಲು ವೃತ್ತದ ಸಮೀಪ ಸರಣಿ ಗುಂಡಿಗಳಿವೆ. ಇದರಿಂದಾಗಿ ಪ್ರತಿನಿತ್ಯ ಜನರು ಸಂಚರಿಸಲು ಸಮಸ್ಯೆಯಾಗಿತ್ತು. ಈ ಹಿನ್ನೆಲೆಯಲ್ಲಿ ವರ್ಷಾ ಅವರು ಟಿಪ್ಪರ್‌ಗಳ ಮೂಲಕ ಮಣ್ಣನ್ನು ತರಿಸಿ ಗುಂಡಿಗಳಿಗೆ ಸುರಿಸಿ ಜೆಸಿಬಿ ಮೂಲಕ ಮುಚ್ಚಿಸಿದರು. ಇದರಿಂದಾಗಿ ಸಮಸ್ಯೆ ತಾತ್ಕಾಲಿಕವಾಗಿ ಕಡಿಮೆಯಾಗಿದೆ. ಆದರೆ ಇಂತಹ ಪ್ರಯತ್ನ ಮಾಡಿದ ಪಿಎಸ್ಐ ವರ್ಷಾ ಹಾಗೂ ಸಿಬ್ಬಂದಿಯ ಕಾರ್ಯಕ್ಕೆ ಸಾರ್ವಜನಿಕರು ಶ್ಲಾಘನೆ ವ್ಯಕ್ತಪಡಿಸಿದರು.