ಆರೋಪಿ ಬಂಧಿಸದೇ ಪೊಲೀಸರ ನಿರ್ಲಕ್ಷೃ

Crime Logo
Published on

ಮೈಸೂರು: ರಾಜೀವ್‌ನಗರದ ನಿಮ್ರಾ ಮಸೀದಿ ಪಕ್ಕದ ಬೇಕರಿಯೊಂದರ ಎದುರು ಈಚೆಗೆ ನಡೆದ ಮುಸ್ಲಿಂ ಧರ್ಮಗುರು ಮೊಹಮ್ಮದ್ ಅಕ್ಮಲ್ ಅವರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎ 2 ಆರೋಪಿಯಾಗಿರುವ ಬಿ.ಕೆ.ಅಲ್ತಾಫ್ ಖಾನ್ ಅವರನ್ನು ಪೊಲೀಸರು ಬಂಧಿಸದೆ ನಿರ್ಲಕ್ಷ್ಯ ತೋರುತ್ತಿದ್ದಾರೆ ಎಂದು ಮೃತರ ಸಹೋದರ ಸಿರಾಜ್ ಪಾಷ ದೂರಿದರು.

ಕೊಲೆಯಾಗುವ ಮೊದಲು ಮೊಹಮ್ಮದ್ ಅಕ್ಮಲ್ ಅವರಿಗೆ ಬಿ.ಕೆ.ಅಲ್ತಾಫ್ ಸಾರ್ವಜನಿಕರ ಸಮ್ಮುಖದಲ್ಲಿಯೇ ಕೊಲೆ ಬೆದರಿಕೆ ಹಾಕಿದ್ದರು. ಇದಕ್ಕೆ ಸಂಬಂಧಿಸಿದ ವಿಡಿಯೋಗಳು ಇದ್ದರೂ ಸರ್ಕಾರವೇ ಕೊಲೆ ಆರೋಪಿಗಳನ್ನು ರಕ್ಷಿಸುತ್ತಿದೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net