ಶಿಕ್ಷಣ ಕ್ಷೇತ್ರದ ಧ್ರುವತಾರೆ ನ. ವಜ್ರಕುಮಾರ

29 vikram 3
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ಧಾರವಾಡ ವಿದ್ಯಾಕಾಶಿ ಹೆಸರು ಪಡೆಯಲು ಜೆಎಸ್​ಎಸ್​ ಹಾಗೂ ಎಸ್​ಡಿಎಂ ಸಂಸ್ಥೆಗಳ ಕೊಡುಗೆ ಅಪಾರ. 1973ರಲ್ಲಿ ಡಾ. ಡಿ. ವೀರೇಂದ್ರ ಹೆಗ್ಗಡೆ ಜನತಾ ಶಿಣ ಸಮಿತಿಯನ್ನು ತಮ್ಮ ಸುಪದಿರ್ಗೆ ತೆಗೆದುಕೊಳ್ಳದಿದ್ದರೆ, ಈ ಭಾಗದ ಜನರು ಉತ್ತಮ ಶಿಣದಿಂದ ವಂಚಿತರಾಗುತ್ತಿದ್ದರು ಎಂದು ಜೆಎಸ್​ಎಸ್​ ಶಿಣ ಸಂಸ್ಥೆ ಕಾರ್ಯದಶಿರ್ ಡಾ. ಅಜಿತ ಪ್ರಸಾದ ಅಭಿಪ್ರಾಯಪಟ್ಟರು.
ಡಾ. ನ. ವಜ್ರಕುಮಾರ 85ನೇ ಜನ್ಮದಿನ ನಿಮಿತ್ತ ನಗರದ ವಿದ್ಯಾಗಿರಿ ಜೆಎಸ್​ಎಸ್​ ಕಾಲೇಜಿನಲ್ಲಿ ಬುಧವಾರ ಆಯೋಜಿಸಿದ್ದ ಸಭೆಯಲ್ಲಿ ಅವರು ಮಾತನಾಡಿದರು.
ಡಾ. ನ. ವಜ್ರಕುಮಾರ ಜೆಎಸ್​ಎಸ್​ ಕಾರ್ಯದಶಿರ್ಯಾಗಿ ನೇಮಕವಾದಾಗ ವಿದ್ಯಾಥಿರ್ಗಳ ಸಂಖ್ಯೆ ಕೇವಲ 278. ಆಥಿರ್ಕವಾಗಿ ತೊಂದರೆಯಲ್ಲಿದ್ದ ಸಂಸ್ಥೆಯನ್ನು ಸದೃಢಗೊಳಿಸುವುದು ಹಾಗೂ ವಿದ್ಯಾಥಿರ್ಗಳ ಸಂಖ್ಯೆ ಹೆಚ್ಚಿಸುವುದು ಅವರಿಗೆ ಸವಾಲಾಗಿತ್ತು. ತಮ್ಮ ಅನುಭವದ ಮೂಲಕ ಸಮಿತಿಯ ಆಥಿರ್ಕತೆ ಪುನರುಜ್ಜೀವನಗೊಳಿಸಿದ್ದಲ್ಲದೇ, ವಿದ್ಯಾಥಿರ್ಗಳ ಸಂಖ್ಯೆ ವೃದ್ಧಿಸಿ ಜೆಎಸ್​ಎಸ್​ಗೆ ನವಚೈತನ್ಯ ತುಂಬಿದರು. ನಾನೂ ಅವರೊಟ್ಟಿಗೆ ಸಂಸ್ಥೆಗೆ ಆಗಮಿಸಿದ್ದರಿಂದ, ಹಿಂದಿನ ಕಷ್ಟದ ಜತೆಗೆ ಇಂದಿನ ಸುವರ್ಣ ಯುಗವನ್ನೂ ಕಾಣುತ್ತಿದ್ದೇನೆ ಎಂದರು.
ಡಾ. ಡಿ. ವೀರೇಂದ್ರ ಹೆಗ್ಗಡೆ ಆಶೀರ್ವಾದ ಹಾಗೂ ಮಾರ್ಗದರ್ಶನದಲ್ಲಿ ಜೆಎಸ್​ಎಸ್​ ಶಿಣ ಸಂಸ್ಥೆ ಅಡಿಯಲ್ಲಿ 4 ಕ್ಯಾಂಪಸ್​ಗಳಲ್ಲಿ 22 ಅಂಗ ಸಂಸ್ಥೆಗಳನ್ನು ಪ್ರಾರಂಭಿಸಿ, ಲಾಂತರ ವಿದ್ಯಾಥಿರ್ಗಳ ವಿದ್ಯಾರ್ಜನೆಗೆ ದಾರಿದೀಪವಾದರು. ತಮ್ಮ ಇಳಿ ವಯಸ್ಸಿನಲ್ಲೂ ಸಂಸ್ಥೆಯ ಏಳಿಗೆ, ಶ್ರೇಯೋಭಿವೃದ್ಧಿಗೆ ಚಿಂತಿಸುತ್ತಿದ್ದ ಮಹಾನ್​ ಚೇತನ ಡಾ. ನ.ವಜ್ರಕುಮಾರ ಎಂದರು.
ಜೆಎಸ್​ಎಸ್​ನ ವಿವಿಧ ಅಂಗ ಸಂಸ್ಥೆಗಳ ಶಿಣ ಸಂಸ್ಥೆಗಳ ಮುಖ್ಯಸ್ಥರಾದ ಮಹಾವೀರ ಉಪಾಧ್ಯೆ, ಸಾಧನಾ ಎಸ್​, ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net