ನಟ ಕಿಶೋರ್ ಅಭಿನಯದ ನಾಟಕ ಮೇ 31 ರಂದು ಪ್ರದರ್ಶನ

kishore
Published on

ಮೈಸೂರು: ರಂಗವಲ್ಲಿ ಮೈಸೂರು ವತಿಯಿಂದ ಮೇ 31 ರಂದು ಕಲಾಮಂದಿರ ಆವರಣದ ಕಿರುರಂಗಮಂದಿರದಲ್ಲಿ ಬೆಂಗಳೂರು ಥಿಯೇಟರ್ ಕಲೆಕ್ಟಿವ್ ಸಂಸ್ಥೆಯ ಕಲಾವಿದರು ಅಭಿನಯಿಸುವ ‘ಲವ್ ಲೆಟರ್ಸ್ ನಿನ್ನ ಪ್ರೀತಿಯ ನಾನು’ ನಾಟಕ ಪ್ರದರ್ಶನಗೊಳ್ಳಲಿದೆ. ಖ್ಯಾತ ನಟ ಕಿಶೋರ್ ಕುಮಾರ್, ನಟಿ ಸಿರಿ ರವಿಕುಮಾರ್ ನಾಟಕದಲ್ಲಿ ಅಭಿನಯಿಸುತ್ತಿದ್ದಾರೆ.

ಎ.ಆರ್. ಗರ್ನಿ ರಚನೆಯ ಈ ನಾಟಕದ ರೂಪಾಂತರ ಮತ್ತು ನಿರ್ದೇಶನವನ್ನು ರಂಗಕರ್ಮಿ ವೆಂಕಟೇಶ್ ಪ್ರಸಾದ್ ಮಾಡಿದ್ದಾರೆ. ಬಾಲ್ಯದ ಮುಗ್ಧತೆ, ಯೌವನದ ತುಂಟಾಟ, ಪ್ರೌಢಾವಸ್ಥೆಯ ಏಳುಬೀಳುಗಳು, ಇವುಗಳ ಮಧ್ಯೆ ಮೂಡುವ ಗೆಳೆತನ, ಅರಳುವ ಪ್ರೀತಿ, ಕಾಡುವ ನೆನಪು, ಅಗಲಿಕೆ , ಸಂತಸ, ನೋವು... ಹೀಗೆ ಹಲವು ವಿಚಾರಗಳು ಈ ನಾಟಕದಲ್ಲಿ ತೆರೆದುಕೊಳ್ಳುತ್ತದೆ. ಮೇ 31 ರಂದು ಸಂಜೆ 4 ಹಾಗೂ ಸಂಜೆ 7ಕ್ಕೆ ಎರಡು ಪ್ರದರ್ಶನಗಳನ್ನು ಏರ್ಪಡಿಸಲಾಗಿದೆ. ಮಾಹಿತಿಗೆ 9900182400 ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net