ಜನಮನ ಗೆದ್ದ ‘ಸತ್ಯವನ್ನೇ ಹೇಳುತ್ತೇನೆ’ ನಾಟಕ

Nataka
Published on

ಶಿರಸಿ: ನಗರದ ರಂಗಧಾಮದಲ್ಲಿ ಇತ್ತೀಚೆಗೆ ಪ್ರದರ್ಶನಗೊಂಡ ‘ಸತ್ಯವನ್ನೇ ಹೇಳುತ್ತೇನೆ’ ನಾಟಕ ಜನಮನ ಗೆಲ್ಲುವಲ್ಲಿ ಯಶಸ್ವಿಯಾಯಿತು.

ಸ್ವಾತಂತ್ರ್ಯ ಪೂರ್ವದ ರಾಜಕೀಯ ನೇತಾರರ ನಡೆ, ನಿಲುವುಗಳನ್ನು ಒರೆಗೆ ಹಚ್ಚುವಂತಹ ಪ್ರಯತ್ನ, ಬಹಿರಂಗವಾಗುವ ತಲ್ಲಣದ ಸಂಗತಿಗಳ ಹೂರಣವನ್ನು ನಾಟಕದಲ್ಲಿ ಪ್ರದರ್ಶಿಸಲಾಯಿತು. ಚರಿತ್ರೆಯ ಉತ್ಖನನ ಎಂಬ ಅಡಿ ಟಿಪ್ಪಣಿಯ ಈ ನಾಟಕ ಸ್ವಾತಂತ್ರ್ಯ ಹೋರಾಟದ ಆರು ಮಂದಿ ನಾಯಕರ ಸುತ್ತ ಗಿರಕಿ ಹೊಡೆಯುತ್ತದೆ. ಮಹಾತ್ಮ ಗಾಂಧಿ, ಜವಾಹರಲಾಲ್ ನೆಹರು, ಸರದಾರ ವಲ್ಲಭಬಾಯಿ ಪಟೇಲ್, ಸುಭಾಷ್ ಚಂದ್ರ ಬೋಸ್, ಬಿ.ಆರ್. ಅಂಬೇಡ್ಕರ್ ಮತ್ತು ವೀರ ಸಾವರ್ಕರ್ ಈ ನಾಯಕರು. ನೈಜ ಪಾತ್ರಧಾರಿಗಳಾದ ಅವರೆಲ್ಲ ಸಾಮಾನ್ಯ ರೈತನೊಬ್ಬ ನ್ಯಾಯಾಧೀಶ ಸ್ಥಾನದಲ್ಲಿ ಕುಳಿತು ವಕೀಲರ ಮೂಲಕ ವಿಚಾರಣೆ ನಡೆಸುವಾಗ ಕಟಕಟೆಯಲ್ಲಿ ನಿಂತು ಉತ್ತರಿಸುವ ರೀತಿಯಲ್ಲಿ ನಾಟಕ ಸಾಗಿದೆ.

ನಾಟಕಕಾರ ಅಡ್ಡಂಡ ಕಾರ್ಯಪ್ಪ ನಾಟಕದಲ್ಲಿ ನ್ಯಾಯಾಧೀಶರಾಗಿ ಮತ್ತು ಇನ್ನಷ್ಟು ಪಾತ್ರಗಳಲ್ಲಿ ನುರಿತ ಕಲಾವಿದರು ಸೊಗಸಾದ ಅಭಿನಯ ನೀಡಿದರು. ರವಿ ಮೂರೂರು ಹಿನ್ನೆಲೆ ಸಂಗೀತ ನೀಡಿದ್ದರು. ಇಲ್ಲಿಯ ಜೀವನ್ಮುಖಿ ಸಂಘಟನೆಯ ರಮಾನಂದ ಐನಕೈ ಮತ್ತು ನಾವು ನೀವು ಬಳಗದ ವಿ.ಪಿ. ಹೆಗಡೆ ತಂಡದವರು ನಾಟಕ ಆಯೋಜಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net