‘ಬೆತ್ತಲೆ ಅರಸನ ರಾಜರಹಸ್ಯ’ ನಾಟಕ

Beththale Arasa Photo (2) (2)
Published on

ಮೈಸೂರು: ರಾಮಕೃಷ್ಣನಗರದಲ್ಲಿರುವ ಮಂಡ್ಯ ರಮೇಶ್ ನೇತೃತ್ವದ ನಟನ ರಂಗಶಾಲೆಯಲ್ಲಿ ಸೆ. 18ರಂದು ಸಂಜೆ 6.30ಕ್ಕೆ ‘ಬೆತ್ತಲೆ ಅರಸನ ರಾಜರಹಸ್ಯ’ ನಾಟಕ ಪ್ರದರ್ಶನ ಆಯೋಜಿಸಲಾಗಿದೆ.


ಎಂಎಸ್‌ಕೆ ಪ್ರಭು ಅವರ ನೀಳ್ಗತೆಯನ್ನು ಆಧರಿಸಿದ ‘ಬೆತ್ತಲೆ ಅರಸನ ರಾಜರಹಸ್ಯ’ ನಾಟಕವನ್ನು ಮಂಡ್ಯ ರಮೇಶ್ ನಿರ್ದೇಶಿಸಿದ್ದಾರೆ. ನಟನ ರಂಗಶಾಲೆಯ 2021-22ನೇ ಸಾಲಿನ ರಂಗಭೂಮಿ ಡಿಪ್ಲೊಮಾ ವಿದ್ಯಾರ್ಥಿಗಳು ನಟಿಸಿದ್ದಾರೆ.

ನಾಟಕದ ರಂಗರೂಪ ಕುಸುಮಾ ಆಯರಹಳ್ಳಿ ಅವರದು. ದಿಶಾ ರಮೇಶ್ ಸಂಗೀತ ಒದಗಿಸಿದ್ದು, ನಟನ ಪ್ರಾಂಶುಪಾಲ ಮೇಘಾ ಸಮೀರ ನಾಟಕ ವಿನ್ಯಾಸಗೊಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net