ದಲಿತರನ್ನು ಒಕ್ಕಲೆಬ್ಬಿಸುವ ಹುನ್ನಾರ

Untitled-3
ದಲಿತರ ಹಕ್ಕೊತ್ತಾಯಗಳಿಗೆ ಆಗ್ರಹಿಸಿ ಹೊಸಕೋಟೆ ತಾಲೂಕು ಕಚೇರಿ ಆವರಣದಲ್ಲಿ ಕರ್ನಾಟಕ ದಲಿತ ಸಂರ್ಷ ಸಮಿತಿಯಿಂದ ಪ್ರತಿಭಟನೆ ನಡೆಸಲಾಯಿತು. ಕರ್ನಾಟಕ ದಲಿತ ಸಂರ್ಷ ಸಮಿತಿತ ಬೆಂ.ವಿಭಾಗೀಯ ಸಂಚಾಲಕ ಕೆ.ಆರ್​.ಮುನಿಯಪ್ಪ, ತಾಲೂಕು ಸಂಚಾಲಕ ಪೂಜಪ್ಪ ಕೋಟೋರು, ಅಶ್ವಥ್​ ಹಂದೇನಹಳ್ಳಿ ಇದ್ದರು.
Published on

ಹೊಸಕೋಟೆ : ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ತಾಲೂಕು ಕಚೇರಿ ಆವರಣದಲ್ಲಿ ಕರ್ನಾಟಕ ದಲಿತ ಸಂರ್ಷ ಸಮಿತಿಯಿಂದ ಪ್ರತಿಭಟನೆ ನಡೆಸಲಾಯಿತು. ಬಗರ್​ ಹುಕ್ಕುಂ ಸಾಗುವಳಿ ಮಾಡುತ್ತಿರುವ ದಲಿತರನ್ನು ಅರಣ್ಯ ಭೂಮಿ, ಅರಣ್ಯೀಕರಣ ಹಾಗೂ ಗೋಮಾಳಗಳೆಂದು ಕಾಯ್ದಿರಿಸುವ ನೆಪದಲ್ಲಿ ಒಕ್ಕಲೆಬ್ಬಿಸುತ್ತಿರುವ ಸರ್ಕಾರದ ನೀತಿ ಖಂಡನೀಯ ಎಂದು ಕರ್ನಾಟಕ ದಲಿತ ಸಂರ್ಷ ಸಮಿತಿಯ ತಾಲೂಕು ಪ್ರಧಾನ ಸಂಚಾಲಕ ಪಿ.ಎಂ.ಚಿನ್ನಸ್ವಾಮಿ ಅಸಮಾಧಾನ ವ್ಯಕ್ತಪಡಿಸಿದರು.

ದಲಿತರನ್ನು ಒಕ್ಕಲೆಬ್ಬಿಸಿ ಆ ಜಾಗದಲ್ಲಿ ಸರ್ಕಾರ ಕೈಗಾರಿಕೆ ಸ್ಥಾಪನೆಗೆ, ವಿದೇಶಿ ಬಂಡವಾಳಗಾರರಿಗೆ ಮೀಸಲಿಡುತ್ತಿದೆ, ದಲಿತರು ಸಲ್ಲಿಸಿರುವ ದರಖಾಸ್ತು ಭೂಮಿ ಸಕ್ರಮೀಕರಣದ ಆರ್ಜಿಗಳು ರಾಶಿಗಟ್ಟಲೆ ಕೊಳೆಯುತ್ತಿದ್ದು, ದಲಿತರು ದರಖಾಸ್ತು ಭೂಮಿಯಲ್ಲಿ ಉಳುಮೆ ಮಾಡುತಿಲ್ಲ ಎಂದು ಅಧಿಕಾರಿಗಳು ಸುಳ್ಳು ವರದಿ ನೀಡಿ ಆರ್ಜಿಗಳನ್ನು ವಜಾಗೊಳಿಸಲಾಗುತ್ತಿದ್ದಾರೆ. ಕೂಡಲೇ ಸರ್ಕಾರ ಎಚ್ಚೆತ್ತುಕೊಂಡು ದಲಿತರಿಗೆ ಭೂಮಿ, ವಸತಿ ಹಕ್ಕು ಮತ್ತು ಇತರ ಬೇಡಿಕೆ ಈಡೇರಿಸಬೇಕು ಎಂದು ಆಗ್ರಹಿಸಿದರು.

ಮುಖಂಡರಾದ ದೇವನಗುಂದಿ ನಾಗೇಶ್​, ಜಡಿಗೇನಹಳ್ಳಿ ರವಿಚಂದ್ರ, ಸುಬ್ರಮಣಿ ಶಶಿಮಾಕನಹಳ್ಳಿ, ತಾಲೂಕು ಖಜಾಂಚಿ ಮುರುಗೇಶ್​ ಹಂದೇನಹಳ್ಳಿ ಇದ್ದರು. ಹೊಸಕೋಟೆ ತಾಲೂಕಿನ ಹಲವಾರು ಬಾಗದಲ್ಲಿ ದಲಿತರಿಗೆ ಮಂಜೂರಾದ ಭೂಮಿಗಳನ್ನು ಬಲಾಢ್ಯರು ಒತ್ತುವರಿ ಮಾಡುತ್ತಿದ್ದು, ಕೂಡಲೆ ತೆರವುಗೊಳಿಸಿ ದಲಿತರಿಗೆ ಮಂಜೂರಾದ ಭೂಮಿಯನ್ನು ಅವರ ಹೆಸರಿಗೆ ಪೋಡಿ ಮಾಡಿಕೊಡಬೇಕು. ತಾಲೂಕಿನ ವಿವಿಧ ಗ್ರಾಮಗಳಲ್ಲಿ ಅಂಬೇಡ್ಕರ್​ ಭವನಕ್ಕೆ ಜಾಗ ಮಂಜೂರು ಮಾಡಿಕೊಡಬೇಕು. ಆಶ್ರಯ ಯೋಜನೆಯಡಿ ಬಡವರಿಗೆ ನಿವೇಶನ ಮಂಜೂರು ಮಾಡಲು ನಿರ್ದರಿಸಿದ್ದು ಭೂ ಸುಧಾರಣಾ ಕಾಯ್ದೆಯಂತೆ ಪರಿಷಿಷ್ಟ ಜಾತಿಯವರಿಗೆ ಶೇ.50ಕ್ಕಿಂತ ಕಡೆಮೆಯಾಗದಂತೆ ಹಂಚಿಕೆ ಮಾಡಬೇಕು ಎಂದು ಒತ್ತಾಯಿಸಿದರು.

ಕಾಲಮಿತಿಯಲ್ಲಿ ಇತ್ಯರ್ಥಗೊಳಿಸಿ : ಪರಿಶಿಷ್ಟ ಜಾತಿ ಹಾಗೂ ತಳ ಸಮುದಾಯ ದಗಳ ಭೂಹೀನರಿಗೆ ಉಳುಮೆ ಮಾಡುತ್ತಿರುವ ಬಗರ್​ ಹುಕುಂ ಭೂಮಿ ವಿವಾದವನ್ನು ಕಾಲಮಿತಿಯಲ್ಲಿ ಇತ್ಯರ್ಥಗೊಳಿಸಬೇಕು, ಪರಿಶಿಷ್ಟರ ಪಿಟಿಸಿಎಲ್​ ಕಾಯ್ದೆಯನ್ನು ಮಾನ್ಯ ಮಾಡದೆ ರಾಜ್ಯ ಸರ್ಕಾರ ಕಂದಾಯಾಧಿಕಾರಿಗಳ ವಿರುದ್ಧ ಕ್ರಮ ಜರುಗಿಸಬೇಕು. ನ್ಯಾಯಾಲಯದಲ್ಲಿ ಪಿಟಿಸಿಎಲ್​ ಪ್ರಕರಣಗಳು ವಜಾಗೊಳ್ಳುತಿದ್ದು, ನುರಿತ ವಕೀಲರನ್ನು ಸರ್ಕಾರ ನೇಮಕ ಮಾಡಬೇಕು ಎಂದು ಜಿಲ್ಲಾ ಪ್ರಧಾನ ಸಂಚಾಲಕ ಕೊರಳೂರು ಶ್ರೀನಿವಾಸ್​ ಒತ್ತಾಯಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net