ವೈದ್ಯಕಿಯ ಸೀಟು ಮಾರಿಕೊಳ್ಳುವ ಹುನ್ನಾರ

The plan to sell a doctor's seat
Published on

ವಿಜಯಪುರ:ಸರ್ಕಾರಿ ವೈದ್ಯಕಿಯ ಕಾಲೇಜು ಸ್ಥಾಪನೆಗಾಗಿ ಹೋರಾಟ ಸಮಿತಿಯಿಂದ ನಗರದ ಡಾ. ಬಿ.ಆರ್​. ಅಂಬೇಡ್ಕರ್​ ವೃತ್ತದ ಬಳಿ ನಡೆಯುತ್ತಿರುವ ಅರ್ನಿದಿಷ್ಟಾವಧಿ ಧರಣಿ ಸತ್ಯಾಗ್ರಹ ಮಂಗಳವಾರ 13ನೇ ದಿನ ಪೂರೈಸಿತು.ಆಮ್​ ಆದ್ಮಿ ಪಕ್ಷದ ರಾಜ್ಯ ಕಾರ್ಯದರ್ಶಿ ರವಿಕುಮಾರ್​ ಧರಣಿಗೆ ಬೆಂಬಲ ಸೂಚಿಸಿ ಮಾತನಾಡಿ, ಪಿಪಿಪಿ ಮಾದರಿಯಲ್ಲಿ ವೈದ್ಯಕಿಯ ಕಾಲೇಜು ಆರಂಭಿಸುವುದರಿಂದ ವೈದ್ಯಕಿಯ ಕಾಲೇಜ್​ ಖಾಸಗೀಯವರಿಗೆ ಮಾರಿದಂತಾಗುತ್ತದೆ. ಅಲ್ಲದೆ, ಮುಂದಿನ ದಿನಗಳಲಿ ವೈದ್ಯಕಿಯ ಸೀಟುಗಳನ್ನು ಮಾರಿಕೊಳ್ಳುವ ಹುನ್ನಾರವೂ ಇದರಲ್ಲಿ ಅಡಗಿದೆ ಎಂದು ದೂರಿದರು.

ರಾಜ್ಯ ರೈತ ಸಂದ ಸಿದ್ದನಗೌಡ ಪಾಟೀಲ ಮಾತನಾಡಿ, ಸರ್ಕಾರಿ ವೈದ್ಯಕಿಯ ಕಾಲೇಜಿನಲ್ಲಿ ಬಡ ಮತ್ತು ಹಿಂದುಳಿದ, ದಲಿತ ಮಕ್ಕಳು ಓದಲು ಸಾಧ್ಯವಿಲ್ಲ. ರೈತರ ಮಕ್ಕಳೂ ಉನ್ನತ ಮತ್ತು ವೈದ್ಯಕಿಯ ಶಿಕ್ಷಣ ಪಡೆಯಲು ಸರ್ಕಾರಿ ವೈದ್ಯಕಿಯ ಕಾಲೇಜು ನಮ್ಮ ಜಿಲ್ಲೆಗೆ ಅವಶ್ಯಕತೆ ಇದೆ ಎಂದರು.

ರಾಜ್ಯ ಜನಾರೋಗ್ಯ ಚಳವಳಿಯ ಟೀನಾ ಜೇವಿಯರ್​ ಮಾತನಾಡಿದರು. ವಿನಾಯಕ ಐಬಾಳ, ಬಾಬು ಬಿಜಾಪುರ, ಮೀರಸಾಬ ದಳವಾಯಿ, ಪೀರಸಾಬ ವಾಲೀಕರ, ಅವಿನಾಶ ಐಹೊಳೆ, ಹೋರಾಟ ಸಮಿತಿ ಸದಸ್ಯರಾದ ಅರವಿಂದ ಕುಲಕರ್ಣಿ, ಭಗವಾನ್​ ರೆಡ್ಡಿ, ಅಪ್ಪಾಸಾಹೇಬ ಯರನಾಳ, ಅನಿಲ ಹೊಸಮನಿ, ಲಲಿತಾ ಬಿಜ್ಜರಗಿ, ವಿದ್ಯಾವತಿ ಅಂಕಲಗಿ, ಸುರೇಶ ಬಿಜಾಪುರ, ಸುರೇಶ ಜೀಬಿ, ಲಕ್ಷ$್ಮಣ ಹಂದ್ರಾಳ, ಶ್ರೀನಾಥ ಪೂಜಾರಿ, ಮಲ್ಲಿಕಾರ್ಜುನ ಬಟಗಿ, ಸಿದ್ದಲಿಂಗ ಬಾಗೇವಾಡಿ, ಭರತಕುಮಾರ ಎಚ್​.ಟಿ. ಮತ್ತಿತರರಿದ್ದರು.

ಸರ್ಕಾರಿ ವೈದ್ಯಕಿಯ ಕಾಲೇಜು ಸ್ಥಾಪನೆಗೆ ಆಗ್ರಹಿಸಿ ವಿಜಯಪುರದ ಡಾ. ಬಿ.ಆರ್​. ಅಂಬೇಡ್ಕರ್​ ವೃತ್ತದ ಬಳಿ ನಡೆಯುತ್ತಿರುವ ಧರಣಿ ಸ್ಥಳಕ್ಕೆ ಆಮ್​ ಆದ್ಮಿ ಪಕ್ಷದ ರಾಜ್ಯ ಕಾರ್ಯದರ್ಶಿ ರವಿಕುಮಾರ್​ ಭೇಟಿ ನೀಡಿ ಮಾತನಾಡಿದರು. ವಿನಾಯಕ ಐಬಾಳ, ಬಾಬು ಬಿಜಾಪುರ, ಮೀರಸಾಬ ದಳವಾಯಿ ಮತ್ತಿತರರಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net