ಹಲವು ಕಡೆ ಬಿದ್ದಿದ್ದ ಕಸದ ರಾಶಿ ತೆರವು

21M.D.R.3
ಮದ್ದೂರು ಪಟ್ಟಣದ ಪೇಟೆಬೀದಿಯ ಬೈರಾನ್ ನಾಲೆಯ ಸಮೀಪದ ಬಿದ್ದಿದ್ದ ಕಸದ ರಾಶಿಯನ್ನು ತೆರವುಗೊಳಿಸುತ್ತಿರುವ ಪೌರ ಕಾರ್ಮಿಕರು.
Published on

ಮದ್ದೂರು: ಪಟ್ಟಣದ ಹಲವು ಕಡೆಗಳಲ್ಲಿ ಬಿದ್ದಿದ್ದ ಕಸದ ರಾಶಿಯನ್ನು ಪೌರ ಕಾರ್ಮಿಕರು ಮಂಗಳವಾರ ವಿಲೇಮಾರಿ ಮಾಡಿದರು.

ವಿಜಯವಾಣಿ ಪತ್ರಿಕೆಯಲ್ಲಿ ಮಂಗಳವಾರ ಕಸದ ರಾಶಿಯಿಂದ ಅನೈರ್ಮಲ್ಯ ಎಂಬ ಶೀರ್ಷಿಕೆಯಡಿ ವಿಶೇಷ ವರದಿ ಪ್ರಕಟಗೊಂಡ ಹಿನ್ನೆಲೆಯಲ್ಲಿ ಎಚ್ಚೆತ್ತ ಪುರಸಭಾ ಅಧಿಕಾರಿಗಳು ಪಟ್ಟಣದ ಪೇಟೆಬೀದಿ, ಬೆಂಗಳೂರು ಮೈಸೂರು ಹೆದ್ದಾರಿ ಸೇರಿದಂತೆ ಹಲವು ಕಡೆಗಳಲ್ಲಿ ಬಿದ್ದಿದ್ದ ರಾಶಿ ರಾಶಿ ಕಸವನ್ನು ವಾಹನಗಳನ್ನು ತಂದು ಪೌರ ಕಾರ್ಮಿಕರು ಅಧಿಕಾರಿಗಳ ಮಾರ್ಗದರ್ಶನದಲ್ಲಿ ವಿಲೇವಾರಿ ಮಾಡುವ ಮೂಲಕ ಸ್ವಚ್ಛಗೊಳಿಸಿದರು.

ಹೋಟೆಲ್‌ಗಳಲ್ಲಿ ಇಡ್ಲಿ ಸಿದ್ಧಪಡಿಸುವಾಗ ತೆಳುವಾದ ಪ್ಲಾಸ್ಟಿಕ್ ಕವರ್ ಹಾಕುವ ಹೋಟೆಲ್ ಮಾಲೀಕರಿಗೆ ನೋಟಿಸ್ ನೀಡಲಾಗಿದ್ದು, ಶೀಘ್ರವೇ ಅಧಿಕಾರಿಗಳ ತಂಡ ಹೋಟೆಲ್‌ಗೆ ಭೇಟಿ ನೀಡಿ ಪರಿಶೀಲಿಸಲಿದ್ದಾರೆ. ಈ ವೇಳೆ ಪ್ಲಾಸ್ಟಿಕ್ ಕವರ್ ಹಾಕಿ ಇಡ್ಲಿ ತಯಾರು ಮಾಡುವುದು ಕಂಡುಬಂದರೆ ಅಂತಹ ಹೋಟೆಲ್‌ಗಳ ಪರವಾನಗಿ ರದ್ದು ಮಾಡಲಾಗುವುದು ಎಂದು ಪುರಸಭಾ ಮುಖ್ಯಾಧಿಕಾರಿ ಕರಿಬಸವಯ್ಯ ಎಚ್ಚರಿಕೆ ನೀಡಿದ್ದಾರೆ.

ವರದಿಗೆ ಪ್ರಶಂಸೆ: ವಿಜಯವಾಣಿ ಪತ್ರಿಕೆ ಕಸದ ರಾಶಿಯ ಸಮಸ್ಯೆ ಬಗ್ಗೆ ವರದಿ ಮಾಡಿದ ಪರಿಣಾಮ ಅಧಿಕಾರಿಗಳು ಕಸ ವಿಲೇಮಾರಿ ಮಾಡಲು ಅಗತ್ಯ ಕ್ರಮ ಕೈಗೊಂಡ ಹಿನ್ನೆಲೆಯಲ್ಲಿ ಸಾರ್ವಜನಿಕರು ಪತ್ರಿಕೆಯ ವರದಿ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net