ಸ್ವಚ್ಛತಾ ಕಾರ್ಯವಿಲ್ಲದೆ ಹೆಚ್ಚುತ್ತಿದೆ ಕಸದ ರಾಶಿ

Untitled-3
ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ವಿಜಯಪುರ ಪುರಸಭೆ ಆವರಣದಲ್ಲಿ ಪೌರಕಾರ್ಮಿಕರು ಪ್ರತಿಭಟಿಸಿದರು. ಕಾರ್ಮಿಕರಾದ ಮೂರ್ತಿ, ಲಕ್ಷ$್ಮಮ್ಮ, ಇತರರಿದ್ದರು.
Published on

ವಿಜಯಪುರ: ಪೌರಕಾರ್ಮಿಕರ ಅರ್ನಿದಿಷ್ಟಾವಧಿ ಮುಷ್ಕರ ಹಿನ್ನೆಲೆಯಲ್ಲಿ ಪಟ್ಟಣದ ಹಲವೆಡೆ ಕಸದ ರಾಶಿಗಳು ಹೆಚ್ಚುತ್ತಿದ್ದು, ಮಳೆಗೆ ಗಬ್ಬು ನಾರುತ್ತಿವೆ.

ಕೆಲವೆಡೆ ಒಳಚರಂಡಿಗಳಲ್ಲಿ ತ್ಯಾಜ್ಯ ಸಂಗ್ರಹಗೊಂದು ನೀರು ಸರಾಗವಾಗಿ ಹರಿಯುತ್ತಿಲ್ಲ. ಪಟ್ಟಣದ ಕೆಲ ವಾರ್ಡ್​ಗಳಲ್ಲಿ ಕಸದ ಸಂಗ್ರಹಿಸಲು ವಾಹನಗಳು ಬರುತ್ತಿಲ್ಲ. ಕಾರಣ ಸಾರ್ವಜನಿಕರು ಎಲ್ಲೆಂದರಲ್ಲಿ ಕಸ ಎಸೆಯುತ್ತಿದ್ದು, ಎಲ್ಲೆಡೆ ಅನೈರ್ಮಲ್ಯ ಉಂಟಾಗಿದೆ. ರಸ್ತೆಗಳಲ್ಲಿ ಮೂಗು ಮುಚ್ಚಿಕೊಂಡು ಓಡಾಡುವಂತಾಗಿದೆ. ಹಾಗಾಗಿ ಸರ್ಕಾರ ಕೂಡಲೇ ಪೌರಕಾರ್ಮಿಕರ ಬೇಡಿಕೆ ಈಡೇರಿಕೆಗೆ ಕ್ರಮವಹಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸುತ್ತಿದ್ದಾರೆ. ದಿನಕೂಲಿ ಪೌರಕಾರ್ಮಿಕ ಮೂರ್ತಿ ಮಾತನಾಡಿ, ಸರ್ಕಾರವು ನಮ್ಮನ್ನು ಖಾಯಂ ಮಾಡುವವರೆಗೂ ಧರಣೆ ನಿಲ್ಲುಸುವುದಿಲ್ಲ. ಪಟ್ಟಣದ ಸ್ವಚ್ಛತೆಗೆ ಕಷ್ಟ ಪಡುವ ನಮಗೆ ಸೌಲತ್ತು ನೀಡಲು ಏಕೆ ಮೀನಮೇಷ? ಸರ್ಕಾರ ನಮ್ಮ ಮನವಿಗೆ ಸ್ಪಂದಿಸಬೇಕು. ಇಲ್ಲವಾದಲ್ಲಿ ಹೋರಾಟ ಮುಂದುವರಿಯಲಿದೆ ಎಂದರು.

ಪೌರಕಾರ್ಮಿಕ ಮಹಿಳೆ ಲಕ್ಷ$್ಮಮ್ಮ ಮಾತನಾಡಿ, ಮಳೆ&ಗಾಳಿ ಅನ್ನದೇ ನಾವೆಲ್ಲ ದುಡಿಯುತ್ತೇವೆ. ಪ್ರತಿಯೊಬ್ಬರ ಮನೆ ಮುಂದೆ, ಯಾವುದೇ ಚರಂಡಿಯಾದರು ಕಸ ಎತ್ತುತ್ತೇವೆ. ಹಾಗಾಗಿ ದಿನವಿಡಿ ಪಟ್ಟಣದ ಸ್ವಚ್ಛತೆಗೆ ಶ್ರಮಿಸುವ ನಮಗೆ ಆರೋಗ್ಯ ಸೌಲಭ್ಯ ನೀಡುವಲ್ಲಿ, ನಮ್ಮನ್ನು ಖಾಯಂಗೊಳಿಸಲು ಸರ್ಕಾರ ಆದ್ಯತೆ ನೀಡಬೇಕು ಎಂದು ಆಗ್ರಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net