

ನೆಲಮಂಗಲ: ವಿಶ್ವಗುರು ಬಸವಣ್ಣನವರು ಪ್ರತಿಪಾದಿಸಿದ ಕಾಯಕ ಮತ್ತು ದಾಸೋಹ ತತ್ವಗಳು ಶ್ರೇಷ್ಠ ಮತ್ತು ಅನುಕರಣೀಯ ಎಂದು ಭಾಲ್ಕಿಯ ಹಿರೇಮಠ ಸಂಸ್ಥಾನದ ನಾಡೋಜ ಶ್ರೀ ಬಸವಲಿಂಗಪಟ್ಟದ ದೇವರು ತಿಳಿಸಿದರು. ಪವಾಡ ಶ್ರೀ ಬಸವಣ್ಣ ದೇವರ ಮಠದಲ್ಲಿ ಮಂಗಳವಾರ ಬಸವ ಸಂಸತಿ ಅಭಿಯಾನದ ಸಾರ್ವಜನಿಕ ಸಮಾವೇಶ ಉದ್ಘಾಟಿಸಿ ಮಾತನಾಡಿದರು. ರಾಜಕೀಯ, ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ, ನೈತಿಕ ಸಾಂಸ್ಕೃತಿಕ ಹೀಗೆ ಎಲ್ಲ ೇತ್ರಗಳಲ್ಲೂ ಪರಿವರ್ತನೆ ತಂದವರು ಬಸವಣ್ಣ. ಜಾತಿ, ಮತ, ಲಿಂಗ, ಬಡವ ಎನ್ನುವ ಭೇದವಿಲ್ಲದ ಸಮ ಸಮಾಜ ನೆಲೆಗೊಳಿಸಿದರು.
ಬಸವಣ್ಣನವರ ವಚನಗಳು ಪ್ರತಿಯೊಬ್ಬರಿಗೂ ಸ್ಫೂರ್ತಿದಾಯಕವಾಗಿದ್ದು, ಅವುಗಳನ್ನು ಜೀವನದಲ್ಲಿ ಆಳವಡಿಸಿಕೊಳ್ಳಬೇಕು. ಉಸಿರಾಟಕ್ಕೆ ಗಾಳಿ ಎಷ್ಟು ಮುಖ್ಯವೋ ವಚನ ಎಂಬುದೂ ಅಷ್ಟೇ ಮುಖ್ಯ. ದೇಶದ ಸಂವಿಧಾನದ ಆಶಯಗಳೆಲ್ಲ ಬಸವಾದಿ ಶರಣರ ವಚನ ಸಂವಿಧಾನದಲ್ಲಿ ಅಡಕವಾಗಿವೆ. ಬಸವಣ್ಣ ಸಾಂಸ್ಕೃತಿಕ ನಾಯಕ ಎಂದು ೂಷಿಸಿರುವುದರಿಂದ ಒಂದು ಜಾತಿಗೆ ಸೀಮಿತವಾಗದೆ ಅವರು ಎಲ್ಲರಿಗೂ ನಾಯಕ ಎಂದರು. ಶಾಸಕ ಎನ್.ಶ್ರೀನಿವಾಸ್ ಮಾತನಾಡಿ, 12ನೇ ಶತಮಾನದಲ್ಲಿ ಸಮಾಜಕ್ಕೆ ಕಾಂತ್ರಿಕಾರಿ ಸಂದೇಶ ನೀಡಿದ್ದ ಬಸವಣ್ಣ ಅವರ ವಚನಗಳು ಇಂದಿಗೂ ಪ್ರಸ್ತುತವಾಗಿದೆ. ಬಸವ ಸಂಸ್ಕೃತಿ ಪರಂಪರೆಯಲ್ಲಿ ಸಾಕಷ್ಟು ವಿಚಾರಗಳು ಅಡಕವಾಗಿದ್ದು, ಅದನ್ನು ಮುಂದುವರೆಸುವ ಕಾರ್ಯವನ್ನು ಶ್ರೀಗಳು ಮಾಡುತ್ತಿರುವುದು ಮಾದರಿ ಸಂಗತಿ. ರಾಜ್ಯದಲ್ಲಿ ಮಠಗಳು ಹೆಚ್ಚಾಗಿದ್ದು, ಸಮಾಜಕ್ಕೆ ದಿವ್ಯ ಜ್ಯೋತಿಯಾಗಿ ಸಂದೇಶವನ್ನು ನೀಡುತ್ತಿವೆ ಎಂದರು. ವೀರಶೈವ ಮಹಾಸಭಾ ಜಿಲ್ಲಾಧ್ಯಕ್ಷ ರೇವಣ್ಣಸಿದ್ದಯ್ಯ, ಪ್ರಧಾನ ಕಾರ್ಯದರ್ಶಿ ಶಾಂತಕುಮಾರ್, ತಾಲೂಕು ಅದ್ಯಕ್ಷ ರಾಜಶೇಖರ್, ಮುಖಂಡ ಲೋಕೇಶ್, ರಾಜಮ್ಮಪ್ರಕಾಶ್ ಉಪಸ್ಥಿತರಿದ್ದರು.
ವಚನ ಸಂವಾದ : ಬಸವಣ್ಣ ಅವರ ವಚನ ಸಾಹಿತ್ಯ, ಬಸವ ದರ್ಮದ ಬಗ್ಗೆ ವಿಶೇಷ ಸಂವಾದ ಹಮ್ಮಿಕೊಂಡಿದ್ದು, 100ಕಾಲೇಜು ವಿದ್ಯಾರ್ಥಿಗಳು ಇದ್ದರು. ಬಸವ ಸಾಂಸ್ಕೃತಿಕ ಅಭಿಯಾನ ಹಿನ್ನೆಲೆಯಲ್ಲಿ ಜಂಗದೆಡೆಗೆ ಎಂಬ ಸುಂದರ ಸಾಮಾಜಿಕ ನಾಟಕವನ್ನು ವೇದಿಕೆಯಲ್ಲಿ ಪ್ರದರ್ಶನ ನೀಡಲಾಯಿತು.
ರಾಜ್ಯ ಸರ್ಕಾರ ವಿಶ್ವ ಗುರು ಬಸವಣ್ಣನವರಿಗೆ ಸಾಂಸ್ಕೃತಿಕ ನಾಯಕ ಎಂದು ಗುರುತಿಸಿರುವ ಹಿನ್ನೆಲೆಯಲ್ಲಿ ಬಸವ ಸಂಸ್ಕೃತಿ ಅಭಿಯಾನದ ಸಮಾರೋಪ ಅ.5ರಂದು ಬೆಂಗಳೂರು ಅರಮನೆ ಮೈದಾನದಲ್ಲಿ ನಡೆಯಲಿದೆ. ಪ್ರತಿಯೊಬ್ಬ ಬಸವಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಬೇಕು. | ಶ್ರೀಸಿದ್ದಲಿಂಗಸ್ವಾಮೀಜಿ ಪವಾಡ ಶ್ರೀ ಬಸವಣ್ಣ ದೇವರ ಮಠ