ಶಿವಶರಣರ ತತ್ವವೇ ಸಮಪಾಲು-ಸಮಬಾಳು

KLG MACHIDEV
Published on

ಕಲಘಟಗಿ: ಹನ್ನೆರಡನೇ ಶತಮಾನದ ಶ್ರೇಷ್ಠ ವಚನಕಾರರಲ್ಲಿ ಮಾಚಿದೇವರು ಒಬ್ಬರು. ಸರ್ವರಿಗೂ ಸಮಪಾಲು- ಸಮಬಾಳು ಒದಗಿಸಲು ಶರಣರಲ್ಲಿ ಅಗ್ರಗಣ್ಯರಾಗಿದ್ದರು ಎಂದು ತಹಸೀಲ್ದಾರ್ ವೀರೇಶ ಮುಳಗುಂದಮಠ ಹೇಳಿದರು.</p><p>ಪಟ್ಟಣದ ತಹಸೀಲ್ದಾರ್ ಕಚೇರಿಯಲ್ಲಿ ತಾಲೂಕಾಡಳಿತ ಹಾಗೂ ತಾಲೂಕು ಮಡಿವಾಳ ಸಮಾಜ ವತಿಯಿಂದ ಆಯೋಜಿಸಿದ್ದ ಮಡಿವಾಳ ಮಾಚಿದೇವರ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ತಾಪಂ ಇಒ ಪರಶುರಾಮ ಸಾವಂತ ಮಾತನಾಡಿ, ಮಡಿವಾಳ ಮಾಚಿದೇವರು ವಚನಗಳ ಮೂಲಕ ಸಮಾಜದ ಕೊಳಕು ತೊಳೆದು ಹಾಕಿದವರು. ಶರಣರು ರಕ್ತ ಚೆಲ್ಲಿ ಕ್ರಾಂತಿ ಮಾಡಿದವರಲ್ಲ, ಭಕ್ತಿ ಚೆಲ್ಲಿ ಕ್ರಾಂತಿ ಮಾಡಿದವರು. ಮೌಢ್ಯಗಳಿಂದ ದೀನರ ಶೋಷಣೆ ನಡೆಯುತ್ತಿದ್ದ ಕಾಲದಲ್ಲಿ ಮಾಚಿದೇವ ಜಾಗೃತಿ ಮೂಲಕ ಶೋಷಣೆ ತಡೆಗಟ್ಟಿದರು. ಶರಣರು ಮಹಾಪುರುಷರು ಹಾಕಿಕೊಟ್ಟ ಮಾರ್ಗದರ್ಶನ ಹಾಗೂ ವಚನಗಳನ್ನು ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದರು.</p><p>ವಕೀಲರ ಸಂಘದ ತಾಲೂಕಾಧ್ಯಕ್ಷ ಅಣ್ಣಪ್ಪ ಓಲೇಕಾರ, ಮಡಿವಾಳ ಸಮಾಜದ ತಾಲೂಕಾಧ್ಯಕ್ಷ ರವಿ ಮಡಿವಾಳರ, ಸಂಜು ಮಡಿವಾಳರ, ಬಸವರಾಜ ಮಡಿವಾಳರ, ನಿಜಗುಣೆಪ್ಪ ಮಡಿವಾಳರ, ಮುತ್ತು ಮಡಿವಾಳರ, ಶಂಕ್ರಪ್ಪ ಮಡಿವಾಳರ, ಅಜ್ಜಪ್ಪ ಮಡಿವಾಳರ, ಬಸಪ್ಪ ಪುಟ್ಟಪ್ಪನವರ, ಮಂಜುನಾಥ ಬಡಿಗೇರ, ಸುರೇಶ ಮಡಿವಾಳರ, ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net