ಅನುಭವ ಮಂಟಪ ತತ್ವ ಇಂದಿಗೂ ಪಾಲನೆ

KDR kasaapa
ಜ್ಜಂಪುರದಲ್ಲಿ ಕಸಾಪದ ಶ್ರಾವಣ ಸಂಜೆ ಕಾರ್ಯಕ್ರಮವನ್ನು ಕಸಾಪ ಗೌರವ ಸಲಹೆಗಾರ ಎ.ಸಿ.ಚಂದ್ರಪ್ಪ, ಮೀನಾಕ್ಷಮ್ಮ, ಉದ್ಘಾಟಿಸಿದರು. ಸೂರಿ ಶ್ರೀನಿವಾಸ್, ಎಂ.ಕೃಷ್ಣಮೂರ್ತಿ, ಡಾ. ಜಯಪ್ರಕಾಶ್, ಗಾಯತ್ರಮ್ಮ ಇತರರಿದ್ದರು.
Published on

ಕಡೂರು: ಅನುಭವ ಮಂಟಪದ ಮೂಲಕ ವಿಶ್ವಕ್ಕೆ ಸಂವಿಧಾನದ ಪರಿಕಲ್ಪನೆ ನೀಡಿದವರು ಬಸವಣ್ಣ. ಅವರ ತತ್ವ ಇಂದಿಗೂ ಅನುಸರಿಸಲಾಗುತ್ತಿದೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಸೂರಿ ಶ್ರೀನಿವಾಸ್ ಹೇಳಿದರು.

ಅಜ್ಜಂಪುರ ಸಾಹಿತ್ಯ ಚಿಂತಕ ಎಂ.ಕೃಷ್ಣಮೂರ್ತಿ ನಿವಾಸದಲ್ಲಿ ಅಜ್ಜಂಪುರ ತಾಲೂಕು ಕಸಾಪ ಮಹಿಳಾ ಘಟಕದಿಂದ ಆಯೋಜಿಸಿದ್ದ ಶ್ರಾವಣ ಸಂಜೆಯ ಸಾಹಿತ್ಯ ಸುಧೆ ಕಾರ್ಯಕ್ರಮದಲ್ಲಿ ಮಾತನಾಡಿ, ಶರಣರು ಕಾಯಕ ಮತ್ತು ದಾಸೋಹ ಮಹತ್ವ ಸಾರಿ ಸಮ ಸಮಾಜ ನಿರ್ಮಾಣಕ್ಕೆ ಶ್ರಮಿಸಿದರು. ಅಂದಿನ ಶರಣರಲ್ಲಿ ನಡೆ, ನುಡಿ ಎರಡೂ ಒಂದಾಗಿತ್ತು ಎಂದರು.
ಕಸಾಪ ಗೌರವ ಸಲಹೆಗಾರ ಎ.ಸಿ.ಚಂದ್ರಪ್ಪ ಮಾತನಾಡಿ, ಶ್ರಾವಣ ಸಂಜೆ ಕಾರ್ಯಕ್ರಮ ಮೂಲಕ ಎಲ್ಲರನ್ನೂ ಒಂದೇ ವೇದಿಕೆಯಲ್ಲಿ ತರಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.
ತಾಪಂ ಮಾಜಿ ಅಧ್ಯಕ್ಷ ಎಂ.ಕೃಷ್ಣಮೂರ್ತಿ ಮಾತನಾಡಿ, ಶ್ರಾವಣ ಸಂಜೆ ವಿನೂತನ ಕಾರ್ಯಕ್ರಮಗಳಿಂದ ನಮ್ಮೆಲ್ಲರ ಮನಸ್ಸು ಹರ್ಷಗೊಳ್ಳುತ್ತದೆೆ. ಎಲ್ಲರೊಂದಿಗೆ ಬೆರೆತು ಸಾಗಲು ಸೂಕ್ತ ವೇದಿಕೆ ಕಲ್ಪಿಸಿದಂತಾಗಲಿದೆ ಎಂದರು.
ಉಪನ್ಯಾಸಕ ಡಾ. ಜಯಪ್ರಕಾಶ್, ಎ.ಎಸ್.ಶಿವಾನಂದ್, ಅಜ್ಜಂಪುರ ತಾಲೂಕು ಕಸಾಪ ಅಧ್ಯಕ್ಷ ಎಚ್.ಆರ್.ಚಂದ್ರಪ್ಪ, ಮೀನಾಕ್ಷಮ್ಮ, ಗಿರೀಶ್ ಚವ್ಹಾಣ್, ಗಾಯತ್ರಮ್ಮ, ಜ್ಯೋತಿ, ಎಚ್.ಡಿ.ಮಾಲತಿ, ಸತೀಶ್ ಕಾಟಿಗನೆರೆ, ಮೋಹನ್ ಜಾಧವ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net