

ವಿಜಯವಾಣಿ ಸುದ್ದಿಜಾಲ ಧಾರವಾಡ
ಗೃಹ ನಿರ್ಮಾಣದ ಸಹಕಾರಿ ಸಂಸ್ಥೆಗಳಿಗೆ ನತೆ ತಂದು ಕೊಟ್ಟವರು ಎಸ್.ಎಂ. ಹೊಳೆಯಣ್ಣವರ. ಇವರು ಕುಮಾರೇಶ್ವರ ಗೃಹ ನಿರ್ಮಾಣ ಸಹಕಾರಿ ಸಂದ ಅಧ್ಯರಾಗಿ ಮುನ್ನಡೆಸಿ ಮಾದರಿಯಾದವರು ಎಂದು ಸಹಕಾರ ಇಲಾಖೆ ವಿಶ್ರಾಂತ ಜಂಟಿ ನಿಬಂಧಕ ವೀರಣ್ಣ ಯಳಲ್ಲಿ ಅಭಿಪ್ರಾಯಪಟ್ಟರು.
ನಗರದ ಕರ್ನಾಟಕ ವಿದ್ಯಾವರ್ಧಕ ಸಂವು ಎಸ್.ಎಂ. ಹೊಳೆಯಣ್ಣವರ ದತ್ತಿ ನಿಮಿತ್ತ ಇತ್ತೀಚೆಗೆ ಆಯೋಜಿಸಿದ್ದ ಉಪನ್ಯಾಸ ಕಾರ್ಯಕ್ರಮದಲ್ಲಿ ಸಹಕಾರಿ ೇತ್ರದಲ್ಲಿ ಹೊಳೆಯಣ್ಣವರ ಪಾತ್ರ ಕುರಿತು ಮಾತನಾಡಿದರು.
ಸಹಕಾರಿ ಯೂನಿಯನ್ನಲ್ಲಿ ಗುಮಾಸ್ತರಾಗಿ ಸೇವೆಗೆ ನೇಮಕಗೊಂಡು ವಿವಿಧ ಹುದ್ದೆಗಳನ್ನು ಅಲಂಕರಿಸಿ 35ವರ್ಷ ಸೇವಾ ಅನುಭವ ಹೊಂದಿದ್ದ ಅವರು ನಿರ್ದೇಶಕರಾಗಿ ಆಯ್ಕೆಗೊಂಡರು. ಇದಕ್ಕೆ ಅವರ ನಿಸ್ವಾರ್ಥ ಸೇವೆಯೇ ಕಾರಣ. ಕಷ್ಟ ಕಾರ್ಪಣ್ಯಗಳನ್ನು ಎದುರಿಸಿ ಮುನ್ನುಗ್ಗುವ ಪ್ರಯತ್ನಶಿಲ ಉತ್ಸುಕಜೀವಿಯಾಗಿದ್ದ ಹೊಳೆಯಣ್ಣವರ, ಸಾಮಾಜಿಕ, ಧಾಮಿರ್ಕ, ಶೈಣಿಕ, ಸಾಹಿತ್ಯಿಕ ೇತ್ರಗಳಲ್ಲೂ ಹೊಸ ಕಾರ್ಯಗಳನ್ನು ಮಾಡಿ ಯಶಸ್ಸು ಕಂಡವರು ಎಂದರು.
ಅಧ್ಯತೆ ವಹಿಸಿದ್ದ ಎನ್.ಬಿ. ಗೋಲಣ್ಣವರ ಮಾತನಾಡಿ, 1974ರಲ್ಲಿ 18 ಸದಸ್ಯರನ್ನೊಳಗೊಂಡು ಆರಂಭವಾದ ಕುಮಾರೇಶ್ವರ ಗೃಹ ನಿರ್ಮಾಣ ಸಂ ಇವತ್ತು ಹೆಮ್ಮರವಾಗಿ ಬೆಳೆದು ಅನೇಕ ಮಧ್ಯಮ ವರ್ಗದವರಿಗೆ ಆಶ್ರಯ ತಾಣವಾಗಿದೆ. ಸಹಕಾರಿ ಸಂ ಉನ್ನತಿ ಹೊಂದಲು ಅಥವಾ ಅವನತಿ ಹೊಂದಲು ಅಲ್ಲಿರುವ ಸಿಬ್ಬಂದಿ ಹಾಗೂ ಆಡಳಿತ ಮಂಡಳಿ ಕಾರ್ಯವೇ ಪ್ರಮುಖ ಎಂದರು.
ಸಂದ ಅಧ್ಯ ಚಂದ್ರಕಾಂತ ಬೆಲ್ಲದ, ಸತೀಶ ತುರಮರಿ, ಶಂಕರ ಹಲಗತ್ತಿ, ಗುರು ಹಿರೇಮಠ, ಡಾ. ಧನವಂತ ಹಾಜವಗೋಳ, ಶಿವಾನಂದ ಭಾವಿಕಟ್ಟಿ, ಸುರೇಶ ಹಿರೇಮಠ, ಎಸ್.ಜಿ. ಪಾಟೀಲ, ಬಿ.ಬಿ. ಭೂಮನಗೌಡ್ರ, ಬಿ.ಎಂ. ಸೂರಗೊಂಡ, ಎಸ್.ಎಸ್. ಆನಿಕಿವಿ, ನಾಗೇಶ ಅಡಿವೆಪ್ಪನವರ, ಎಸ್.ಬಿ. ಹೂಗಾರ, ಇತರರು ಇದ್ದರು.
ವೀರಣ್ಣ ಒಡ್ಡೀನ ಸ್ವಾಗತಿಸಿದರು. ಶಂಕರ ಕುಂಬಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ. ಜಿನದತ್ತ ಹಡಗಲಿ ನಿರೂಪಿಸಿದರು. ಡಾ. ಮಹೇಶ ಹೊರಕೇರಿ ವಂದಿಸಿದರು.