ಜಾನಪದ ಸಂಸತಿ ವಿಶ್ವಕ್ಕೇ ಪರಿಚಿತ

22 06 2025_BNG_RURAL_PAGE_5A
ನೆಲಮಂಗಲದ ಪವಾಡ ಶ್ರೀ ಬಸವಣ್ಣ ದೇವರ ಮಠದಲ್ಲಿ ಕನ್ನಡ ಜಾನಪದ ಪರಿಷತ್​ನಿಂದ ಆಯೋಜಿಸಿದ್ದ ತಾಲೂಕು ಟಕ ಉದ್ಘಾಟನೆ ಹಾಗೂ ಪದಗ್ರಹಣ ಕಾರ್ಯಕ್ರಮದಲ್ಲಿ ಕನ್ನಡ ಜಾನಪದ ಪರಿಷತ್ತು ರಾಜ್ಯಾಧ್ಯಕ್ಷ ಡಾ.ಎಸ್​.ಬಾಲಾಜಿ, ಶ್ರೀ ಸಿದ್ದಲಿಂಗಸ್ವಾಮೀಜಿ, ಪದವಿ ಪೂರ್ವ ಶಿಕ್ಷಣ ಇಲಾಖೆ ನಿವೃತ್ತ ಉಪನಿರ್ದೇಶಕ ಎಂ.ವಿ.ನೆಗಳೂರು, ಜಾನಪದ ಪರಿಷತ್ತು ಗ್ರಾಮಾಂತರ ಜಿಲ್ಲಾಧ್ಯಕ್ಷ ಡಾ.ರಿಯಾಜ್​ಪಾಷಾ ಇದ್ದರು.
Published on

ನೆಲಮಂಗಲ: ಜಾನಪದ ಎಂಬುದು ಅನಕ್ಷರಸ್ಥರಿಂದ ಹುಟ್ಟಿಕೊಂಡು ಅಲಿಖಿತ ಸಂವಿಧಾನವಾಗಿದೆ ಎಂದು ಕನ್ನಡ ಜಾನಪದ ಪರಿಷತ್ತು ರಾಜ್ಯಾಧ್ಯಕ್ಷ ಡಾ.ಎಸ್​.ಬಾಲಾಜಿ ಬಣ್ಣಿಸಿದರು.

ನಗರದ ಪವಾಡ ಶ್ರೀ ಬಸವಣ್ಣ ದೇವರ ಮಠದಲ್ಲಿ ಕನ್ನಡ ಜಾನಪದ ಪರಿಷತ್​ ಶನಿವಾರ ಆಯೋಜಿಸಿದ್ದ ತಾಲೂಕು ಟಕ ಉದ್ಘಾಟನೆ ಹಾಗೂ ಪದಗ್ರಹಣ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಜಾನಪದಕ್ಕೆ ಯಾವುದೇ ಜಾತಿ, ಮತ, ಧರ್ಮವಿಲ್ಲ. ಜಾನಪದ ತನ್ನದೇ ಆದ ವೈಶಿಷ್ಟ$್ಯತೆ ಹೊಂದಿದೆ. ಜಾನಪದ ನಾಡಿನ ಸೊಬಗನ್ನು ತಿಳಿಸುತ್ತದೆ. ತಾಯಿ ತನ್ನದೇ ಶೈಲಿಯಲ್ಲಿ ಹಾಡು ಕಟ್ಟಿ ಮಗುವಿನ ಆರೈಕೆ ಮಾಡುವುದನ್ನು ಕಾಣಬಹುದು.

ಮನುಷ್ಯನ ಹುಟ್ಟಿನಿಂದ ಸಾವಿನವರೆಗೂ ಜಾನಪದ ಎಂಬುದು ಅಡಗಿದೆ. ಅದನ್ನು ಉಳಿಸಿ, ಬೆಳಸಿ ಮತ್ತು ಬಳಕೆ ಮಾಡುವ ಉದ್ದೇಶದಿಂದ ಜಾನಪದ ಪರಿಷತ್ತು ಒಂದು ದಶಕದಿಂದ 12 ಸಾವಿರಕ್ಕೂ ಹೆಚ್ಚು ಕಾರ್ಯಕ್ರಮಗಳನ್ನು, 30ಕ್ಕೂ ವಿವಿಧ ಜಾನಪದ ಪ್ರಕಾರಗಳ ರಾಜ್ಯ ಸಮ್ಮೇಳನವನ್ನು ನಡೆಸಿದೆ. ಜತೆಗೆ ಮಠದಿಂದ ಮಠಕ್ಕೆ ಜಾನಪದ ಸೇರಿ ವಿವಿಧ ಶೀರ್ಷಿಕೆಯಡಿ ಕಾರ್ಯಕ್ರಮಗಳನ್ನು ಇಂದಿಗೂ ನಡೆಸುತ್ತಿದೆ ಎಂದರು.

ಸಾಧಕರಿಗೆ ಸನ್ಮಾನ: ಕಾರ್ಯಕ್ರಮದ ಪ್ರಯುಕ್ತ ಹರಿಕಥೆ ದಾಸರಾದ ದಾನನರಸಿಂಹಮೂರ್ತಿ ಹಾಗೂ ಸೋಬಾನೆ ಪದಗಾಯಕಿ ನರಸಮ್ಮ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ರಾಮನಗರ ಜಿಲ್ಲಾಧ್ಯಕ್ಷ ಡಾ.ಕೆ.ಸಿ.ಕಾಂತಪ್ಪ, ತಾಲೂಕು ಅಧ್ಯಕ್ಷ ಸಿ.ಎಚ್​.ಸಿದ್ದಯ್ಯ, ಗೌರವ ಕಾರ್ಯದರ್ಶಿ ಧನಲ್ಮ, ಪ್ರಧಾನ ಕಾರ್ಯದರ್ಶಿ ಪವನ್​ ಕುಮಾರ್​ ನಾಯಕ್​, ಜಂಟಿ ಕಾರ್ಯದರ್ಶಿ ಬಿ.ಮಲ್ಲೇಶ್​, ಪತ್ರಿಕಾ ಕಾರ್ಯದರ್ಶಿ ಬಿ.ಎಸ್​.ವಿಜಯ್​ ಕುಮಾರ್​, ಸಂಟನಾ ಕಾರ್ಯದರ್ಶಿ ರಾಮಯ್ಯ, ರುದ್ರಪ್ಪನಾಯಕ್​, ಸಂಚಾಲಕ ನಾಗೇಶ್​ ಕುಮಾರ್​, ಸಹ ಸಂಚಾಲಕ ಜಗದೀಶ್​, ಸದಸ್ಯ ದಿನೇಶ್​, ಆನಂದ್​ ಮೌರ್ಯ, ಕಲಾವಿದ ಚೇತನ್​, ನವೀನ್​ ಕುಮಾರ್​, ಸರಸ್ವತಿ ಇದ್ದರು.

ಮಠದಲ್ಲಿ ಜಾನಪದ ಜಾತ್ರೆ : ಗ್ರಾಮೀಣ ಭಾಗದಲ್ಲಿ ಪ್ರಸಿದ್ಧಿಯಾದ ಜಾನಪದ ಕೆಲಗಳು ಪ್ರಸ್ತುತ ದೇಶ, ವಿದೇಶದಲ್ಲಿ ಪ್ರದರ್ಶನವಾಗುತ್ತಿದೆ. ಕನ್ನಡ ಜಾನಪದ ಪರಿಷತ್ತು ನೇತೃತ್ವದಲ್ಲಿ ಜಾನಪದ ಸಂರಕ್ಷಣೆ ಮಾಡುವ ಕಾರ್ಯ ಮಾಡುತ್ತಿರುವುದು ಶ್ಲಾನೀಯ. ಮುಂದಿನ ದಿನಗಳಲ್ಲಿ ಪರಿಷತ್ತು ಸಹಯೋಗದಲ್ಲಿ ಶ್ರೀಮಠದಲ್ಲಿ ಜಾನಪದ ಜಾತ್ರೆ ಕಾರ್ಯಕ್ರಮ ನಡೆಸಲಾಗುವುದು ಎಂದು ಪವಾಡ ಶ್ರೀ ಬಸವಣ್ಣ ದೇವರ ಮಠದ ಶ್ರೀ ಸಿದ್ದಲಿಂಗಸ್ವಾಮೀಜಿ ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net