ಸರ್ಕಾರದ ನಿಯಮ ಪಾಲಿಸಿದ ಜನರು, ಅಗತ್ಯ ವಸ್ತುಗಳ ಖರೀದಿಗೆ ಗುಂಪು ಗುಂಪಾಗಿ ಮುಗಿ

16 Nela Ph 01 Tharakari Market
Published on

ನೆಲಮಂಗಲ: ತಾಲೂಕಿನಾದ್ಯಂತ ಕರೊನಾ ವೈರಸ್ ಸೋಂಕಿತರ ಸಂಖ್ಯೆ ಶತಕ ದಾಟಿದ್ದರೂ ಪರಸ್ಪರ ಅಂತರ ಕಾಯ್ದುಕೊಳ್ಳುವಲ್ಲಿ ಸಾರ್ವಜನಿಕರು ವಿಫಲವಾಗಿದ್ದಾರೆ.

ಗ್ರಾಮಾಂತರ ಜಿಲ್ಲೆಯಲ್ಲಿ ಲಾಕ್‌ಡೌನ್ ಘೋಷಣೆ ಮಾಡಿರುವ ಸರ್ಕಾರ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ಕಲ್ಪಿಸಿದೆ. ಆದರೆ ಸರ್ಕಾರದ ಆದೇಶ ಗಾಳಿಗೆ ತೂರಿರುವ ಸಾರ್ವಜನಿಕರು ಅಗತ್ಯ ವಸ್ತುಗಳ ಖರೀದಿಗೆ ಗುಂಪು ಗುಂಪಾಗಿ ಮುಗಿಬಿದ್ದಿರುವುದು ಬೇಸರ ಮೂಡಿಸಿದೆ.

ನಗರದ ವಿವಿಧ ವರ್ತಕರ ಸಂಘದ ಸಹಕಾರ ಪಡೆದು ತಾಲೂಕು ಆಡಳಿತ ಬೆಳಗ್ಗೆ 6 ರಿಂದ 12 ಗಂಟೆವರೆಗೆ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ನೀಡಿದ್ದು, ಈ ವೇಳೆ ನಿಯಮ ಪಾಲನೆಗೆ ತಿಳಿಸಿದ್ದರೂ ಜನರು ಮಾತ್ರ ನಿಯಮ ಉಲ್ಲಂಘನೆ ಮಾಡದಿರುವುದು ಸೋಂಕಿನ ಸಂಖ್ಯೆ ಹೆಚ್ಚುವ ಆತಂಕ ಸೃಷಿಸಿದೆ.

ನಗರದ ಬೇಲಿಮಠದ ಮುಂಭಾಗದ ತರಕಾರಿ ಮಾರುಕಟ್ಟೆ, ಪೇಟೇಬೀದಿ, ಸಂತೆ ಮೈದಾನದ ರಸ್ತೆಯಲ್ಲಿನ ಅಂಗಡಿಗಳಲ್ಲಿ ಅಗತ್ಯವಸ್ತು ಖರೀದಿಸಲು ಗುರುವಾರ ನಗರವಾಸಿಗಳು ಮುಗಿಬಿದ್ದಿರುವ ದೃಶ್ಯಗಳು ಕಂಡು ಬಂತು.

ಸೋಂಕಿತರ ಸಂಖ್ಯೆ ಹೆಚ್ಚುತ್ತಿದಂತೆ ಗುಣಮುಖರಾಗುತ್ತಿರುವ ಸಂಖ್ಯೆಯೂ ಹೆಚ್ಚುತ್ತಿದೆ. ಆದರೆ ಈಗಾಗಲೇ ಇತರೆ ಕಾಯಿಲೆಗಳಿಂದ ಬಳಲುತ್ತಿರುವವರು ಹಾಗೂ ವಯೋವೃದ್ಧರಿಗೆ ತೊಂದರೆಯಾಗಲಿದೆ ಎಂಬುದನ್ನು ಪ್ರತಿಯೊಬ್ಬರೂ ಮನಗಾಣಬೇಕು ಎಂದು ಹೆಸರೇಳಲಿಚ್ಚಿಸದ ಕರೊನಾ ವಾರಿಯರ್ಸ್ ಕಿವಿಮಾತು ಹೇಳಿದ್ದಾರೆ.

ನೆಲಮಂಗಲ ತಾಲೂಕು ಆಡಳಿತದೊಂದಿಗೆ ಪ್ರತಿಯೊಬ್ಬರೂ ಸಹಕಾರ ನೀಡಿದಾಗ ಮಾತ್ರ ಸೋಂಕು ನಿಯಂತ್ರಣ ಸಾಧ್ಯ. ಪರಸ್ಪರ ಅಂತರ ಕಾಯ್ದುಕೊಳ್ಳದಿರುವುದು, ಅನಗತ್ಯ ಸಂಚಾರದಿಂದಾಗಿ ನಿತ್ಯ ಸೋಂಕು ಪ್ರಕರಣ ಹೆಚ್ಚುತ್ತಿವೆ. ಎಚ್ಚೆತ್ತುಕೊಳ್ಳದಿದ್ದಲ್ಲಿ ಪರಿಣಾಮ ಅನುಭವಿಸಬೇಕುತ್ತದೆ. ಎಂ.ಶ್ರೀನಿವಾಸ್ ತಹಸೀಲ್ದಾರ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net