ಗ್ಯಾರಂಟಿ ಯೋಜನೆಗಳಿಂದ ರಾಜ್ಯದ ಜನತೆ ಸಂತಸ

KLG SANTOSH LAD
Published on

ಕಲಘಟಗಿ: ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಿರುವ ಗ್ಯಾರಂಟಿ ಯೋಜನೆಗಳಿಂದ ರಾಜ್ಯದ ಜನತೆ ಸಂತಸದಲ್ಲಿದ್ದಾರೆ. ಆದರೆ, ಬಿಜೆಪಿ ಮುಖಂಡರು ಇಲ್ಲಸಲ್ಲದ ಆರೋಪ ಮಾಡಿ ಜನರ ದಾರಿ ತಪ್ಪಿಸುತ್ತಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಹೇಳಿದರು.

ಪಟ್ಟಣದಲ್ಲಿ ಆರಂಭಿಸಿದ ಬ್ಲಾಕ್ ಕಾಂಗ್ರೆಸ್ ಕಚೇರಿಯನ್ನು ಮಂಗಳವಾರ ಉದ್ಘಾಟಿಸಿ ಅವರು ಮಾತನಾಡಿದರು.

ಕಾಂಗ್ರೆಸ್ ಪಕ್ಷ ಯಾವುದೇ ಜಾತಿ ಧರ್ಮಕ್ಕೆ ಸೀಮಿತವಾದ ಪಕ್ಷವಲ್ಲ. ಬುದ್ಧ, ಬಸವ, ಅಂಬೇಡ್ಕರ್ ಅವರ ತತ್ವದ ಸಿದ್ಧಾಂತ ಮೇಲೆ ನಡೆಯುತ್ತಿದೆ. ದೇಶಕ್ಕೆ ಆಗಿರುವ ಅನ್ಯಾಯ ಎತ್ತಿ ಹಿಡಿಯುವುದೇ ಕಾಂಗ್ರೆಸ್ ಪಕ್ಷದ ಉದ್ದೇಶ ಎಂದರು.

ಎಸ್.ಆರ್. ಪಾಟೀಲ, ಗೌರಮ್ಮ ನಾಲವಾಡ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಂಜುನಾಥಗೌಡ ಮುರಳ್ಳಿ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅನಿಲಕುಮಾರ ಪಾಟೀಲ, ಚಂದ್ರಣ್ಣ ಜುಟ್ಟಲ್, ವೃಷಬೆಂದ್ರ ಪಟ್ಟಣಶೆಟ್ಟಿ, ನರೇಶ ಮಲೇನಾಡು, ಬಾಬು ಅಂಚಟಗೇರಿ, ಅಜ್ಮತಖಾನ್ ಜಾಗೀರದಾರ, ಲಿಂಗರೆಡ್ಡಿ ನಡುವಿನಮನಿ, ಮಹೇಶ ಅಲಗೂರು, ಶಿವಲಿಂಗ ಮೂಗಣ್ಣವರ, ಗಂಗಾಧರ ಚಿಕ್ಕಮಠ, ಕುಮಾರ ಖಂಡೇಕರ, ಕಲ್ಲಯ್ಯ ಹಿರೇಮಠ, ಹನುಮಂತ ಚವರಗುಡ್ಡ, ರಫೀಕ ಸುಂಕದ, ಮಂಜುನಾಥ ಮೂಗಣ್ಣವರ, ಮಾಲಾ ತುರಿಹಾಳ, ಮಂಜುಳಾ ದೇವಲಾಪುರ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net