

ಸಕಲೇಶಪುರ: ತಾಲೂಕಿನಲ್ಲಿ ಶನಿವಾರ ನಾಲ್ಕು ಕರೊನಾ ಪ್ರಕರಣ ಪತ್ತೆಯಾಗಿದ್ದು, ಜನತೆ ಬೆಚ್ಚಿ ಬಿದ್ದಿದ್ದಾರೆ.
ತಾಲೂಕಿನ ಚಿಕ್ಕಸತ್ತಿಗಾಲ್, ಸುಂಡೇಕೆರೆ, ಪಟ್ಟಣದ ಕುಶಾಲನಗರ ಹಾಗೂ ಚಂಪಕನಗರ ಬಡಾವಣೆಯಲ್ಲಿ ತಲಾ ಒಂದೊಂದು ಪ್ರಕರಣ ಪತ್ತೆಯಾಗಿದೆ. ಚಂಪಕನಗರ ಹಾಗೂ ಕುಶಾಲನಗರದ ವ್ಯಕ್ತಿಗಳು ಈ ಹಿಂದೆ ಸೋಂಕಿತನ ಜತೆ (ಅಡುಗೆ ಭಟ್ಟ) ಸಂಪರ್ಕದ ಲ್ಲಿದ್ದರು ಎನ್ನಲಾಗಿದೆ.
ಸುಂಡೇಕೆರೆ ಗ್ರಾಮದ ವ್ಯಕ್ತಿ ಅನಾರೋಗ್ಯದಿಂದ ಹಾಸನದ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿದ್ದರು. ಚಿಕ್ಕಸತ್ತಿಗಾಲ್ ಗ್ರಾಮದ ವ್ಯಕ್ತಿ ಬಿಎಂಟಿಸಿ ಬಸ್ ಚಾಲಕ ಎನ್ನಲಾಗಿದೆ. ಕರೊನಾ ಕಂಡು ಬಂದ ಎರಡೂ ಗ್ರಾಮ ಹಾಗೂ ಬಡಾವಣೆಗಳ ಮುಖ್ಯರಸ್ತೆಗಳನ್ನು ಮುನ್ನೆಚ್ಚರಿಕೆ ಕ್ರಮವಾಗಿ ಸೀಲ್‌ಡೌನ್ ಮಾಡಲಾಗಿದೆ. ತಾಲೂಕಿನಲ್ಲಿ ಒಟ್ಟು ಪ್ರಕರಣಗಳ ಸಂಖ್ಯೆ 25 ತಲುಪಿದೆ. ಈ ನಡುವೆ ತಾಲೂಕಿನ ಮೂಗಲಿ ಗ್ರಾಮದಲ್ಲಿ ಸೀಲ್‌ಡೌನ್ ತೆರವುಗೊಳಿಸಲಾಗಿದೆ.