ಹೊಸ ವರ್ಷ ಸಂಭ್ರಮಿಸಿದ ಗುಮ್ಮಟಿ ನಗರಿ ಜನತೆ

The people of Gummati city celebrated the new year
ವಿಜಯಪುರದ ಬಸವೇಶ್ವರ ವೃತ್ತದಲ್ಲಿರುವ ಬೇಕರಿ ಒಂದರಲ್ಲಿ ಜನರು ಕೇಕ್​ ಖರೀದಿಸುತ್ತಿರುವುದು.
Published on

ವಿಜಯಪುರ: ನಗರವೂ ಸೇರಿ ಜಿಲ್ಲೆಯಾದ್ಯಂತ ಹೊಸ ವರ್ಷವನ್ನು ಜನತೆ ಸಂಭ್ರಮ, ಸಡಗರದಿಂದ ಬರಮಾಡಿಕೊಳ್ಳಲು ಸಿದ್ಧತೆ ನಡೆಸಿದ್ದರು.

ಮಂಗಳವಾರ ಬೆಳಗ್ಗೆಯಿಂದಲೇ ಹೊಸ ವರ್ಷದ ಸೆಲೆಬ್ರೆಷನ್​ಗೆ ಬೇಕಾದ ಕೇಕ್​, ವಿವಿಧ ಸಿಹಿ ತಿಂಡಿ, ಪಟಾಕಿ ಖರೀದಿಸಿದರು.

ಜೆಯಾಗುತ್ತಿದ್ದಂತೆ ಬೇಕರಿಗಳಲ್ಲಿ ವ್ಯಾಪಾರ ವಹಿವಾಟವೂ ಜೋರಾಗಿ ನಡೆಯಿತು.

ನಗರದಲ್ಲಿರುವ ವಿವಿಧ ಹೊಟೇಲ್​ಗಳಿಗೆ ಹೊಸ ವರ್ಷದ ಹಿನ್ನೆಲೆಯಲ್ಲಿ ವಿದ್ಯುತ್​ ದೀಪಾಲಂಕರ ಮಾಡಲಾಗಿತ್ತು. ಅಲ್ಲದೆ, ಜನರನ್ನು ತಮ್ಮ ಹೊಟೇಲ್​ಗಳಿಗೆ ಆಕರ್ಷಿಸಲು ವಿವಿಧ ಆಫರ್​ಗಳ ಬೋರ್ಡ್​ ಮತ್ತು ವಿನೂತನ ಖಾದ್ಯಗಳ ಮಾಹಿತಿ ಇರುವ ಬೋರ್ಡ್​ಗಳು ಹೊಟೇಲ್​ಗಳಲ್ಲಿ ಕಂಡು ಬಂದವು.

ಕೆಲವರು ಕುಟುಂಬ ಸಮೇತ ಹೊಟೇಲ್​ಗಳಿಗೆ ಭೇಟಿ ನೀಡಿದರೆ, ಇನ್ನು ಕೆಲವರು ಸ್ನೇಹಿತರ ಜತೆಗೆ ತೆರಳಿದ್ದರು. ನಗರ ಹೊರವಲಯದ ಸೋಲಾಪುರ ರಸ್ತೆ, ಬೆಂಗಳೂರು ರಸ್ತೆಯಲ್ಲಿರುವ ಡಾಬಾಗಳಲ್ಲಿ ಜನರಿಂದ ತುಂಬಿದ್ದವು.

ಇನ್ನು ಹೊಸ ವರ್ಷವನ್ನು ಸ್ವಾಗತಿಸಿಲು ಉತ್ಸುಕರಾಗಿದ್ದ ಜನತೆ ರಾತ್ರಿ 12 ಆಗುತ್ತಿದ್ದಂತೆ ಕೇಕ್​ ಕತ್ತರಿಸಿ, ಪಟಾಕಿ ಸಿಡಿಸಿ ಸಂಭ್ರಮಿಸಿದರು. ಸ್ನೇಹಿತರಿಗೆ, ಬಂಧು&ಬಳಗದವರಿಗೆ ಶುಭಾಶಯ ತಿಳಿಸಿದರು. ಹೊಸ ವರ್ಷದ ಹಿನ್ನೆಲೆ ತಯಾರಿಸಿದ ವಿಶೇಷ ಖಾದ್ಯಗಳನ್ನು ಸವಿದರು. ಅಲ್ಲದೆ, ವಾಟ್ಸಾಪ್​, ಫೇಸ್​ಬುಕ್​, ಇನಸ್ಟಾಗ್ರಾಂ ಸೇರಿ ವಿವಿಧ ಸಾಮಾಜಿಕ ಜಾಲತಾಣಗಳಲ್ಲಿ ಸ್ಟೇಟಸ್​ ಹಾಕಿ ಸಂಭ್ರಮಪಟ್ಟರು.

ನಗರದ ವಿವಿಧ ಚರ್ಚ್​ಗಳಲ್ಲಿ ಹೊಸ ವರ್ಷದ ಹಿನ್ನೆಲೆ ವಿಶೇಷ ಪ್ರಾರ್ಥನೆಗಳು ನಡೆದವು. ಅಲ್ಲದೆ, ಯಾವುದೇ ಅನಾಹುತ ಟನೆಗಳು ನಡೆಯದಂತೆ ನಗರದ ಪ್ರಮುಖ ರಸ್ತೆಗಳಲ್ಲಿ ಪೊಲೀಸ್​ ಬಂದೋಬಸ್ತ್​ ಕೈಗೊಳ್ಳಲಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net