ಜನರಿಗೆ ಸಿಕ್ಕ ‘ಮನಮುಟ್ಟಿದ ಮಾತುಗಾರ’!

20 ylp 01 (ummachagi)
Published on

ಯಲ್ಲಾಪುರ: ತಾಲೂಕಿನ ಉಮ್ಮಚಗಿಯ ಸಹಕಾರಿ ಸಂಘದ ಸಭಾಭವನದಲ್ಲಿ ಕರ್ನಾಟಕ ಯಕ್ಷಗಾನ ಅಕಾಡೆಮಿ , ವಾಗರ್ಥ ತಾಳಮದ್ದಳೆ ಕೂಟಗಳ ಆಶ್ರಯದಲ್ಲಿ ‘ಹಿರಿಯರ ನೆನಪು’ ಕಾರ್ಯಕ್ರಮ ನಡೆಯಿತು.

ದಿವಂಗತ ನಾರಾಯಣ ಹೆಗಡೆ ಶೀಗೆಮನೆ ಅವರ ಸ್ಮರಣಾರ್ಥ ಪುಸ್ತಕ ಬಿಡುಗಡೆ ಹಾಗೂ ತಾಳಮದ್ದಲೆ ನಡೆಯಿತು. ದಿ.ನಾರಾಯಣ ಹೆಗಡೆ ಅವರ ಸ್ಮರಣಾರ್ಥ ಹೊರತಂದ ‘ಮನಮುಟ್ಟಿದ ಮಾತುಗಾರ’ ಪುಸ್ತಕ ಲೋಕಾರ್ಪಣೆ ಮಾಡಲಾಯಿತು.

ಸಹಕಾರಿ ಸಂಘದ ಅಧ್ಯಕ್ಷ ಎಂ.ಜಿ. ಭಟ್ಟ ಸಂಕದಗುಂಡಿ, ರಂಗ ಸಮೂಹದ ಅಧ್ಯಕ್ಷ ಆರ್.ಎನ್. ಭಟ್ಟ ದುಂಡಿ, ಹಿರಿಯರಾದ ಎನ್.ಜಿ. ಹೆಗಡೆ ಭಟ್ರಕೇರಿ, ಸಂಘಟಕರಾದ ನಿರ್ಮಲಾ ಗೋಳಿಕೊಪ್ಪ, ಗುರು ಭಟ್ಟ, ಇತರರಿದ್ದರು.

ಪ್ರಸಿದ್ಧ ಕಲಾವಿದರಿಂದ ಪ್ರಸ್ತುತಗೊಂಡ ‘ಕರ್ಣಭೇದನ’ ತಾಳಮದ್ದಳೆ ಪ್ರೇಕ್ಷಕರನ್ನು ರಂಜಿಸಿತು. ಹಿಮ್ಮೇಳದಲ್ಲಿ ಭಾಗವತರಾಗಿ ಗಜಾನನ ಭಟ್ಟ ತುಳಗೇರಿ, ಮದ್ದಲೆವಾದಕರಾಗಿ ಶಂಕರ ಭಾಗ್ವತ ಭಾಗವಹಿಸಿದ್ದರು.

ವಿದ್ವಾನ್ ಗಣಪತಿ ಭಟ್ಟ ಸಂಕದಗುಂಡಿ ಕೃಷ್ಣನಾಗಿ, ದಿವಾಕರ ಹೆಗಡೆ ಕೆರೆಹೊಂಡ ಕರ್ಣನಾಗಿ, ಮಂಜುನಾಥ ಗೊರಮನೆ ಕುಂತಿಯಾಗಿ ಪಾತ್ರ ಚಿತ್ರಣ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net