

ಇಟಗಿ: ಸಮಾಜದ ಅಂಕು-ಡೊಂಕು ತಿದ್ದಿ, ಜನರನ್ನು ಸನ್ಮಾರ್ಗದಲ್ಲಿ ಕೊಂಡೊಯ್ಯುವಲ್ಲಿ ಮಠಮಾನ್ಯಗಳ ಪಾತ್ರ ಮುಖ್ಯ ಎಂದು ಪಾರಿಶ್ವಾಡ ಹನಿವೆಲ್ ಇಂಟರ್‌ನ್ಯಾಷನಲ್ ಶಾಲೆ ಅಧ್ಯಕ್ಷ ಸುಭಾಷ ಗುಳಶೆಟ್ಟಿ ಹೇಳಿದರು.
ಸಮೀಪದ ಪಾರಿಶ್ವಾಡ ಗ್ರಾಮದಲ್ಲಿ ಹಿರೇಮುನವಳ್ಳಿ ಹಾಗೂ ಪಾರಿಶ್ವಾಡ ಶಾಂಡಿಲೇಶ್ವರ ಮಠದ ಪೀಠಾಧ್ಯಕ್ಷ ಶಂಭುಲಿಂಗ ಶಿವಾಚಾರ್ಯ ಸ್ವಾಮೀಜಿ ಜನ್ಮದಿನದ ನಿಮಿತ್ತ ಈಚೆಗೆ ಹಮ್ಮಿಕೊಂಡಿದ್ದ ಪ್ರತಿಭಾ ಪುರಸ್ಕಾರ, ಸೇವಾ ಪುರಸ್ಕಾರ ಹಾಗೂ ಔಷಧೀಯ ಸಸ್ಯಗಳ ವಿತರಣಾ ಸಮಾರಂಭದಲ್ಲಿ ಮಾತನಾಡಿದರು. ಶಂಭುಲಿಂಗ ಶಿವಾಚಾರ್ಯ ಶ್ರೀಗಳು ಜನರನ್ನು ಒಗ್ಗೂಡಿಸಿ ಧರ್ಮ ಜಾಗತಿ ಮೂಲಕ ಅವರಲ್ಲಿ ಪರಿವರ್ತನೆ ತರುತ್ತಿರುವುದು ಶ್ಲಾಘನೀಯ ಎಂದರು.
ಮುಕ್ತಿಮಠದ ಶಿವಸಿದ್ಧ ಸೋಮೇಶ್ವರ ಸ್ವಾಮೀಜಿ, ಗ್ರಾಪಂ ಮಾಜಿ ಅಧ್ಯಕ್ಷ ಅಶೋಕ ಅಂಗಡಿ, ಚಿಂತಕ ಮಹಾಂತೇಶ ಚಿಕ್ಕಮಠ, ಶಾಂತಯ್ಯ ಶಾಸ್ತ್ರಿಗಳು, ಭೂದಾನಿ ಬಸವರಾಜ ಕುಕಡೊಳ್ಳಿ, ಪಾಯಪ್ಪಗೌಡ ಪಾಟೀಲ, ಅರ್ಜುನಗೌಡ ಪಾಟೀಲ ಹಾಗೂ ಇತರರಿದ್ದರು.