

ವಿಜಯವಾಣಿ ಸುದ್ದಿಜಾಲ ಧಾರವಾಡ
ಕಲ್ಯಾಣ ಚಾಲುಕ್ಯರ ಕಾಲದಲ್ಲಿ ಸುಮಾರು 12ನೇ ಶತಮಾನದಲ್ಲಿ ವಿದ್ವಾಂಸ ವಿಜ್ಞಾನೇಶ್ವರ ಬರೆದ `ಮಿತಾಕ್ಷರ ಸಂಹಿತೆ' ಭಾರತದಲ್ಲಿ ನ್ಯಾಯ ವ್ಯವಸ್ಥೆಯ ಆಧಾರ ಗ್ರಂಥ ಎನಿಸಿದೆ. ಮೊಘಲರ ನಂತರ ಬ್ರಿಟೀಷರ ಕಾಲದಲ್ಲಿ ನ್ಯಾಯಾಲಯ, ನ್ಯಾಯಾಧೀಶರ ಪದ್ಧತಿ ಜಾರಿಗೆ ಬಂದಿತು. ಆದರೆ, ವಿದೇಶಿಯರ ಆಕ್ರಮಣದ ನೀತಿ, ಅವರ ಧರ್ಮಕ್ಕೆ ಅನುಗುಣವಾಗಿದ್ದರಿಂದ ನ್ಯಾಯಾಂಗ ವ್ಯವಸ್ಥೆ ವಿರೂಪಗೊಂಡಿತು ಎಂದು ಹೈಕೋರ್ಟ್ ನ್ಯಾಯಮೂರ್ತಿ ವಿ. ಶ್ರೀಶಾನಂದ ಹೇಳಿದರು.
ನಗರದ ವೈ.ಎಸ್. ಪಾಟೀಲ ಸ್ಮಾರಕ ಪ್ರತಿಷ್ಠಾನದಿಂದ ಇಲ್ಲಿನ ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ಇತ್ತೀಚೆಗೆ ಆಯೋಜಿಸಿದ್ದ `ಭಾರತದಲ್ಲಿ ನ್ಯಾಯಾಂಗ ನಡೆದು ಬಂದ ದಾರಿ' ವಿಷಯ ಕುರಿತು ಅವರು ಮಾತನಾಡಿದರು.
ಭಾರತದಲ್ಲಿ ರಾಜ- ಮಹಾರಾಜರ ಕಾಲದಲ್ಲಿ ನ್ಯಾಯಾಲಯ, ನ್ಯಾಯಾಂಗ ವ್ಯವಸ್ಥೆ ರಾಜರ ಮೇಲೆ ಅವಲಂಬಿತವಾಗಿತ್ತು. ರಾಜರು ಅಥವಾ ಪಂಚಾಯಿತಿಯ ಮುಖ್ಯಸ್ಥ ನ್ಯಾಯಾಧೀಶರ ಕಾರ್ಯ ನಿರ್ವಹಿಸುತ್ತಿದ್ದರು. ಅವರಿಗೆ ಸಲಹೆ ಕೊಡಲು ತಜ್ಞರ ಸಲಹಾ ಸಮಿತಿಗಳು ಇರುತ್ತಿದ್ದವು ಎಂದರು.
ಕರ್ನಾಟಕ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಚಂದ್ರಕಾ0ತ ಬೆಲ್ಲದ ಅಧ್ಯಕ್ಷತೆ ವಹಿಸಿದ್ದರು. ಮನೋವೈದ್ಯ ಡಾ. ಆನಂದ ಪಾಂಡುರ0ಗಿ, ಪ್ರಾಧ್ಯಾಪಕ ಡಾ. ಶಂಭು ಹೆಗಡಾಳ, ಚಂದ್ರಶೇಖರ ಅಮಿನಗಡ, ಶ್ರೀನಿವಾಸ ವಾಡಪ್ಪಿ, ಸಂಜಯ ಪಾಟೀಲ, ಡಾ. ದೀಪಕ ಆಲೂರ, ಮನೋಜ ಪಾಟೀಲ ವೇದಿಕೆಯಲ್ಲಿದ್ದರು. ದಾಮೋದರ ಹೆಗಡೆ ನಿರ್ವಹಿಸಿದರು.