

ಹನೂರು: ತಾಲೂಕಿನ ಬಂಡಳ್ಳಿ ಗ್ರಾಮದ ಬಳಿ ಶುಕ್ರವಾರ ಕೆಎಸ್‌ಆರ್‌ಟಿಸಿ ಬಸ್ ಕೆಟ್ಟು ನಿಂತ ಪರಿಣಾಮ ಪ್ರಯಾಣಿಕರು ತೊಂದರೆ ಅನುಭವಿಸಿದರು.
ಬೆಳಗ್ಗೆ 11ರಲ್ಲಿ ತೊಮಿಯಾರ್‌ಪಾಳ್ಯ ಗ್ರಾಮದಿಂದ ಹನೂರಿನ ಕಡೆಗೆ ತೆರಳುತ್ತಿದ್ದ ಸಾರಿಗೆ ಬಸ್‌ನಲ್ಲಿ ಸುಮಾರು 40ಕ್ಕೂ ಹೆಚ್ಚು ಪ್ರಯಾಣಿಕರಿದ್ದರು. ಆದರೆ ಬಂಡಳ್ಳಿ ಗ್ರಾಮದ ಬಳಿ ಬಸ್ ಕೆಟ್ಟು ನಿಂತಿತು. ಪರಿಣಾಮ ಕೆಲಸ ಕಾರ್ಯಗಳ ನಿಮಿತ್ತ ಹನೂರು ಹಾಗೂ ಕೊಳ್ಳೇಗಾಲದ ಕಡೆಗೆ ತೆರಳುತ್ತಿದ್ದ ಕೆಲವರು ಆಟೋಗಳ ಮೂಲಕ ತೆರಳಿದರೆ, ಇನ್ನು ಕೆಲವರು ಕಾದು ನಿಂತು ಖಾಸಗಿ ಬಸ್‌ನಲ್ಲಿ ತೆರಳಿದರು. ಇದರಿಂದ ಸಾರ್ವಜನಿಕರು ತೊಂದರೆ ಅನುಭವಿಸಿದರು. ಸಾರಿಗೆ ಅವ್ಯವಸ್ಥೆಯ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದರು.