ಬಸ್​ನಲ್ಲಿ ಹೃದಯಾಘಾತ, ಚಾಲಕ ಆಸ್ಪತ್ರೆಗೆ ಸಾಗಿಸಿದರೂ ಬದುಕುಳಿಯಲಿಲ್ಲ ಪ್ರಯಾಣಿಕ

heart attack
Published on

ಹೊನ್ನಾವರ: ಪ್ರಯಾಣಿಕರೊಬ್ಬರು ಬಸ್​ನಲ್ಲಿ ಹೃದಯಾಘಾತದಿಂದ ಮೃತಪಟ್ಟ ಘಟನೆ ತಾಲೂಕಿನ ಕವಲಕ್ಕಿಯಲ್ಲಿ ಶನಿವಾರ ಮಧ್ಯಾಹ್ನ ನಡೆದಿದೆ.

ಹಡಿನಬಾಳ ಕಳಲೆಕೇರಿಯ ಕೃಷ್ಣ ಶೆಟ್ಟಿ (70) ಮೃತಪಟ್ಟ ಪ್ರಯಾಣಿಕ.

ಹೊನ್ನಾವರ ಸಂತೆ ಮಾರುಕಟ್ಟೆಗೆ ಹೋಗಿ ಮರಳಿ ಹಡಿನಬಾಳಕ್ಕೆ ಬಸ್​ನಲ್ಲಿ ಪ್ರಯಾಣಿಸುತ್ತಿದ್ದರು. ಹೊನ್ನಾವರದಿಂದ ಗೇರುಸೊಪ್ಪಾಗೆ ಸಾಗುತ್ತಿದ್ದ ಬಸ್ ಕವಲಕ್ಕಿಗೆ ಬಂದಾಗ ಕೃಷ್ಣ ಅವರಿಗೆ ಹೃದಯಾಘಾತ ಉಂಟಾಗಿದೆ. ಸಹಪ್ರಯಾಣಿಕರಿಂದ ವಿಷಯ ಗೊತ್ತಾಗಿ ಚಾಲಕ ಬಸ್ ನಿಲ್ಲಿಸಿದ್ದಾರೆ. ಅಲ್ಲಿಯೇ ಪ್ರಯಾಣಿಕರ ಮನವೊಲಿಸಿ ಬಸ್ ಅನ್ನು ಹೊನ್ನಾವರ ಸರ್ಕಾರಿ ಆಸ್ಪತ್ರೆಗೆ ತೆಗೆದುಕೊಂಡು ಹೋಗಿ ಚಿಕಿತ್ಸೆಗೆ ದಾಖಲಿಸಿದ್ದಾರೆ. ಆದರೆ, ಕೃಷ್ಣ ಶೆಟ್ಟಿ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net