ಸುಸಲಾದದಲ್ಲಿ ರಂಭಾಪುರಿ ಜಗದ್ಗುರುಗಳ ಅಡ್ಡಪಲ್ಲಕ್ಕಿ ಮಹೋತ್ಸವ

The palanquin festival of Rambhapuri Jagadgurus in Susalada
ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರು
Published on

ವಿಜಯಪುರ: ಜತ್ತ ತಾಲೂಕಿನ ಸುಸಲಾದ ಗ್ರಾಮದಲ್ಲಿ ನಿರ್ಮಿಸಿದ ನೂತನ ಮಲ್ಲಿಕಾರ್ಜುನ ಮಂದಿರದ ಲಿಂಗ ಪ್ರಾಣ ಪ್ರತಿಷ್ಠಾಪನೆ ಹಾಗೂ ಕಲಶಾರೋಹಣ ಅಂಗವಾಗಿ ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರು ಸಾನ್ನಿಧ್ಯದಲ್ಲಿ ಧರ್ಮಸಭೆ ಮತ್ತು ಅಡ್ಡಪಲ್ಲಕ್ಕಿ ಮಹೋತ್ಸವ ನಡೆಯಲಿದೆ.

ಜೂ. 19 ರಂದು ಮಧ್ಯಾಹ್ನ 3 ಗಂಟೆಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಕಲ ವಾದ್ಯ ವೈಭವದೊಂದಿಗೆ ಶ್ರೀಮದ್​ ರಂಭಾಪುರಿ ಜಗದ್ಗುರುಗಳ ಅಡ್ಡಪಲ್ಲಕ್ಕಿ ಮಹೋತ್ಸವ, ನಂತರ ಧರ್ಮಸಭೆ ಜರುಗಲಿದ್ದು, ಸಂಜೆ ಲ ದೀಪೋತ್ಸವ ನಡೆಯಲಿದೆ.

ಜೂ. 20 ರಂದು ಬೆಳಗ್ಗೆ 10 ಗಂಟೆಗೆ ಪ್ರಾಣ ಪ್ರತಿಷ್ಠಾಪನೆ ಹಾಗೂ ಕಲಶಾರೋಹಣದ ನಂತರ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳ ಸಾನ್ನಿಧ್ಯದಲ್ಲಿ ಧರ್ಮಸಭೆ ನಡೆಯಲಿದೆ.

ಬೆಳ್ಳಂಕಿ ಶಿವಲಿಂಗ ಶಿವಾಚಾರ್ಯ ಸ್ವಾಮೀಜಿ, ಆಲಮೇಲ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ, ತಡವಲಗಾ ಅಭಿನವ ರಾಚೋಟೇಶ್ವರ ಶಿವಾಚಾರ್ಯರು, ಜಗಜೇವಣಿ ಮುಪ್ಪಿನಾರ್ಯ ಶಿವಾಚಾರ್ಯರು ಹಾಗೂ ಗುಡ್ಡಾಪುರದ ಗುರಪಾದೇಶ್ವರ ಶಿವಾಚಾರ್ಯರು ಸಮಾರಂಭದಲ್ಲಿ ಭಾಗವಹಿಸುವರು.

ಸಾಂಗಲಿ ಜಿಲ್ಲಾ ಉಸ್ತುವಾರಿ ಸಚಿವ ಚಂದ್ರಕಾಂತ(ದಾದಾ) ಪಾಟೀಲ, ಸಂಸದ ರಮೇಶ ಜಿಗಜಿಣಗಿ, ವಿಶಾಲ (ದಾದಾ) ಪಾಟೀಲ, ಶಾಸಕರಾದ ಗೋಪಿಚಂದ ಪಡೋಳಕರ, ವಿಠಲ ಕಟಕಧೊಂಡ, ವಿ.ಪ. ಸದಸ್ಯ ಸುನೀಲಗೌಡ ಪಾಟೀಲ, ಮಾಜಿ ಶಾಸಕ ವಿಕ್ರಮಸಿಂಹ ಸಾವಂತ, ಸಂಜಯ ತೇಲಿ, ಸುಜಯ ಸಿಂಧೆ, ರವೀಂದ್ರ ಅರಳಿ, ಚನ್ನಪ್ಪ ಹೊರ್ತಿಕರ, ಗುರುಲಿಂಗಪ್ಪ ಅಂಗಡಿ, ಪ್ರಕಾಶ ಜಮದಾಡೆ, ಎಂ.ಆರ್​. ಪಾಟೀಲ, ಭೀಮನಗೌಡ ಬಿರಾದಾರ, ಬಿ.ಕೆ. ಬಿರಾದಾರ, ಸೋಮನಿಂಗ ಬೋರಾಮಣಿ, ಸಂತೋಷ ಪಾಟೀಲ, ಬಸವರಾಜ ಬಿರಾದಾರ, ಬಾಬುಗೌಡ ಪಾಟೀಲ, ಅಮಸಿದ್ಧ ಬಳಗಾನೂರ, ಮಲ್ಲಿಕಾರ್ಜುನ ಬಿರಾದಾರ, ಸುರೇಳ ಕಲ್ಲೋಳ್ಳಿ, ಕಾಶಿನಾಥ ಗಿಡವೀರ, ಕಾಶಿರಾಯ ಬಿರಾದಾರ ಆಗಮಿಸುವರು. ಪ್ರಾತ@ಕಾಲದಲ್ಲಿ ಹೋಮ ಹವನಾದಿಗಳು ನಡೆಯಲಿವೆ ಎಂದು ದೇವಸ್ಥಾನ ಸಮಿತಿ ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net