ಶ್ರೀರಾಮ ನಮ್ಮ ಸಂಸ್ಕೃತಿಯ ಪ್ರತೀಕ

27 SMG- bekkina kalmata shree
Published on

ಶಿಕಾರಿಪುರ: ಶ್ರೀರಾಮ ನಮ್ಮ ಸಂಸ್ಕೃತಿಯ ಪ್ರತೀಕ. ನಮ್ಮ ಶ್ರದ್ಧೆಯ ಸಂಕೇತ. ಮರ್ಯಾದಾ ಪುರುಷೋತ್ತಮನ ಮಂದಿರ ನಿಮಾಣಕ್ಕೆ ಎಲ್ಲ ಮನೆಗಳ ಸಹಕಾರ ಬೇಕು. ಪ್ರತಿಯೊಬ್ಬರ ಕೊಡುಗೆಯೂ ಬೆಲೆ ಕಟ್ಟಲಾರದ ಮೌಲ್ಯ ಎಂದು ಶಿವಮೊಗ್ಗ ಬೆಕ್ಕಿನಕಲ್ಮಠದ ಜಗದ್ಗುರು ಡಾ. ಶ್ರೀ ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ ಹೇಳಿದರು.

ಪಟ್ಟಣದ ಮಂಗಲ ಭವನದಲ್ಲಿ ಏರ್ಪಡಿಸಿದ್ದ ಅಯೋಧ್ಯೆ ಶ್ರೀರಾಮ ಮಂದಿರ ನಿರ್ಮಾಣ ನಿಧಿ ಸಮರ್ಪಣಾ ಮಹಾ ಅಭಿಯಾನದ ಗಣ್ಯರ ಸಭೆಯಲ್ಲಿ ಮಾತನಾಡಿದ ಅವರು, ಇದು ಶ್ರೀರಾಮನ ನಾಡು. ರಾಮ ಒಬ್ಬ ಆದರ್ಶ ಪುರುಷ. ಅವನ ಆದರ್ಶಗಳು ಸಾರ್ವಕಾಲಿಕ ಎಂದರು.

ನಾವು ಕೊಡುವ ದಾನ ಸತ್ಪಾತ್ರಕ್ಕೆ ಸಲ್ಲುವಂತಿರಬೇಕು. ನಮ್ಮ ಬದುಕಿನಲ್ಲಿ ದಾನಕ್ಕೆ ಹೆಚ್ಚಿನ ಮಹತ್ವ ನೀಡಬೇಕು. ನಮ್ಮ ನಾಡಿನಲ್ಲಿ 25 ಸಾವಿರಕ್ಕೂ ಹೆಚ್ಚಿನ ದಾನ ಶಾಸನಗಳು ದೊರೆತಿವೆ. ದಾನ ಮಾಡುವಾಗ ನಮ್ಮ ಮನಸ್ಸು ನಿರ್ಮಲವಾಗುತ್ತದೆ. ದಾನಕ್ಕಿಂತ ದೊಡ್ಡದಾದ ಪದ ದಾಸೋಹ. ಇಲ್ಲಿ ಕೊಡುವವನಿಗೆ ಹಮ್ಮು, ತೆಗೆದುಕೊಳ್ಳುವವನಿಗೆ ದೈನ್ಯತೆ ಇರಬಾರದು ಎಂದು ಹೇಳಿದರು.

ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಮಾತನಾಡಿ, ಇದೊಂದು ಸುವರ್ಣಾವಕಾಶ ಮತ್ತು ಅತ್ಯಂತ ಪುಣ್ಯದ ಕಾರ್ಯ. ಮರ್ಯಾದಾ ಪುರುಷೋತ್ತಮ ಶ್ರೀರಾಮನ ಮಂದಿರ ನಿರ್ವಣಕ್ಕೆ ನಾವೂ ಪಾಲುದಾರರಾಗಬೇಕು ಎಂದರು.

ನಿಧಿ ಸಮರ್ಪಣಾ ಅಭಿಯಾನದ ಕರ್ನಾಟಕ ದಕ್ಷಿಣ ಪ್ರಾಂತ ಪ್ರಮುಖ್ ಟಿ.ಪಟ್ಟಾಭಿರಾಮ್ ಪ್ರಾಸ್ತಾವಿಕ ಮಾತನಾಡಿದರು. ಸಂಘದ ತಾಲೂಕು ಕಾರ್ಯವಾಹ ವೀರಣ್ಣ, ಎಂಎಡಿಬಿ ಅಧ್ಯಕ್ಷ ಗುರುಮೂರ್ತಿ, ಬಿ.ಪಿ.ನಾರಾಯಣ ರಾವ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net