

ಬಾದಾಮಿ: ಭಕ್ತ ಕನಕದಾಸರು ಈ ನಾಡು ಕಂಡ ಶ್ರೇಷ್ಠ ದಾರ್ಶನಿಕರು. ಸಮಾಜದ ಅಂಕುಡೊಂಕುಗಳನ್ನು ತಿದ್ದುವ ಕಾರ್ಯ ಮಾಡಿದ ಭಕ್ತ ಕನಕದಾಸರ ಆದರ್ಶ ಮೌಲ್ಯಗಳು ಅನುಕರಣೀಯ ಎಂದು ಶಾಸಕ ಭೀಮಸೇನ ಚಿಮ್ಮನಕಟ್ಟಿ ಹೇಳಿದರು.
ತಾಲೂಕಾಡಳಿತ, ತಾಪಂ ಸಹಯೋಗದಲ್ಲಿ ಪಟ್ಟಣದ ಪಿಕಾರ್ಡ್ ಬ್ಯಾಂಕ್ ಆವರಣದಲ್ಲಿ ಹಮ್ಮಿಕೊಂಡಿದ್ದ ಸಂತ ಶ್ರೇಷ್ಠ ಭಕ್ತ ಕನಕದಾಸರ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಸಮಾಜದ ಬೇಡಿಕೆಗಳನ್ನು ಹಂತ ಹಂತವಾಗಿ ಈಡೇರಿಸಲಾಗುತ್ತದೆ. ಸೂಕ್ತವಾದ ಜಾಗ ಗುರುತಿಸಿ ದೊಡ್ಡ ಸಮುದಾಯ ಭವನ ನಿರ್ಮಾಣಕ್ಕೆ ಅನುದಾನ ನೀಡಲಾಗುತ್ತದೆ ಎಂದು ಭರವಸೆ ನೀಡಿದರು.
ಸಮಾಜ ಬಾಂಧವರು ತಮ್ಮ ಮಕ್ಕಳಿಗೆ ಶಿಕ್ಷಣ ಕೊಡಿಸಬೇಕು ಎಂದು ಮನವಿ ಮಾಡಿದರು. ಕೆರೂರ ಕಾಳಿದಾಸ ಪದವಿ ಕಾಲೇಜಿನ ಪ್ರಾಚಾರ್ಯ ಎನ್.ಎಂ.ಹೊಟ್ಟಿ ಭಕ್ತ ಕನಕದಾಸರ ಕುರಿತು ವಿಶೇಷ ಉಪನ್ಯಾಸ ನೀಡಿದರು. ಶಿರೂರಿನ ಕನಕ ಬ್ರಹ್ಮವಿದ್ಯಾಶ್ರಮದ ಚಿನ್ಮಯಾನಂದ ಶ್ರೀಗಳು ಆಶೀರ್ವಚನ ನೀಡಿದರು.
ಅವಳಿ ಜಿಲ್ಲೆಯ ಹಾಲು ಒಕ್ಕೂಟದ ಅಧ್ಯಕ್ಷ ಈರಣ್ಣ ಕರಿಗೌಡರ, ತಾಪಂ ಇಒ ಮಲ್ಲಿಕಾರ್ಜುನ ಬಡಿಗೇರ, ಯುವಮುಖಂಡ ಮಹೇಶ ಹೊಸಗೌಡ್ರ, ಶಿವಾನಂದ ಕುಳಗೇರಿ, ಪುರಸಭೆ ಅಧ್ಯಕ್ಷ ಪಾಂಡಪ್ಪ ಕಟ್ಟಿಮನಿ, ಸದಸ್ಯರಾದ ಮಂಜುನಾಥ ಹೊಸಮನಿ, ಾರೂಖ ದೊಡಮನಿ, ಶಂಕರ ಕನಕಗಿರಿ, ಯಮುನಾ ಹೊಸಗೌಡರ, ಗೌರಮ್ಮ ಬೇಲೂರಪ್ಪನ್ನವರ, ರಾಮವ್ವ ಮಾದರ, ರಮಜಾನ ರಾಜೂರ, ಮಹಾಂತೇಶ ಹಟ್ಟಿ, ಹಿರಿಯರಾದ ಅಶೋಕ ಕೋಟನಕರ, ಶಿವಾನಂದ ಕೊನೇರಿ, ತಾಲೂಕುಮಟ್ಟದ ಅಧಿಕಾರಿಗಳು ಇದ್ದರು. ಸರ್ಕಾರಿ ಪ್ರೌಢಶಾಲಾ ವಿದ್ಯಾರ್ಥಿಗಳು ಪ್ರಾರ್ಥನೆ ಹಾಡಿದರು. ತಹಸೀಲ್ದಾರ್ ಮಧುರಾಜ ಪ್ರಾಸ್ತಾವಿಕವಾಗಿ ಮಾತನಾಡಿದರು. ಸದಾಶಿವ ಮರಡಿ ನಿರೂಪಿಸಿದರು. ಉಜ್ವಲ ಬಸರಿ ವಂದಿಸಿದರು.
ಸಂತ ಶ್ರೇಷ್ಠ ಭಕ್ತ ಕನಕದಾಸ ಜಯಂತಿ ಅಂಗವಾಗಿ ಬೀರಲಿಂಗೇಶ್ವರ ಸಮುದಾಯ ಭವನದಲ್ಲಿ ಭಕ್ತ ಕನಕದಾಸರ ಭಾವಚಿತ್ರದ ಮೆರವಣಿಗೆಗೆ ಶಾಸಕ ಭೀಮಸೇನ ಚಿಮ್ಮನಕಟ್ಟಿ ಚಾಲನೆ ನೀಡಿದರು. ಕುಂಭ ಹೊತ್ತ ಮಹಿಳೆಯರು, ಆಕರ್ಷಕ ಡೊಳ್ಳು ಕುಣಿತ, ಡೊಳ್ಳಿನ ಮೆರವಣಿಗೆ ಮೂಲಕ ರಾಮದುರ್ಗ ರಸ್ತೆ ಮೂಲಕ ಪಿಕಾರ್ಡ್ ಬ್ಯಾಂಕ್ ಆವರಣಕ್ಕೆ ಬಂದು ತಲುಪಿ, ವೇದಿಕೆ ಕಾರ್ಯಕ್ರಮವಾಗಿ ಮಾರ್ಪಟ್ಟಿತು. ಪುರಸಭೆ ಅಧ್ಯಕ್ಷ ಪಾಂಡಪ್ಪ ಕಟ್ಟೀಮನಿ, ಸದಸ್ಯ ಮಂಜುನಾಥ ಹೊಸಮನಿ, ಹನುಮಂತ ಅಪ್ಪನ್ನವರ, ಾರೂಖ ದೊಡಮನಿ, ಶಂಕರ ಕನಕಗಿರಿ, ರಾಮವ್ವ ಮಾದರ, ಯಮುನಾ ಹೊಸಗೌಡ್ರ, ರಮಜಾನ ರಾಜೂರ, ಯುವ ಮುಖಂಡ ಮಹೇಶ ಹೊಸಗೌಡ್ರ, ತಹಸೀಲ್ದಾರ್ ಮಧುರಾಜ, ತಾಪಂ ಇಒ ಮಲ್ಲಿಕಾರ್ಜುನ ಬಡಿಗೇರ, ತಾಲೂಕುಮಟ್ಟದ ಅಧಿಕಾರಿಗಳು ಇದ್ದರು.