ಭಾರತದ ಆತ್ಮಭಾಷೆ ಸಂಸ್ಕೃತದಲ್ಲಿದೆ ವಿಜ್ಞಾನದ ಮೂಲ

The origin of science lies in Sanskrit, the native language of India
ಮಹಾಲಿಂಗಪುರದ ಎಸ್‌ಸಿಪಿ ಪ್ರೌಢಶಾಲೆಯಲ್ಲಿ ಅಸ್ಮಾಕಂ ಸಂಸ್ಕೃತಂ ಸರಣ ಕಾರ್ಯಕ್ರಮ ನಡೆಯಿತು. ವಿಜಯಪುರದ ಸಂಸ್ಕೃತ ಸಾಧಕ ಸಿದ್ದಲಿಂಗ ಆಚಾರ್ಯ,ಉಪಪ್ರಾಂಶುಪಾಲ ಬಿ.ಎನ್.ಅರಕೇರಿ, ಮುಖ್ಯಶಿಕ್ಷಕಿ ಎಂ.ಎಸ್.ಮಗದುಂ ಇದ್ದರು.
Published on

ಮಹಾಲಿಂಗಪುರ: ಸಂಸ್ಕೃತ ಭಾಷೆಯ ಗ್ರಂಥಗಳಲ್ಲಿ ಮತ್ತು ಸನಾತನ ಸಂಸ್ಕೃತಿಯ ಆಚರಣೆಯಲ್ಲಿ ವೈಜ್ಞಾನಿಕ ತಳಹದಿ ಹಿನ್ನೆಲೆ ಇದ್ದೇ ಇರುತ್ತದೆ. ಸಂಸ್ಕೃತದಲ್ಲಿರುವ ವಿಚಾರಗಳೇ ಬದಲಾದ ರೂಪದಲ್ಲಿ ವಿಜ್ಞಾನದ ಸ್ವರೂಪ ಪಡೆಯುತ್ತಿವೆ ಎಂದು ವಿಜಯಪುರದ ಸಂಸ್ಕೃತ ಸಾಧಕ ಸಿದ್ದಲಿಂಗ ಆಚಾರ್ಯ ಹೇಳಿದರು.

ಸ್ಥಳೀಯ ಎಸ್‌ಸಿಪಿ ಪ್ರೌಢಶಾಲೆಯಲ್ಲಿ ಇತ್ತೀಚೆಗೆ ಜರುಗಿದ ಅಸ್ಮಾಕಂ ಸಂಸ್ಕೃತಂ ಸರಣ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಭಾರತದ ಆತ್ಮಭಾಷೆಯಾದ ಸಂಸ್ಕೃತದಲ್ಲಿ ವಿಜ್ಞಾನದ ಮೂಲ ಅಡಗಿದೆ ಎಂದರು.

ಉಪನ್ಯಾಸಕ ಶಿವಲಿಂಗ ಸಿದ್ನಾಳ ಮಾತನಾಡಿ, ಸಂಸ್ಕೃತ ಭಾಷೆ ಎಲ್ಲ ಭಾಷೆಗಳ ತಾಯಿಯಾಗಿದೆ. ಶ್ರೇಷ್ಠ ಭಾಷೆ ಬಗ್ಗೆ ವಿದೇಶಗಳಲ್ಲಿ ಸಂಶೋಧನೆಗಳು ನಡೆಯುತ್ತಿವೆ. ಆದರೆ ಭಾರತದಲ್ಲಿ ಈ ಭಾಷೆ ಉದಾಸೀನಕ್ಕೊಳಗಿರುವುದು ದುರದೃಷ್ಟಕರ. ಎಲ್ಲ ಶಾಲೆ, ಕಾಲೇಜುಗಳಲ್ಲಿ ಸಂಸ್ಕೃತ ಕಡ್ಡಾಯ ಕಲಿಕಾ ಭಾಷೆಯಾಗಬೇಕು ಎಂದರು.

ಬೆಂಗಳೂರಿನ ಸಂಸ್ಕೃತ ಶಿಕ್ಷಣ ನಿರ್ದೇಶನಾಲಯ, ಮಹಾಲಿಂಗಪುರದ ಅಮರವಾಣಿ ಸಂಸ್ಕೃತ ಪಾಠಶಾಲೆ, ಅಕ್ಕಿಮರಡಿಯ ಸಂಗಮೇಶ್ವರ ಸಂಸ್ಕೃತ ಪಾಠಶಾಲೆ, ಹುನ್ನೂರಿನ ಭುವನೇಶ್ವರಿ ಸಂಸ್ಕೃತ ಪಾಠಶಾಲೆ,ಮಹಾಲಿಂಗಪುರದ ಎಸ್‌ಸಿಪಿ ಪ್ರೌಢಶಾಲೆ ಆಶ್ರಯದಲ್ಲಿ ನಡೆದ ಕಾರ್ಯಕ್ರಮಕ್ಕೂ ಮುನ್ನ ಸಂಸ್ಕೃತ ಭಾಷಾ ಘೋಷಣಾ ಲಕಗಳನ್ನು ಪ್ರದರ್ಶಿಸುತ್ತ ನಾಲ್ಕೂ ಶಾಲೆಗಳ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಪಟ್ಟಣದಲ್ಲಿ ಜಾಗೃತಿ ಮೂಡಿಸಿದರು.

ವಿದ್ಯಾರ್ಥಿಗಳು ಸಂಸ್ಕೃತ ಶ್ಲೋಕ ಹೇಳಿದರು. ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಅತಿಥಿಗಳಿಗೆ ತಲಾ ಒಂದೊಂದು ಭಗವದ್ಗೀತೆ ಕೈಪಿಡಿ ಮತ್ತು ಹೂವಿನ ಗಿಡ ವಿತರಿಸಿ ಗೌರವಿಸಲಾಯಿತು. ಎಸ್‌ಸಿಪಿ ಪ್ರೌಢಶಾಲೆ ಉಪಪ್ರಾಂಶುಪಾಲ ಬಿ.ಎನ್.ಅರಕೇರಿ ಅಧ್ಯಕ್ಷತೆ ವಹಿಸಿದ್ದರು. ನಿವತ್ತ ಶಿಕ್ಷಕರಾದ ಎಸ್.ಐ.ಬಾಳಿಗಿಡದ, ಎಸ್.ಎಸ್.ಜಗದಾಳ, ಎಸ್.ಜಿ.ಯಾದವಾಡ, ಮುಖ್ಯ ಶಿಕ್ಷಕಿ ಎಂ.ಎಸ್.ಮಗದುಂ, ವಿ.ಕೆ.ನೀಲಕಂಠಮಠ, ಜೆ.ಸಿ.ಬೆಟಗೇರಿ, ಎಸ್.ಐ. ಕಂದಗಲ್ಲ, ಮಹಾಂತೇಶ ಅಂಗಡಿ, ಎಸ್.ಎಚ್.ಪುರಾಣಿಕ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net