

ಮಂಗಳೂರು: ಚಿಲಿಂಬಿ ಹಿಲ್ಸ್ ಸಾಮಾಜಿಕ, ಶೈಕ್ಷಣಿಕ ಹಾಗೂ ಸಾಂಸ್ಕೃತಿಕವಾಗಿ ಅಭಿವೃದ್ಧಿ ಹೊಂದಿದ ಆದರ್ಶನಗರವಾಗಿ ಬೆಳೆಯಲು ಅಸೋಸಿಯೇಶನಿನ ಸ್ಥಾಪಕ ಅಧ್ಯಕ್ಷ ದಿ.ಪಿ.ಕೆ.ಭಾಸ್ಕರ್ ನೇತೃತ್ವದ ಅಂದಿನ ಹಿರಿಯರ ಸಾಮಾಜಿಕ ಅಭಿವೃದ್ಧಿ ಪರ ಕೆಲಸ ಕಾರ್ಯಗಳು ಮಹತ್ವದ ಪಾತ್ರ ವಹಿಸಿವೆ ಎಂದು ಕಾರ್ಪೊರೇಟರ್ ಎಂ.ಶಶಿಧರ ಹೆಗ್ಡೆ ಹೇಳಿದರು.
ಚಿಲಿಂಬಿ ಹಿಲ್ಸ್ ಮೈದಾನದಲ್ಲಿ ಇತ್ತೀಚೆಗೆ ಜರಗಿದ ಚಿಲಿಂಬಿ ಆದರ್ಶನಗರ ಆದರ್ಶ್ ಫ್ರೆಂಡ್ಸ್ ಅಸೋಸಿಯೇಶನ್‌ನ 46ನೇ ವಾರ್ಷಿಕ ಸಾಧನಾ ಸಂಭ್ರಮ ಶಿಕ್ಷಣ ಆರೋಗ್ಯ ನಿಧಿಯ ಸಮರ್ಪಣೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಉದ್ಯಮಿ ಕರುಣಾಕರನ್ ಕಾರ್ಯಕ್ರಮ ಉದ್ಘಾಟಿಸಿದರು.
ಮುಖ್ಯ ಅತಿಥಿ ಮಂಗಳೂರು ಮಹಾನಗರ ಪಾಲಿಕೆ ಪ್ರತಿಪಕ್ಷದ ನಾಯಕ ಅನಿಲ್ ಕುಮಾರ್, ಮಂಗಳೂರು ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರಕಾಶ್ ಸಾಲ್ಯಾನ್, ಉದ್ಯಮಿ ಮೋಹನ್‌ದಾಸ್ ವಾಮಂಜೂರು, ಉದ್ಯಮಿ ಅಕ್ಷಯ ಬಂಗೇರ, ವಕೀಲ ವಾಸುದೇವ ಗೌಡ ಭಾಗವಹಿಸಿದ್ದರು.
ಆದರ್ಶ್ ಫ್ರೆಂಡ್ಸ್ ಅಸೋಸಿಯೇಶನ್ ಅಧ್ಯಕ್ಷ ರವಿಪೂಜಾರಿ ಚಿಲಿಂಬಿ ಸ್ವಾಗತಿಸಿದರು. ಕಾರ್ಯದರ್ಶಿ ಶುಭರಾಜೇಂದ್ರ ವರದಿ ವಾಚಿಸಿದರು. ರಾಜೇಂದ್ರ ಚಿಲಿಂಬಿ ಹಾಗೂ ಲವೀನಾ ಪೂಜಾರಿ ನಿರ್ವಹಿಸಿದರು. ಮಹಿಳಾ ಉಪಾಧ್ಯಕ್ಷೆ ಸುಜಾತಾ ರಾಜೇಶ್ ವಂದಿಸಿದರು. ಆದರ್ಶ್ ಫ್ರೆಂಡ್ಸ್ ಅಸೋಸಿಯೇಶನ್ ಸದಸ್ಯರಿಂದ ಸಾಂಸ್ಕೃತಿಕ ವೈಭವ ಹಾಗೂ ‘ಅಷ್ಟೆಮಿ’ ಸಾಮಾಜಿಕ ನಾಟಕ ಪ್ರದರ್ಶನ ಗೊಂಡಿತು.