ಅಂಧತ್ವ ಮುಕ್ತ ಸಮಾಜ ನಿರ್ಮಾಣಕ್ಕೆ ಸಂಸ್ಥೆ ಕೊಡುಗೆ ಅಪಾರ

blg-23-1
ಬಾಡಗಂಡಿ ಎಸ್.ಆರ್. ಪಾಟೀಲ ವೈದ್ಯಕೀಯ ಮಹಾವಿದ್ಯಾಲಯ ಹಾಗೂ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದಲ್ಲಿ ರಾಷ್ಟೀಯ ರೈತರ ದಿನಾಚಾರಣೆ ಪ್ರಯುಕ್ತ ಉಚಿತವಾಗಿ ನೇತ್ರ ತಪಾಸಣೆ ಹಾಗೂ ಶಸಚಿಕಿತ್ಸೆ ಮತ್ತು ಮನೋರೋಗ ತಪಾಸಣೆ ಶಿಬಿರ ಕಾರ್ಯಕ್ರಮವನ್ನು ಜಿಲ್ಲಾ ನೋಂದಣಿ ಅಧಿಕಾರಿ ಎಸ್.ಜಿ. ನ್ಯಾಮಗೌಡ ಉದ್ಘಾಟಿಸಿದರು. ಕಾರ್ಯದರ್ಶಿ ಎಂ.ಎನ್. ಪಾಟೀಲ, ಡೀನ್ ಡಾ. ಧರ್ಮರಾಯ ಇಂಗಳೆ, ವೈದ್ಯಕೀಯ ಅಧೀಕ್ಷಕರು ಡಾ. ವಿಜಯಾನಂದ ಹಳ್ಳಿ, ಆಡಳಿತಾಧಿಕಾರಿ ಡಾ. ರಾಘವೇಂದ್ರ ಪಾಟೀಲ, ನಿರ್ದೇಶಕ ಅನುಷಾ ಪಾಟೀಲ ಇದ್ದರು.
Published on

ಬೀಳಗಿ: ಕಣ್ಣುಗಳಿಲ್ಲದಿದ್ದರೆ ಜಗತ್ತೇ ಶೂನ್ಯ. ಅಂಧತ್ವ ಮುಕ್ತ ಸುಂದರ ಸ್ವಾಸ್ಥೃ ಸಮಾಜ ನಿರ್ಮಾಣಕ್ಕೆ ಎಸ್. ಆರ್. ಪಾಟೀಲ ಸಂಸ್ಥೆ ಮುಂಚೂಣಿಯಲ್ಲಿರುವುದು ಶ್ಲಾಘನೀಯ ಎಂದು ಜಿಲ್ಲಾ ನೋಂದಣಿ ಅಧಿಕಾರಿ ಎಸ್.ಜಿ. ನ್ಯಾಮಗೌಡ ಹೇಳಿದರು.

ಬಾಡಗಂಡಿ ಎಸ್.ಆರ್. ಪಾಟೀಲ ವೈದ್ಯಕೀಯ ಮಹಾವಿದ್ಯಾಲಯ ಹಾಗೂ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದಲ್ಲಿ ಸೋಮವಾರ ರಾಷ್ಟೀಯ ರೈತರ ದಿನಾಚಾರಣೆ ಪ್ರಯುಕ್ತ ಉಚಿತವಾಗಿ ನೇತ್ರ ತಪಾಸಣೆ ಹಾಗೂ ಶಸಚಿಕಿತ್ಸೆ ಮತ್ತು ಮನೋರೋಗ ತಪಾಸಣೆ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.

ಸಂಸ್ಥೆಯ ಕಾರ್ಯದರ್ಶಿ ಎಂ.ಎನ್. ಪಾಟೀಲ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಂಸ್ಥೆ ಸಂಸ್ಥಾಪಕ ಅಧ್ಯಕ್ಷ ಎಸ್.ಆರ್. ಪಾಟೀಲ ಅವರು ತಮ್ಮ ಜೀವನದುದ್ದಕ್ಕೂ ಸಾಮಾಜಿಕ ಚಿಂತನೆ, ರಾಜಕೀಯ, ಸಹಕಾರಿ, ಔದ್ಯೋಗಿಕ ಕ್ಷೇತ್ರದಲ್ಲಿ ತೊಡಗಿಕೊಂಡು ಉತ್ತರ ಕರ್ನಾಟಕ ಭಾಗದ ಜನರು ಆರೋಗ್ಯವಾಗಿರಬೇಕು. ಯಾವುದೇ ಸಮಸ್ಯೆಯಿಂದ ಅನಾರೋಗ್ಯದಿಂದ ಬಳಬಾರದೆಂದು ಮನಗಂಡು ಹೈಟೆಕ್ ಆಸ್ಪತ್ರೆ ತೆರೆಯುವ ಮೂಲಕ ಈ ಭಾಗದವರಿಗೆ ಆರೋಗ್ಯ ಸಂಜೀವಿನಿಯಾಗಿದ್ದಾರೆ ಎಂದು ತಿಳಿಸಿದ್ದಾರೆ.

ಶಿಬಿರದಲ್ಲಿ 400ಕ್ಕೂ ಅಧಿಕ ಜನರು ಕಣ್ಣಿನ ಪರೀಕ್ಷೆ ಮಾಡಿಸಿಕೊಂಡರು. ಇದರಲ್ಲಿ 110 ಜನರು ಶಸ್ತ್ರಚಿಕಿತ್ಸೆ ಪಡೆದುಕೊಳ್ಳಲಿದ್ದಾರೆ. ಶಿಬಿರಾರ್ಥಿಗಳಿಗೆ ಉಚಿತ ಔಷಧೋಪಚಾರ ಮಾಡಲಾಯಿತು.

ಎಸ್.ಆರ್. ಪಾಟೀಲ ವೈದ್ಯಕೀಯ ಮಹಾ ವಿದ್ಯಾಲಯ ಹಾಗೂ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ಡೀನ್ ಡಾ. ಧರ್ಮರಾಯ ಇಂಗಳೆ, ವೈದ್ಯಕೀಯ ಅಧಿಕ್ಷಕರು ವಿಜಯಾನಂದ ಹಳ್ಳಿ, ಆಡಳಿತಾಧಿಕಾರಿ ಡಾ. ರಾಘವೇಂದ್ರ ಪಾಟೀಲ, ವೈದ್ಯಕೀಯ ಉಪ ಅಧೀಕ್ಷಕರು ಜಯಶ್ರೀ ಎಮ್ಮಿ, ಚೀಫ್ ಅಂಕೌಂಟಂಟ್ ಅಶೋಕ ದಾಮ್ಮಿ, ನಿರ್ದೇಶಕ ಅನುಷಾ ಪಾಟೀಲ, ಡಾ. ಮಹಾಂತೇಶ ಹಲ್ಲಿ, ಡಾ. ಪೂರ್ಣಿಮಾ ಚಿಮ್ಮನಕಟ್ಟಿ, ನರಸಿಂಗ್ ಶುಶುಕರ ಅಧೀಕ್ಷಕ ಮಲ್ಲಪ್ಪ ಸಂತೋಷಜಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net