ಸಮಾಜಮುಖಿ ಕಾರ್ಯಗಳಿಂದ ಸಂಘಟನೆ ಜೀವಂತ

3 ಎಸ್ಜೆಪಿ 2
ಕನ್ನಡ ಯುವಕ ಸಂಘದ ಅಧ್ಯಕ್ಷರಾಗಿ ಆಯ್ಕೆಯಾದ ರಾಜು ಅವರನ್ನು ಪುರಸಭೆ ಸದಸ್ಯ ಉಳ್ಳಿದರ್ಶನ ಗೌರವಿಸಿದರು. ಬಡಗಿ ಪಾಲಾಕ್ಷಪ್ಪ. ಸ.ನ.ಮಂಜಪ್ಪ. ಬೆಣ್ಣೆ ಪ್ರವೀಣ, ಭಂಡಾರಿ ಮಾಲತೇಶ್, ಸುರೇಶ್ ಹೂವಿನಮಂಡಿ ಇತರರಿದ್ದರು.
Published on

ಶಿಕಾರಿಪುರ: ಕನ್ನಡ ಸಂಘ ತನ್ನದೇ ಆದ ಸೇವಾ ಕಾರ್ಯಗಳಿಂದ ಜನಮನ ಗೆದ್ದಿದೆ. ಸಮಾಜಮುಖಿ ಕಾರ್ಯಗಳಿಂದ ಸಂಘಟನೆಗಳು ಸದಾ ಜೀವಂತವಾಗಿರುತ್ತವೆ ಎಂದು ಪುರಸಭೆ ಸದಸ್ಯ ಉಳ್ಳಿ ದರ್ಶನ್ ಹೇಳಿದರು.

ಸೋಮವಾರ ಉಳ್ಳಿ ಕಾಂಪ್ಲೆಕ್ಸ್‌ನಲ್ಲಿ ಕನ್ನಡ ಸಂಘದ ನೂತನ ಅಧ್ಯಕ್ಷ ರಾಜು ಅವರನ್ನು ಅಭಿನಂದಿಸಿ ಮಾತನಾಡಿದ ಅವರು, ಹೊಸ ಅಧ್ಯಕ್ಷರ ಅವಧಿಯಲ್ಲಿ ಹೆಚ್ಚಿನ ಸಾಮಾಜಿಕ ಹಾಗೂ ಸೇವಾ ಕಾರ್ಯಗಳು ನಡೆಯಲಿ. ಕನ್ನಡ ಸಂಘ ನಾಡುನುಡಿಯ ರಕ್ಷಣೆಗೆ ಬದ್ಧವಾಗಿದೆ ಎಂದರು.
ನೂತನ ಅಧ್ಯಕ್ಷ ರಾಜು ಮಾತನಾಡಿ, ಎಲ್ಲರ ಸಹಕಾರ ಹಾಗೂ ಮಾರ್ಗದರ್ಶನದಿಂದ ಹೆಚ್ಚಿನ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು. ಕನ್ನಡದ ಕಾರ್ಯಗಳಿಗೆ ಸಂಘ ಕಟಿಬದ್ಧವಾಗಿದೆ. ಕನ್ನಡದ ನೆಲ, ಜಲ ಭಾಷೆಗಾಗಿ ಸಂಘಟನೆ ನಿರಂತರ ಕಾರ್ಯಕ್ರಮ ಆಯೋಜಿಸುತ್ತಿದೆ ಎಂದು ಹೇಳಿದರು.
ಅಜೀವ ಸದಸ್ಯರ ಸಂಘದ ಅಧ್ಯಕ್ಷ ಬಡಗಿ ಪಾಲಾಕ್ಷಪ್ಪ, ಗೌರವಾಧ್ಯಕ್ಷ ಸ.ನ.ಮಂಜಪ್ಪ. ಬೆಣ್ಣೆ ಪ್ರವೀಣ್, ಭಂಡಾರಿ ಮಾಲತೇಶ್, ಸುರೇಶ್ ಹೂವಿನಮಂಡಿ, ಗುಡ್ಡಳ್ಳಿ ಸುರೇಶ್, ನಗರದ ಮಾಲತೇಶ್, ಚೋರಡಿ ಗಿಡ್ಡೇಶ್, ಸಂದೀಪ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net