ಸಿಬ್ಬಂದಿ ಶ್ರಮದಿಂದ ಸಂಸ್ಥೆ ಏಳಿಗೆ ಸಾಧ್ಯ

The organization can prosper through the hard work of its staff.
ಬೀಳಗಿ ಪಟ್ಟಣ ಸಹಕಾರಿ ಬ್ಯಾಂಕಿನ ಪ್ರಧಾನ ವ್ಯವಸ್ಥಾಪಕ ಎಲ್.ಬಿ. ಕುರ್ತಕೋಟಿ ಸೇವಾ ನಿವೃತ್ತಿ ಹೊಂದಿದ ಪ್ರಯುಕ್ತ ಬ್ಯಾಂಕಿನ ಸಭಾಭವನದಲ್ಲಿ ದಂಪತಿಯನ್ನು ಸನ್ಮಾನಿಸಿ ಬೀಳ್ಕೊಡಲಾಯಿತು. ಸಂಸ್ಥೆಯ ಅಧ್ಯಕ್ಷ ಎಸ್.ಆರ್. ಪಾಟೀಲ, ಕಾರ್ಯದರ್ಶಿ ಎಂ.ಎನ್. ಪಾಟೀಲ ಇತರರಿದ್ದಾರೆ.
Published on

ಬೀಳಗಿ: ಸಹಕಾರಿ ಕ್ಷೇತ್ರದಲ್ಲಿನ ಆಡಳಿತ ಮಂಡಳಿ ನಿರ್ದೇಶಕರ ಸಲಹೆ, ಸೂಚನೆಗಳು, ಬ್ಯಾಂಕಿನ ಪ್ರಧಾನ ವ್ಯವಸ್ಥಾಪಕರಿಂದ ಸಿಪಾಯಿವರೆಗೆ ಎಲ್ಲ ಸಿಬ್ಬಂದಿ ನಿಷ್ಠೆ, ಬದ್ಧತೆ, ಪ್ರಮಾಣಿಕತೆಯಿಂದ ಗ್ರಾಹಕರ ವಿಶ್ವಾಸ ಗಳಿಸಿದ್ದರಿಂದ ಬೀಳಗಿ ಪಟ್ಟಣ ಸಹಕಾರಿ ಬ್ಯಾಂಕ್ ನೂರಾರು ಕೋಟಿ ರೂ. ವಹಿವಾಟ ನಡೆಸುವುದಕ್ಕೆ ಸಾಧ್ಯವಾಗಿದೆ ಎಂದು ಬ್ಯಾಂಕಿನ ಸಂಸ್ಥಾಪಕ ಅಧ್ಯಕ್ಷ ಎಸ್.ಆರ್. ಪಾಟೀಲ ಹೇಳಿದರು.

ಬೀಳಗಿ ಪಟ್ಟಣ ಸಹಕಾರಿ ಬ್ಯಾಂಕಿನ ಪ್ರಧಾನ ವ್ಯವಸ್ಥಾಪಕ ಎಲ್.ಬಿ. ಕುರ್ತಕೋಟಿ ಸೇವಾ ನಿವೃತ್ತಿ ಹೊಂದಿದ ಪ್ರಯುಕ್ತ ಬ್ಯಾಂಕಿನ ಸಭಾಭವನದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಬೀಳ್ಕೊಡುಗೆ ಹಾಗೂ ಅಭಿನಂದನಾ ಸಮಾರಂಭ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು.

ಆರ್ಥಿಕವಾಗಿ ಹಿಂದುಳಿದ ಜನರಿಗೆ ಸಹಾಯ, ಸಹಕಾರ ನೀಡುವ ನಿಟ್ಟಿನಲ್ಲಿ ಸಹಕಾರಿ ಕ್ಷೇತ್ರದ ಬ್ಯಾಂಕ್‌ಗಳು ಮಹತ್ವದ ಪಾತ್ರವಹಿಸುತ್ತವೆ. ಎಲ್.ಬಿ. ಕುರ್ತಕೋಟಿ ಅವರು ಪರಿಶ್ರಮದಿಂದ ಬ್ಯಾಂಕ್ ಬೃಹತ್ ಆಕಾರದಲ್ಲಿ ಬೆಳೆದಿದೆ ಎಂದರು.

ಎಸ್.ಆರ್. ಪಾಟೀಲ ಶಿಕ್ಷಣ ಪ್ರತಿಷ್ಠಾನ ಸಂಸ್ಥೆಯ ಕಾರ್ಯದರ್ಶಿ ಎಂ.ಎನ್.ಪಾಟೀಲ ಮಾತನಾಡಿ, 1997ರಿಂದ ಬ್ಯಾಂಕಿನ ವ್ಯವಹಾರದಲ್ಲಿ ಎಲ್.ಬಿ. ಕುರ್ತಕೋಟಿ ಶ್ರಮಿಸಿ ಬ್ಯಾಂಕಿನ ಪ್ರಗತಿಗೆ ಸಾಕ್ಷಿಯಾಗಿದ್ದಾರೆ. ಅವರು ಬ್ಯಾಂಕಿನ ವ್ಯವಹಾರದ ಜತೆಗೆ ಸಕ್ಕರೆ ಕಾರ್ಖಾನೆ, ಶಿಕ್ಷಣ ಸಂಸ್ಥೆಯಲ್ಲಿ ತಮ್ಮ ಸೇವೆಯನ್ನು ಸರ್ಮಪಣೆ ಮಾಡಿದ್ದಾರೆ. ವ್ಯಕ್ತಿಯ ಕಾರ್ಯ ಕೆಲಸದಿಂದ ಸ್ಥಾನಮಾನ ಹಾಗೂ ವ್ಯಕ್ತಿತ್ವದಿಂದ ಗೌರವ ಸಿಗುತ್ತದೆ ಎಂದರು.

ಬೀಳಗಿ ಪಟ್ಟಣ ಸಹಕಾರಿ ಬ್ಯಾಂಕಿನ ಪ್ರಧಾನ ವ್ಯವಸ್ಥಾಪಕರಾಗಿ ನಿವೃತ್ತಿ ಹೊಂದಿದ ಎಲ್.ಬಿ. ಕುರ್ತಕೋಟಿ ಸನ್ಮಾನ ಸ್ವೀಕರಿಸಿ ಮಾತನಾಡಿ, ಬ್ಯಾಂಕನ್ನು ತಾಯಿಯ ಸ್ವರೂಪಿಯಾಗಿ ಕಾಣಬೇಕು. ಅನ್ನ ಹಾಗೂ ಜೀವನ ಕೊಟ್ಟಿದೆ. ನನ್ನ ಬದುಕಿನೊದ್ದಕ್ಕೂ ಎಸ್.ಆರ್. ಪಾಟೀಲಗೆ ಋಣಿಯಾಗಿರುವೆ ಎಂದರು.

ಬ್ಯಾಂಕಿನ ಉಪಾಧ್ಯಕ್ಷ ಸತ್ಯಪ್ಪ ಮೇಲ್ನಾಡ, ಎಸ್.ಅರ್. ಪಾಟೀಲ ಶಿಕ್ಷಣ ಪ್ರತಿಷ್ಠಾನದ ಕಾರ್ಯದರ್ಶಿ ಎಂ.ಎನ್. ಪಾಟೀಲ, ದಯಾನಂದ ಪಾಟೀಲ, ಎಂ.ಎನ್. ಕೆಂಪಲಿಂಗನ್ನವರ, ಪ್ರಧಾನ ವ್ಯವಸ್ಥಾಪಕ ಜಿ.ಎಸ್. ಬನಹಟ್ಟಿ, ಬಾಪೂಜಿ ಬ್ಯಾಂಕಿನ ಸಿಇಒ ಎಸ್.ಸಿ. ಮೊಟಗಿ, ಸುರೇಶಗೌಡ ಪಾಟೀಲ, ಆರ್.ಆರ್. ಮಂಟಾ, ಎಸ್.ಜಿ. ನ್ಯಾಮಗೌಡರ, ಬಿ.ಎನ್. ನಾಗನಗೌಡರ, ಹೇಮಾದ್ರಿ ಕೊಪ್ಪಳ, ಕೆ.ಎಸ್. ಪತ್ರಿ, ರಾಜೇಂದ್ರ ಬಾರಕೇರ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net