22ಕ್ಕೆ ಗೋಪಾಳದಲ್ಲಿ ಆಧ್ಯಾತ್ಮ ಸಿನಿಮಾದ ಮುಹೂರ್ತ

Adhyatma Cinema team
Published on

ಶಿವಮೊಗ್ಗ: ಅನು ಪ್ರೊಡಕ್ಷನ್ಸ್ ಬ್ಯಾನ ಅಡಿ ಶಿವಮೊಗ್ಗದ ಎಸ್.ಎಂ.ಪ್ರಜ್ವಲ್ ಶೆಟ್ಟಿ ನಿರ್ಮಾಣದ ಆಧ್ಯಾತ್ಮ ಸಿನಿಮಾದ ಮುಹೂರ್ತವು ಸೆ.22ರಂದು ಬೆಳಗ್ಗೆ 9ಕ್ಕೆ ಗೋಪಾಳದ ದ್ರೌಪದಮ್ಮ ದೇವಸ್ಥಾನದಲ್ಲಿ ನಡೆಯಲಿದೆ ಎಂದು ಚಿತ್ರದ ನಿರ್ದೇಶಕ ಎನ್.ಎಸ್.ರಾಣಾ ಹೇಳಿದರು.

ಪ್ರಜ್ವಲ್ ಶೆಟ್ಟಿ, ಅನು ಶೆಟ್ಟಿ ಸೇರಿ ಸಮಾನ ಮನಸ್ಕರು ಸೇರಿ ಚಿತ್ರ ನಿರ್ಮಾಣ ಮಾಡುತ್ತಿದ್ದೇವೆ. ಇದೊಂದು ಹಾರರ್ ಕಥಾ ಹಂದರದ ಚಿತ್ರ. ಅನೇಕ ಕುತೂಹಲದ ಅಂಶಗಳು ಚಿತ್ರದಲ್ಲಿವೆ. ಮುಖ್ಯ ಪಾತ್ರವೇ ಕಥೆಯಾಗಿದ್ದು, ಅದರ ಸುತ್ತ ಅನೇಕ ಪಾತ್ರಗಳು ಬರುತ್ತವೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ನಟಿ ಅನು ಶೆಟ್ಟಿ ಮಾತನಾಡಿ, ಸಿನಿಮಾ ಮೂಹರ್ತ ಕಾರ್ಯಕ್ರಮಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ, ಮಾಜಿ ಶಾಸಕ ಕೆ.ಬಿ.ಪ್ರಸನ್ನಕುಮಾರ್, ಡಿಸಿಸಿ ಬ್ಯಾಂಕ್ ನಿರ್ದೇಶಕ ಎಂ.ಶ್ರೀಕಾಂತ್, ಸೂಡಾ ಅಧ್ಯಕ್ಷ ಎಚ್.ಎಸ್.ಸುಂದರೇಶ್, ಡಿವೈಎಸ್‌ಪಿ ಅಂಜನಪ್ಪ ಬಾಬು ಹಾಗೂ ಕುಂಸಿ ಠಾಣೆ ಇನ್‌ಸ್ಪೆಕ್ಟರ್ ಎಂ.ಎಸ್.ದೀಪಕ್ ಮುಖ್ಯ ಅತಿಥಿಯಾಗಿದ್ದಾರೆ ಎಂದರು.

ಸೆ.22ರಿಂದಲೇ ಚಿತ್ರದ ಚಿತ್ರೀಕರಣ ಶುರುವಾಗಲಿದೆ. ಕುಂಸಿ, ಆಯನೂರು, ರಿಪ್ಪನ್‌ಪೇಟೆ, ಬಾಳೆ ಹೊನ್ನೂರು, ಶಿವಮೊಗ್ಗ, ಭದ್ರಾವತಿ ರಸ್ತೆಗಳಲ್ಲಿ ತ್ರೀಕರಣ ನಡೆಯಲಿದೆ. ಶಿವಮೊಗ್ಗದಲ್ಲಿ ಚಿತ್ರದ ನಿರ್ಮಾಣಕ್ಕೆ ಒಳ್ಳೆಯ ಪ್ರತಿಕ್ರಿಯೆ ಸಿಗುತ್ತಿದೆ ಎಂದರು. ನಿರ್ಮಾಪಕ ಎಸ್.ಎಂ.ಪ್ರಜ್ವಲ್ ಶೆಟ್ಟಿ, ಕಲಾವಿದರಾದ ಯಶಸ್ವಿನಿ, ಹರ್ಷಿತಾ, ಸೂರಿ, ದಾನಂ, ಪೊಲೀಸ್ ಚಂದು ಸತೀಶ್, ಚಿರಂಜೀವಿ ಬಾಬು ಸುದ್ದಿಗೋಷ್ಠಿಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net