

ಶಿರಾಳಕೊಪ್ಪ: ದೇವರಾಜ ಅರಸು ನಂತರ ನಾಡುಕಂಡ ದಿಟ್ಟ ಮತ್ತು ಹೋರಾಟದ ಸ್ವಾಭಿಮಾನಿ ವ್ಯಕ್ತಿ ಎಂದರೆ ಸಿದ್ದರಾಮಯ್ಯ. ನಮಗೆ ಗೊತ್ತಿರುವಂತೆ ಐದು ಯೋಜನೆ ತಂದಿರುವ ಸರ್ಕಾರವನ್ನು ಟೀಕೆ ಮಾಡಿ. ಸರ್ಕಾರ ಬಿದ್ದು ಹೋಗುತ್ತದೆ ಎಂದು ಬೊಬ್ಬೆ ಹಾಕಿದವರು ಸರ್ಕಾರ ತಂದ ಬಸ್ಸಿನ ಯೋಜನೆಯ ಮೊದಲ ಉಪಯೋಗ ಪಡೆದರು ಎಂದು ಪುರಸಭೆ ಸದಸ್ಯ ತಡಗಣಿ ರಾಜಣ್ಣ ಹೇಳಿದರು. ಪಟ್ಟಣದಲ್ಲಿ ಗೃಹಲಕ್ಷ್ಮೀ ಯೋಜನೆ ಚಾಲನೆ ಕಾರ್ಯಕ್ರಮದಲ್ಲಿ ಮಾತನಾಡಿ, ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳು ರಾಜ್ಯದ ಹಿಂದು, ಸಿಖ್, ಕ್ರಿಶ್ಚಿಯನ್, ಮುಸ್ಲಿಮರು ಸೇರಿದಂತೆ ಎಲ್ಲ ಬಡವರಿಗೆ ದೊರಕುತ್ತಿದೆ ಎಂದರು. ಪುರಸಭೆ ಮುಖ್ಯಾಧಿಕಾರಿ ಹೇಮಂತ್ ಡೊಳ್ಳೆ, ಪುರಸಭೆ ಸದಸ್ಯರು ಇದ್ದರು. ಪುರಸಭೆ, ಬಸ್ ನಿಲ್ದಾಣ ಹಾಗೂ ಅಕ್ಕಿಪೇಟೆಯ ಶಾದಿಮಹಲ್‌ನಲ್ಲಿ ನೇರ ಪ್ರಸಾರ ವೀಕ್ಷಣೆಗೆ ವ್ಯವಸ್ಥೆ ಮಾಡಲಾಗಿತ್ತು.