ಮೀನುಗಾರಿಕೆಗೆ ಹೋಗಿದ್ದವ ಕಣ್ಮರೆ

Crime Logo
Published on

ಹೊನ್ನಾವರ: ಶರಾವತಿ ನದಿಯಲ್ಲಿ ಮೀನುಗಾರಿಕೆಗೆ ಹೋಗಿದ್ದ ಬಾಲಕ ಕಾಲು ಜಾರಿ ಬಿದ್ದು ಕಣ್ಮರೆಯಾದ ಘಟನೆ ತಾಲೂಕಿನ ಕಾಸರಕೋಡಿನಲ್ಲಿ ನಡೆದಿದೆ.

ಕಾಸರಕೋಡಿನ ಪ್ರಜ್ವಲ್ ಮಾಹಾಬಲೇಶ್ವರ ಖಾರ್ವಿ (16) ಬುಧವಾರ ರಾತ್ರಿ ನದಿಯಲ್ಲಿ ಬಿದ್ದು ಕಣ್ಮರೆಯಾಗಿದ್ದಾನೆ. ಮಗನನ್ನು ಹುಡುಕಿಕೊಂಡುವಂತೆ ಹೊನ್ನಾವರ ಠಾಣೆಯಲ್ಲಿ ತಂದೆ ಮಹಾಬಲೇಶ್ವರ ಖಾರ್ವಿ ದೂರು ಸಲ್ಲಿಸಿದ್ದಾರೆ. ಪ್ರಜ್ವಲನ ಪತ್ತೆಗಾಗಿ ಸ್ಥಳೀಯ ಮೀನುಗಾರರು, ಅಗ್ನಿ ಶಾಮಕದಳದ ಸಿಬ್ಬಂದಿ, ಮುಳುಗು ತಜ್ಞರು ಕಾರ್ಯಾಚರಣೆ ನಡೆಸುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net