ಚಾಕುವಿನಿಂದ ಇರಿದಿದ್ದವರು ಅಂದರ್

crime
Published on

ಹುಬ್ಬಳ್ಳಿ: ವೈಯಕ್ತಿಕ ದ್ವೇಷ ಸಾಧಿಸಿ ವ್ಯಕ್ತಿಯೊಬ್ಬರಿಗೆ ಚಾಕುವಿನಿಂದ ಇರಿದಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಇಲ್ಲಿಯ ಅಶೋಕನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ದೇವಾಂಗಪೇಟೆಯ ಚಮನ್‌ಸಾಬ್ ಉಣಕಲ್ ಹಾಗೂ ಯುನೂಸ್ ನಾಯ್ಕರ್ ಬಂಧಿತರು. ವೈಯಕ್ತಿಕ ದ್ವೇಷದಿಂದ ಭೀಮರಾಜ ನರಿಯವರ ಎಂಬಾತನಿಗೆ ದೇವಾಂಗಪೇಟೆಯಲ್ಲಿ ಚಾಕುವಿನಿಂದ ಇರಿದಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net